ಶಿವಣ್ಣ-ಗೀತಕ್ಕ ಹೋಮ್ ಬ್ಯಾನರ್‌ನ ಪಬ್ಬಾರ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ನಡೆಸು ಬೆಳಕೇ ಅನ್ನೋ ಗೀತೆ ಎದೆಯಾಳದ ನೆಲದಲ್ಲಿ ಧೀರೇನ್ ಆರ್ ರಾಜ್‌ಕುಮಾರ್ ನಡೆಸುವ ಹುಡುಕಾಟವನ್ನ ಆಧರಿಸಿದೆ. ಇಷ್ಟಕ್ಕೂ ಆತ ಹುಡುಕ್ತಿರೋದು ಯಾರನ್ನ..? ಏತಕ್ಕಾಗಿ..? ಇದರ ಫುಲ್ ಡಿಟೇಲ್ಸ್ ಇಲ್ಲಿದೆ….
- ಎದೆಯಾಳದ ನೆಲದಲ್ಲಿ ಧೀರೇನ್ ಹುಡುಕಾಟ.. ಯಾರಿಗಾಗಿ..?!
- ಒಂಟಿತನದ ಭಾರ ಇಳಿಸೋ ತವರು ಈ ಪಬ್ಬಾರ್ ಕಣಿವೆಗಳು..!
- ಸಾಂಗ್ಸ್ನಿಂದ ನಿರೀಕ್ಷೆ ಹೆಚ್ಚಿಸಿದ ಶಿವಣ್ಣ-ಗೀತಕ್ಕ ನಿರ್ಮಾಣದ ಚಿತ್ರ
- ಡಿಸೆಂಬರ್ 11ಕ್ಕೆ ಶಾಖಾಹಾರಿ ಡೈರೆಕ್ಟರ್ ಮತ್ತೊಂದು ಪ್ರಯೋಗ
ನಡೆಸು ಬೆಳಕೇ.. ಇದು ಇದೇ ಡಿಸೆಂಬರ್ 11ಕ್ಕೆ ತೆರೆಗೆ ಬರೋಕೆ ಸಜ್ಜಾಗ್ತಿರೋ ಗೀತಾ ಶಿವರಾಜ್‌ಕುಮಾರ್ ಹಾಗೂ ಶಿವಣ್ಣ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್ ನಿರ್ಮಾಣದ ಪಬ್ಬಾರ್ ಚಿತ್ರದ ಮತ್ತೊಂದು ಹೊಚ್ಚ ಹೊಸ ಸಾಂಗ್. ಒಂಟಿತನದ ಭಾರ ಇಳಿಸೋ ತವರು ಪಬ್ಬಾರ್ ಕಣಿವೆಗಳಲ್ಲಿ ಅಣ್ಣಾವ್ರ ಮೊಮ್ಮಗ ಧೀರೇನ್ ಆರ್ ರಾಜ್‌ಕುಮಾರ್ ಯಾರಿಗಾಗಿಯೋ ಹುಡುಕಾಟ ನಡೆಸೋ ಚಿತ್ರಣ ಕಾಣಸಿಗುತ್ತಿದೆ.
ಸಿಕ್ಕಾಪಟ್ಟೆ ಎಮೋಷನ್ಸ್‌ನ ಅಡಗಿಸಿಟ್ಟಿರೋ ಈ ಹಾಡಲ್ಲಿ ಧೀರೇನ್ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದ ಸುಂದರ ತಾಣಗಳನ್ನ ಸಿಕ್ಕಾಪಟ್ಟೆ ಸುತ್ತುತ್ತಾರೆ. ಸಾಕಷ್ಟು ಲೈಬ್ರರಿಗಳು, ಆಲಯಗಳಲ್ಲಿ ಹುಡುಕಾಡ್ತಾರೆ. ಅದಕ್ಕೆ ಸಲಗ ಕೆಂಡ ಖ್ಯಾತಿಯ ಶ್ರೇಷ್ಠ ಕೂಡ ಸಾಥ್ ನೀಡಿದ್ದು.. ಮಯೂರ್ ಅಂಬೆಕಲ್ಲು ಸಂಗೀತದ ಹಾಡಿಗೆ ವಿಶ್ವಜಿತ್ ರಾವ್ ಕ್ಯಾಮೆರಾ ಜೊತೆ ಸಾಹಿತ್ಯ ಕೂಡ ರಚಿಸಿದ್ದಾರೆ. ಅದನ್ನ ಅಷ್ಟೇ ಸೊಗಸಾಗಿ ಸಿದ್ದ್ ಶ್ರೀರಾಮ್ ತಮ್ಮ ಕಂಠದಲ್ಲಿ ಹಾಡುವ ಮೂಲಕ ಜೀವ ತುಂಬಿದ್ದಾರೆ.
ಟೀಸರ್ ಜೊತೆ ಮೊದಲಿಗೆ ಅಮೃತಾ ಪ್ರೇಮ್ ಹಾಗೂ ಹೀರೋ ಧೀರೇನ್ ಜೋಡಿಯ ಈ ಬದುಕಿಗೆ ಸಾಂಗ್ ಬಿಡುಗಡೆ ಆಗಿತ್ತು. ಅದು ಚಿತ್ರದ ಇಂಟೆನ್ಸ್ ಎಮೋಷನ್ಸ್ ಜೊತೆ ಪಾತ್ರಗಳನ್ನ ಪರಚಿಯಿಸೋ ಗೀತೆ ಆಗಿತ್ತು. ಆ ನಂತ್ರ ಬಂದಂತಹ ಶಿವಣ್ಣ ಬಳೆಗಾರನಾಗಿದ್ದ ಲಾಲಿ ಹಾಡು ಕೂಡ ಫ್ಯಾಮಿಲಿ ಆಡಿಯೆನ್ಸ್ ಮನಸ್ಸು ಗೆದ್ದಿತ್ತು. ಇದೀಗ ಈ ಭಾವನೆಗಳ ಒಡಲಿನ ಗೀತೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಶಾಖಾಹಾರಿ ಚಿತ್ರದ ಡೈರೆಕ್ಟರ್ ಸಂದೀಪ್ ಸುಂಕದ್ ಈ ಬಾರಿ ಏನೆಲ್ಲಾ ಪ್ರಯೋಗ ಮಾಡಿದ್ದಾರೆ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
