ಅಮೆಜಾನ್‌ ಪ್ರೈಮ್‌ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಪಾರು ಪಾರ್ವತಿ ಸಿನಿಮಾ

Film 2025 04 08t133413.133

EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದ ಸಿನಿಮಾ ಪಾರು ಪಾರ್ವತಿ. ಬಿಗ್ ಬಾಸ್ ಮತ್ತು ನಾಗಿಣಿ ಸೀರಿಯಲ್‌ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಪ್ರಮುಖಪಾತ್ರದಲ್ಲಿ ನಟಿಸಿರುವ “#ಪಾರು ಪಾರ್ವತಿ” ಚಿತ್ರ ಚಿತ್ರಮಂದಿರಗಳ ಬಳಿಕ ಇದೀಗ ಓಟಿಟಿಗೆ (ಏಪ್ರಿಲ್‌ 4ರಿಂದ) ಆಗಮಿಸಿದೆ.

ಜನವರಿ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಅಮೆಜಾನ್‌ ಪ್ರೈಂ ವಿಡಿಯೋ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಆರಂಭದಲ್ಲಿ ಈ ಚಿತ್ರದ ಟ್ರೇಲರ್‌ಅನ್ನು ನಟ ಕಿಚ್ಚ ಸುದೀಪ್‌ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಹಾರೈಸಿದ್ದರು. ಅದಾದ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾಕ್ಕೆ ಮೆಚ್ಚುಗೆಯೂ ಸಿಕ್ಕಿತ್ತು. ಇದೀಗ ಓಟಿಟಿಯಲ್ಲಿ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.

ಪ್ರವಾಸ ಕಥನದ ಹಿನ್ನೆಲೆಯ “#ಪಾರು ಪಾರ್ವತಿ” ಸಿನಿಮಾವನ್ನು ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಕಾಂಡ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಬಿನ್ ರಾಜೇಶ್ ಛಾಯಾಗ್ರಹಣ, ಆರ್ ಹರಿ ಸಂಗೀತ ನಿರ್ದೇಶನ ಹಾಗೂ ಸಿ.ಕೆ.ಕುಮಾರ ಅವರ ಸಂಕಲನ “#ಪಾರು ಪಾರ್ವತಿ” ಚಿತ್ರಕ್ಕಿದೆ.

Exit mobile version