“ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಗೆದ್ದದ್ದು ಧರ್ಮವೇ”: ಪವಿತ್ರಾ ಗೌಡ

“ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಗೆದ್ದದ್ದು ಧರ್ಮವೇ”

ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ಪವಿತ್ರಗೌಡ ರಿಲೀಸ್‌ ಆದ ನಂತರ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಆ್ಯಕ್ಟಿವ್‌ ಆಗಿದ್ದು, ತಮ್ಮ ಇನ್‌‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದು ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ. “ಧರ್ಮ ಮತ್ತು ಅಧರ್ಮದ ಸಂಘರ್ಷದಲ್ಲಿ ಅಂತಿಮ ಗೆಲುವು ಧರ್ಮಕ್ಕೆ” ಎಂಬ ತಮ್ಮ ನಂಬಿಕೆಯನ್ನು ಅವರು ಒತ್ತಿಹೇಳಿದ್ದಾರೆ. ಕಾಶಿಯ ಪವಿತ್ರ ಭೂಮಿಯಲ್ಲಿ ತೆಗೆದ ಫೋಟೋ ಶೇರ್‌‌ ಮಾಡಿದ್ದಾರೆ.

ಕಾಶಿಯ ಫೋಟೋ ಮತ್ತು “ಕಾಲಾಯ ತಸ್ಮಯ್ ನಮಃ”
ಪವಿತ್ರಾ ಗೌಡ ಅವರು ಕಾಶಿಯಲ್ಲಿ ತೆಗೆದುಕೊಂಡು ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು “ಕಾಲಾಯ ತಸ್ಮಯ್ ನಮಃ” ಎಂಬ ಕ್ಯಾಪ್ಷನ್ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ.

“ಅಧರ್ಮಕ್ಕೆ ತಾತ್ಕಾಲಿಕ ಜಯ, ಧರ್ಮಕ್ಕೆ ಶಾಶ್ವತ ವಿಜಯ”
ತಮ್ಮ ಪೋಸ್ಟ್ ನಲ್ಲಿ ಪವಿತ್ರಾ ಗೌಡ, “ಮೊದಮೊದಲು ಅಧರ್ಮಕ್ಕೆ ಜಯ ಸಿಕ್ಕಿರಬಹುದು, ಆದರೆ ಕೊನೆಗೆ ಗೆಲುವು ಧರ್ಮಕ್ಕೇ” ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಗೌರವಾನ್ವಿತ ಸುದ್ದಿ ವಾಹಿನಿಗಳಿಗೂ ಹಾಗೂ ಸಾಮಾಜಿಕ ಜಾಲತಾಣಗಳಿಗೂ ಅವರು ತಮ್ಮ ವಂದನೆ ಸಲ್ಲಿಸಿದ್ದಾರೆ. “ಅಮಾನವೀಯ ಮಾತುಗಳು” ಮತ್ತು “ವಿಕೃತ ಮನಸ್ಥಿತಿಯ ಕಾಮೆಂಟ್ಗಳ” ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಕೆಲವು ಮಾಧ್ಯಮದವರ ಅಮಾನವಿಯ ಮಾತುಗಳು ಹಾಗೂ ಕೆಲ ವಿಕೃತ comments ಬೇಸರ ತಂದಿದೆ. ‘’ಕಲಾಯ ತಾಸ್ಮಯ್ ನಮಃ’’ ಎಂದು ಬರೆದುಕೊಂಡಿದ್ದಾರೆ.

Exit mobile version