ಆಂಧ್ರ ಡಿಸಿಎಂ, ಟಾಲಿವುಡ್‌ನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಿನ್ನೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅವ್ರ ಹುಟ್ಟುಹಬ್ಬವನ್ನು ಇಲ್ಲಿನ ಪಿಕೆ ಫ್ಯಾನ್ಸ್ ಅಸೋಸಿಯೇಷನ್ ಜೊತೆ ಸೆಲೆಬ್ರೇಟ್ ಮಾಡಿದ ನಮ್ಮ ಲಿವಿಂಗ್ ಲೆಜೆಂಡ್ ಶಿವಣ್ಣನನ್ನ ಕೊಂಡಾಡಿದ್ದಾರೆ ಗೇಮ್ ಚೇಂಜರ್. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಆಂಧ್ರ ಪಾಲಿಟಿಕ್ಸ್‌ಗೆ ಗೇಮ್ ಚೇಂಜರ್ ಆಗಿ ಡಿಸಿಎಂ ಆಗಿ ಮಿಂಚುತ್ತಿರೋ ಟಾಲಿವುಡ್‌ನ ಸೆನ್ಸೇಷನಲ್ ಪವರ್ ಸ್ಟಾರ್ ಪವನ್ ಕಲ್ಯಾಣ್ 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅವರ ಬರ್ತ್ ಡೇನ ಬಹಳ ಅದ್ಧೂರಿಯಾಗಿ ಫ್ಯಾನ್ಸ್ ಹಾಗೂ ಜನಸೇನಾ ಕಾರ್ಯಕರ್ತರು ಸೆಲೆಬ್ರೇಟ್ ಮಾಡಿದ್ದಾರೆ. ಆದ್ರೆ ಪವನ್ ಬರ್ತ್ ಡೇನ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ಆಚರಿಸಿರೋದು ಇಂಟರೆಸ್ಟಿಂಗ್. ಅದಕ್ಕೆ ಕಾರಣ ಕರ್ನಾಟಕದಲ್ಲಿರೋ ಪವನ್ ಕಲ್ಯಾಣ್ ಫ್ಯಾನ್ಸ್ ಅಸೋಸಿಯೇಷನ್.
ನಾಗವಾರದಲ್ಲಿರೋ ಶಿವಣ್ಣನ ಶ್ರೀಮುತ್ತು ನಿವಾಸಕ್ಕೆ ತೆರಳಿ ಪವನ್ ಕಲ್ಯಾಣ್ ಜನುಮ ದಿನಕ್ಕೆ ಕೇಕ್ ಕಟ್ ಮಾಡಿಸಿದ್ದಾರೆ. ಅದರ ಫೋಟೋ ಸಮೇತ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ನಟ ಪವನ್ ಕಲ್ಯಾಣ್ ಶೇರ್ ಮಾಡಿ, ನಟಸಾರ್ವಭೌಮ ಡಾ ರಾಜ್‌ಕುಮಾರ್ ಜೊತೆ ಶಿವಣ್ಣನನ್ನ ಕೊಂಡಾಡಿದ್ದಾರೆ. ಇದು ಇಡೀ ದೊಡ್ಮನೆ ಅಭಿಮಾನಿ ಬಳಗದ ಜೊತೆ ಕನ್ನಡಿಗರಿಗೂ ಖುಷಿ ಕೊಟ್ಟಿದೆ.
ಬಿಗ್ ಡ್ಯಾಡಿಯಿಂದ OG ಬರ್ತ್ ಡೇ.. ಪವನ್ ದಿಲ್‌ಖುಷ್
ಡಾ. ರಾಜ್ & ಶಿವರಾಜ್‌ಕುಮಾರ್‌ನ ಕೊಂಡಾಡಿದ ಡಿಸಿಎಂ
ಅಲ್ಲದೆ, ಪವನ್ ಕಲ್ಯಾಣ್‌ರ ಬಹುನಿರೀಕ್ಷಿತ ಓಜಿ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಚಿತ್ರದ ಖಡಕ್ ಖಳನಾಯಕ ಇಮ್ರಾನ್ ಹಶ್ಮಿ ಹ್ಯಾಪಿ ಬರ್ತ್ ಡೇ ಓಜಿ ಅಂತ ಹೇಳುವ ಝಲಕ್ ಸಖತ್ ಥ್ರಿಲ್ಲಿಂಗ್ ಆಗಿದೆ. ಬ್ಯಾಗ್ರೌಂಡ್ ಮ್ಯೂಸಿಕ್ ಸಖತ್ ಮಜಬೂತಾಗಿದ್ದು, ಇದರ ಜೊತೆ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಕೂಡ ರಿಲೀಸ್ ಆಗಬೇಕಿದೆ. ಇವೆರಡೂ ಪವನ್ ಸಿನಿ ಕರಿಯರ್‌ನ ಕಟ್ಟ ಕಡೆಯ ಚಿತ್ರಗಳಾಗಲಿದ್ದು, ನಂತರದ ದಿನಗಳಲ್ಲಿ ಪವರ್ ಪಾಲಿಟಿಕ್ಸ್‌ಗೆ ಸೀಮಿತ ಆಗಲಿದ್ದಾರೆ ಚಿರು ಸಹೋದರ ಪವನ್ ಕಲ್ಯಾಣ್.
