ಕೆಟ್ಟ ಕಣ್ಣುಗಳು ನನ್ನ ಟಚ್‌ ಮಾಡೋಕಾಗೋಲ್ಲ ನಟಿ ಪವಿತ್ರಾ ಗೌಡ ವಾರ್ನಿಂಗ್!

Film 2025 03 30t122041.597

ನಟಿ ಮತ್ತು ಮಾಡೆಲ್ ಪವಿತ್ರಾ ಗೌಡ ಅವರು 2025ರ ಯುಗಾದಿ ಹಬ್ಬದ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.”ಕೆಟ್ಟ ಕಣ್ಣು ಯಾವಾಗಲೂ ನೋಡುತ್ತಿರುತ್ತದೆ. ಆದರೆ ಅದು ನನ್ನನ್ನು ಟಚ್ ಮಾಡಲಾಗೋದಿಲ್ಲ” ಎಂದು ಸ್ಪಷ್ಟವಾಗಿ ಹೇಳಿರುವ ಅವರ ಈ ಪೋಸ್ಟ್ ವೈರಲ್ ಆಗಿದೆ.

ಯುಗಾದಿ ಹಬ್ಬದ ವಿಶೇಷತೆಗಳು :
ಪವಿತ್ರಾ ಗೌಡ ಅವರು ಈ ವರ್ಷ ಮನೆಯಲ್ಲಿ ವಿಶೇಷ ಹೋಮ ಆಚರಿಸಿದ್ದು, “2025ರ ಯುಗಾದಿಯು ವಿಶ್ವಾವಸು ನಾಮ ಸಂವತ್ಸರವನ್ನು ತಂದಿದೆ. ಹೊಸ ವರ್ಷ ನಿಮಗೆ ಸಂತೋಷ-ಶಾಂತಿ ತರಲಿ” ಎಂದು ಶುಭಾಶಯ ಸಾರಿದ್ದಾರೆ. ಅದೇ ಸಮಯದಲ್ಲಿ, “ನೆಗೆಟಿವಿಟಿ ತುಂಬಿದ ಜಗತ್ತಿನಲ್ಲಿ ನಿಮ್ಮ ಕೆಟ್ಟ ದೃಷ್ಟಿಯೂ ಪಾಸಿಟಿವ್ ಆಗಲಿ” ಎಂಬ ಸಂದೇಶವನ್ನು ನೀಡಿದ್ದು ಚರ್ಚೆಗೆ ಕಾರಣವಾಗಿದೆ.


ಕಳೆದ ಕೆಲ ದಿನಗಳ ಹಿಂದೆ ಪವಿತ್ರಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ  ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿಶೇಷವಾದ ವಿಡಿಯೋ ಶೇರ್ ಮಾಡಿದ್ದರು. ಮಹಿಳಾ ದಿನಾಚರಣೆ  ಶುಭಾಶಯ ತಿಳಿಸುವುದರ ಜೊತೆಗೆ, ವಿಶೇಷ ಸಂದೇಶ ನೀಡಿದ್ದರು.ಕಪ್ಪು-ಬಿಳುಪು ಸೀರೆಯಲ್ಲಿ ಮಿಂಚಿದ್ದರು. ಇತ್ತ, ಶಿರಡಿ ಸಾಯಿ ಬಾಬಾ ದರ್ಶನ ಮತ್ತು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದು ಅವರ ಆಧ್ಯಾತ್ಮಿಕ ಆಸಕ್ತಿಯನ್ನು ತೋರಿಸುತ್ತದೆ.

ಇನ್ನು ಟೆಂಪಲ್‌ ರನ್‌ ಮಾಡುತ್ತಿರುವ ಪವಿತ್ರಾ ಗೌಡ ಅವರು ಕೆಲ ದಿನಗಳ ಹಿಂದೆಯೇ ಮುಂಬೈಗೆ ತೆರಳಿದ್ದರು, ಶಿರಡಿ ಸಾಯಿ ಬಾಬಾನ ದರ್ಶನ ಪಡೆದಿದ್ದರು. ಇನ್ನು ಮಹಾಕುಂಭಮೇಳಕ್ಕೂ ಭೇಟಿ ನೀಡಿದ್ದರು.

ದರ್ಶನ್ರೇಣುಕಾಸ್ವಾಮಿ ಕೊಲೆ ಪ್ರಕರಣ :
2024ರ ಜೂನ್‌‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಸೇರಿದಂತೆ 18 ಜನರನ್ನು ಪೊಲೀಸರು ತನಿಖೆ ಮಾಡಿದ್ದರು. ಈಗ ದರ್ಶನ್ ಹಾಗೂ ಪವಿತ್ರಾ ಗೌಡರ ಜಾಮೀನಿನ ಮೇಲೆ ಬಂಧನಮುಕ್ತರಾಗಿದ್ದರೂ, ಕೋರ್ಟ್ ಪ್ರಕರಣ ನಡೆಯುತ್ತಿದೆ. ಇನ್ನು ಕೋರ್ಟ್‌ನಲ್ಲಿ ಈ ಪ್ರಕರಣ ನಡೆಯುತ್ತಿದೆ. ಈ ಪ್ರಕರಣ ಏನಾಗಲಿದೆ ಎಂದು ಕಾದು ನೋಡಬೇಕಿದೆ.

Exit mobile version