ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಸ್ ಬ್ಯಾಕ್..!

ಸರ್ಜರಿ ಬಳಿಕ ತಿಂಗಳ ಗ್ಯಾಪ್.. 21.5ಲಕ್ಷ ಕಾರ್ಯಕರ್ತರು

Untitled design 2026 05 16T160628.757

ಒಂದು ತಿಂಗಳ ಲಾಂಗ್ ಗ್ಯಾಪ್ ಬಳಿಕ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಸ್ ಬ್ಯಾಕ್. ಯೆಸ್.. ಸರ್ಜರಿ ಮುಗಿಸಿಕೊಂಡು ಈಗ ಮತ್ತಷ್ಟು ಆರೋಗ್ಯವಾಗಿ ಆ್ಯಕ್ಟೀವ್ ಆಗಿರೋ ಪಿಕೆ, ಸಹಸ್ರಾರು ಮಂದಿ ಸಮ್ಮುಖದಲ್ಲಿ ಜನಸೇನಾ ಸಮಾವೇಷ ನಡೆಸಿದ್ದಾರೆ. ತಮ್ಮ ಹೆಲ್ತ್ ಅಪ್ಡೇಟ್ಸ್ ಜೊತೆ ತಮಿಳುನಾಡಿನಲ್ಲಿ ಸಿಎಂ ಪಟ್ಟಕ್ಕೇರಿದ ವಿಜಯ್‌ಗೆ ಟಾಂಗ್ ಕೊಟ್ಟು ಮಾತನಾಡಿದ್ದಾರೆ. ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ..

ಸೌತ್‌ನ ಸೆನ್ಸೇಷನಲ್ ಸೂಪರ್ ಸ್ಟಾರ್ ಕಮ್ ಪೊಲಿಟಿಕಲ್ ಗೇಮ್ ಚೇಂಜರ್ ಪವನ್ ಕಲ್ಯಾಣ್, ಇತ್ತೀಚೆಗೆ ಅನಾರೋಗ್ಯದಿಂದ ಬಳಲಿ, ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದು ನಿಮಗೆಲ್ಲಾ ಗೊತ್ತೇಯಿದೆ. ಅದಕ್ಕಾಗಿಯೇ ಸುಮಾರು ಒಂದು ತಿಂಗಳ ಕಾಲ ರೆಸ್ಟ್‌‌ನಲ್ಲಿದ್ದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಇದೀಗ ಜನಸೇನಾ ಸಮಾವೇಷದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ಆಂಧ್ರ ತೆಲಂಗಾಣ ಅಲ್ಲದೆ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ್, ಒರಿಸ್ಸಾ ಹೀಗೆ ಸುಮಾರು ಆರು ಅಕ್ಕ-ಪಕ್ಕದ ರಾಜ್ಯಗಳಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ಯರಿರೋದು ವಿಶೇಷ ಎಂದಿದ್ದಾರೆ. 150 ಜನರಿಂದ ಶುರುವಾದ ಜನಸೇನಾ ಇಂದು 21 ಲಕ್ಷ 50 ಸಾವಿರ ಜನಸೇನಾನಿಗಳ ಸೈನ್ಯವಾಗಿದೆ ಎಂದಿದ್ದಾರೆ. ಇದೇ ವೇಳೆಮ ತಮ್ಮ ಆರೋಗ್ಯ ಚೆನ್ನಾಗಿದೆ.. ಬಂದಾಕ್ಷಣ ಎಲ್ಲರೂ ಕೇಳಿದ್ರು. ಎಲೆಕ್ಷನ್ ಕ್ಯಾಂಪೇನ್ ವೇಳೆ ಪ್ರೀತಿಯಿಂದ ಎಲ್ಲರೂ ನನ್ನ ಭುಜ, ಕೈಗಳನ್ನ ಹಿಡಿದು ಎಳೆದಾಡಿದ್ರು. ಕೊರೋನಾ ಸಮಯದಲ್ಲಿ ನನಗೆ ಕೊರೋನಾ ಬಂದು, ಲಂಗ್ ಇನ್ಫೆಕ್ಷನ್ ಹೋಗಿರಲಿಲ್ಲ. ಹಾಗೇ ಉಳಿದಿತ್ತು. ಧೂಳಿನಲ್ಲಿ ಓಡಾಡ್ತಾ ತಮಗಾದ ಆರೋಗ್ಯ ಸಮಸ್ಯೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನನಗೆ ಸ್ಫೋರ್ಟ್ಸ್ ಟ್ರೈನಿಂಗ್ ಇರೋದ್ರಿಂದ ದೇಹ ತಡಿಯುತ್ತೆ.. ಹಾಗಾಗಿಯೇ ದೇಹದಲ್ಲಿ ಏನೇ ಆದ್ರೂ ಅಷ್ಟಾಗಿ ಗೊತ್ತಾಗಲ್ಲ. ನಿಮ್ಮ ಪ್ರೀತಿಯಿಂದ ನಾನು ತುಂಬಾ ಚೆನ್ನಾಗಿದ್ದೀನಿ.. ನಿಮ್ಮ ಪ್ರಾರ್ಥನೆಗಳು ನಿಜಕ್ಕೂ ಫಲಿಸಿವೆ ಅಂತ ಕೃತಜ್ಞತೆ ತಿಳಿಸಿದ್ದಾರೆ ಉಪ ಮುಖ್ಯಮಂತ್ರಿ.

2008ನಲ್ಲಿ ಯೂತ್ ವಿಂಗ್‌‌ನಲ್ಲಿ ಒಂದು ಸ್ಟ್ರಕ್ಚರ್‌ ಮಾಡಿಕೊಂಡಿದ್ವಿ. 12 ವರ್ಷ ನಾನು ಆ ಸ್ಟ್ರಕ್ಚರ್‌ನ ಬಹಳ ಸಡಿಲಿಕೆಯಿಂದ ಬಿಟ್ಟುಬಿಟ್ಟಿದೆ.. ಕಾಂಕ್ರೀಟ್ ರೀತಿ ಫಿಕ್ಸ್ ಮಾಡಲಿಲ್ಲ. ಮೊದಲು ನಮ್ಮ ಜೊತೆ ಪ್ರಯಾಣ ಮಾಡುವವರು ನಮ್ಮ ಸಿದ್ಧಾಂತಗಳನ್ನ ನಂಬಬೇಕು ಅಂದುಕೊಂಡೆ. ಆದ್ರೆ 12 ವರ್ಷಗಳ ಬಳಿಕ.. ನಾವು ಲೈಫ್‌ಲಾಂಗ್ ನಿಮ್ಮ ಜೊತೆ ಇರ್ತೀವಿ ಅಂದವ್ರೆಲ್ಲಾ ಬಿಟ್ಟು ಓಡಿಹೋದ್ರು. ನನ್ನ ಜನ ಸೇನಾ ಸೈನಿಕರು, ವೀರ ಮಹಿಳೆಯರು ಬಿಟ್ಟುಕೊಡಲಿಲ್ಲ.

ಕರ್ನಾಟಕದಿಂದ ಬಂದಿರೋ ಜನಸೇನಾ ಕಾರ್ಯಕರ್ಯರನ್ನ ಕೂಡ ಉದ್ದೇಶಿಸಿ ಮಾತನಾಡಿದ್ರು ಪವನ್, ಬಿಜೆಪಿ ಜೊತೆ ಅಲಯನ್ಸ್ ಕುರಿತು ಭವಿಷ್ಯದ ಬಗ್ಗೆ ಮಾತನಾಡಿದ್ರು. ಮೋದಿ ಅವರ ಮೆಸೇಜ್ ನೋಡಿದ್ರಿ ನೀವೆಲ್ಲಾ.. ಅದನ್ನ ಜನಸೇನಾ ಮೂಲಕ ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋದ್ರ ಬಗ್ಗೆ ಚರ್ಚಿಸಿದ್ರು.

ವೈಜಾಗ್‌ನಲ್ಲಿ ಒಬ್ಬ ಜನ ಸೈನಿಕ ಮಾತಾಡ್ತಾ.. ನಮ್ಮೂರಿಗೆ ನಾನೇ ಪವನ್ ಕಲ್ಯಾಣ್. ನಿಮ್ಮ ತನಕ ನಾನು ಪ್ರತಿ ವರ್ಷ ಬರಲ್ಲ ಅಣ್ಣಾ ಅಂದಾಗ.. ನಾನು ಕೋರಿಕೊಂಡಂತಹ ಪಾರ್ಟಿ ನಿರ್ಮಾಣ ಇದೇ ಅನಿಸಿತು. ಚಿಕ್ಕಬಳ್ಳಾಪುರದಿಂದ ಬಂದಂತಹ ಒಬ್ಬ ಹೆಣ್ಣು ಮಗಳು.. ಅನ್ಯಾಯದ ವಿರುದ್ಧ ಹೋರಾಡೋಕೆ ನನಗೊಂದು ಆಯುಧ ಕೊಡಣ್ಣ ಅಂದ್ಲು.. ಅದಕ್ಕಾಗಿ ನಾನು ಪಾರ್ಟಿ ಕಟ್ಟಿದೆ. ಸಿಎಂ ಆಗೋದಕ್ಕೆ ಅಲ್ಲ. ಬದಲಿಗೆ ಸಮಾಜದಲ್ಲಿ ಬದಲಾವಣೆ ತರೋದಕ್ಕಾಗಿ ಮಾತ್ರ ಎಂದರು.

ಈ ವಿಜಯ ಅನ್ನೋದು ನಮಗೆ ಸುಮ್ಮನೆ ಸಿಕ್ಕಿರೋದಲ್ಲ. ಒಂದು ದಶಕದ ಕಾಲ ಅಕ್ಷರಶಃ ನಲುಗಿದ್ದೇವೆ. ಗೂಂಡಾಯಿಸಂ, ಫ್ಯಾಕ್ಷನಿಸಂ ಗಳನ್ನ ದಾಟಿಕೊಂಡು ಈ ಹಂತಕ್ಕೆ ಬಂದಿದ್ದೇವೆ. ಈ ಮಧ್ಯೆ ಪಕ್ಕದ ರಾಜ್ಯದಲ್ಲಿ ಒಂದು ಪಾರ್ಟಿ ಇಟ್ಟು, ವಿಜಯ ಸಾಧಿಸಿ, ಸಿಎಂ ಆಗ್ತಿದ್ದಂತೆ.. ಆಂಧ್ರದಲ್ಲಿ ನೀವು ಕೂಡ ಹಾಗೆ ಮಾಡಬೇಕಾಗಿತ್ತು ಅಂತ ಸಾಕಷ್ಟು ಮಂದಿ ಮೆಸೇಜ್, ಕಾಲ್ಸ್ ಮಾಡ್ತಿದ್ದಾರೆ. ಮದ್ವೆ ಅಂದ್ರೆ ಆ ಮಾತ್ರ ಗಲಿಬಿಲಿ ಇದ್ದೇ ಇರುತ್ತೆ ಅಲ್ವಾ..? ಅರೇ ಆಂಧ್ರ ಪ್ರದೇಶದ ಪರಿಸ್ಥಿತಿಗಳೇ ಬೇರೆ. ಇವರು ಹೇಳಿದಂತೆ 2019ರಲ್ಲಿ ಎಲೆಕ್ಷನ್‌ಗೆ ನಿಂತಿದ್ವಿ. ಎರಡು ಕಡೆ ಸೋಲಿಸಿದ್ರಲ್ಲಾ. ಹೋಗಲಿ ಆ ಟೈಮಲ್ಲಿ ನಾಯಕರು ಯಾರಾದ್ರೂ ಜೊತೆಗೆ ನಿಂತ್ರಾ..? ಎಲ್ಲಾ ಓಡಿಹೋದ್ರು ಎಂದಿದ್ದಾರೆ ಪವನ್.

ಸೋ ವಿಜಯ್ ಜೊತೆ ನನ್ನನ್ನ ಹೋಲಿಕೆ ಮಾಡಬೇಡಿ ಪ್ಲೀಸ್. ಪದವಿಯೇ ನನಗೆ ಪ್ರಧಾನ ಅಂದುಕೊಂಡಿದ್ದಿದ್ರೆ, 2008ರಲ್ಲಿ ಯೂತ್ ವಿಂಗ್ ಅಲ್ಲ.. ಎಂಪಿ ಆಗಿಯೇ ಸ್ಪರ್ಧೆ ಮಾಡ್ತಿದ್ದೆ. 2014ರಲ್ಲಿ NDA ಅಲಯೆನ್ಸ್‌‌ನಲ್ಲಿ ನಾನು ಎಂಪಿಗೆ ಸ್ಪರ್ಧಿಸಬೇಕಿತ್ತು. ಆದ್ರೆ ನಾನು ಪಾರ್ಟಿ ಕಟ್ಟಬೇಕು. ಸಮಾಜದಲ್ಲಿ ಬದಲಾವಣೆ ತರಬೇಕು ಅಂದ್ರೆ ಆ ಕಷ್ಟ ಮೊದಲು ನನಗೆ ಗೊತ್ತಾಗ್ಬೇಕು ಅಲ್ಲವಾ..? ಕಮ್ಯುನಿಸ್ಟ್ ನಾಯಕರನ್ನ ನೋಡಿದ್ರೆ ಏಟೆಲ್ಲಾ ತಿಂದು ಬದುಕಿದ್ದಾರೆ. ಪಾರ್ಟಿ ಕಟ್ಟಿ ಅಧಿಕಾರಕ್ಕೆ ಬರೋದು ಓಕೆ. ಆದ್ರೆ ಅದನ್ನ ಮುನ್ನಡೆಸುವುದು ಹೇಗೆ..? ಒಂದು ಸಮೂಹವನ್ನ ನಿಮ್ಮೊಂದಿಗೆ ಮುನ್ನಡೆಸೋಕೆ ಎಷ್ಟು ಶಕ್ತಿ ಇರಬೇಕು. ನೀವು ಅದಕ್ಕೆ ಕಟ್ಟುಬಿದ್ದು ಇರ್ತೀರಾ ಇರಲ್ವಾ ಅನ್ನೋದು ಗೊತ್ತಾಗ್ಬೇಕು ಅಂತ ಪರೋಕ್ಷವಾಗಿ ದಿಢೀರ್ ಅಂತ ಸಿಎಂ ಪದವಿಗೇರಿರೋ ವಿಜಯ್‌‌ಗೆ ತಿವಿದಿದ್ದಾರೆ ಡಿಸಿಎಂ.

ಅದಕ್ಕೆ ಅಂತಲೇ ಇವುಗಳನ್ನೆಲ್ಲಾ ಮನದಲ್ಲಿ ಇಟ್ಕೊಂಡು ಒಂದು ದಶಕದ ಕಾಲ ನಾನು ನಲುಗುತ್ತೇನೆ ಅನ್ನೋದನ್ನ ಮೊದಲೇ ನಾನು ನಿರ್ಣಯಿಸಿಕೊಂಡಿದ್ದೆ. 2007ರಿಂದ ಶುರುವಾದ ಆ ಪ್ರಯಾಣ 2014, 2018ರ ತನಕ ನಡೆಯುತ್ತಲೇ ಇತ್ತು. ಆದ್ರೆ 2019ರಲ್ಲಿ ಸೋಲು, ಗೆಲುವು ಸೆಕೆಂಡರಿ.. ಪ್ರಯೋಗ ಮಾಡೋಣ ಅನಿಸಿತು. ನೋಡೋಣ ಅಂತ ಚುನಾವಣೆಗೆ ಇಳಿದ್ವಿ. ಪೆಟ್ಟು ತಿನ್ನದೆ ಸುಲಭವಾಗಿ ಏನೂ ಸಿಗದು. ಅದೇ 2024ಕ್ಕೆ ಏನಾಯ್ತು ಅಂತ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಬಗ್ಗೆಯೂ ಮಾತನಾಡಿದ್ರು.

ಒಟ್ಟಾರೆ.. ಪವನ್ ಈಗ ಮತ್ತಷ್ಟು ಮಾಗಿದ್ದಾರೆ. ಪಳಗಿದ್ದಾರೆ. ಮುಂದೊಂದು ದಿನ ಆಂಧ್ರ ಸಿಎಂ ಆಗಿ, ಅದನ್ನೂ ಮೀರಿ ಜನಸೇನಾ ಪಕ್ಷವನ್ನ ದೇಶಾದ್ಯಂತ ವ್ಯಾಪಿಸುವಂತೆ ಮಾಡಿ, ಪಿಎಂ ಆದ್ರೂ ಅಚ್ಚರಿಯಿಲ್ಲ. ಅವ್ರ ಉದ್ದೇಶ, ಸಿದ್ಧಾಂತಗಳು ಬಹಳ ಕ್ಲಿಯರ್ ಆಗಿವೆ. ಅದರತ್ತ ಮುನ್ನುಗ್ಗುತ್ತಿರೋ ಪವನ್‌‌‌ & ಜನಸೇನಾನಿಗಳಿಗೆ ಶುಭವಾಗಲಿ. ಸಮಾಜದಲ್ಲಿ ಬದಲಾವಣೆ ಬರಲಿ ಅನ್ನೋದಷ್ಟೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version