ಹಿಟ್-3 ಟೀಸರ್ ರಿಲೀಸ್, ಬರ್ತಡೇ ದಿನವೇ ಮಾಸ್ ರೂಪ ತಾಳಿದ ನಾನಿ!

Befunky collage (67)

ತೆಲುಗಿನಲ್ಲಿ ರೊಮ್ಯಾಂಟಿಕ್‌ ಸಿನಿಮಾಗಳ ಜೊತೆಗೆ ಮಾಸ್‌ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನ್ಯಾಚುರಲ್ ಸ್ಟಾರ್ ನಾನಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ನಾನಿ ಹುಟ್ಟುಹಬ್ಬದ ವಿಶೇಷವಾಗಿ ಹಿಟ್-3 ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಒಂದು ಸೀರಿಯಲ್ ಕಿಲ್ಲರ್‌ನ ಹಿಡಿಯೋದಕ್ಕೆ ನಡೆಯುವ ಇನ್ವೆಸ್ಟಿಗೇಶನ್ ಈ ಸಿನಿಮಾದ ಕಥೆ. ಅರ್ಜುನ್ ಸರ್ಕಾರ್ ಆಗಿ ಮಾಸ್ ಅವತಾರದಲ್ಲಿ ನಾನಿ ಅಬ್ಬರಿಸಿದ್ದಾರೆ.

‘ಹಿಟ್ 3`.. ಇದು ಹಿಟ್ ಫ್ರಾಂಚೈಸಿ ಇಂದ ಬರುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಿಟ್ ಮೊದಲನೇ ಸಿನಿಮಾದಲ್ಲಿ ವಿಶ್ವಕ್ ಸೇನ್ ಹೀರೋ ಆಗಿ ನಟಿಸಿದ್ದಾರೆ. ಹಿಟ್ 2 ರಲ್ಲಿ ಅಡವಿಶೇಷು ನಟಿಸಿದ್ದಾರೆ. ಮೂರನೇ ಫ್ರಾಂಚೈಸಿಯಲ್ಲಿ ನಾನಿ ಸಖತ್ ರಡಗ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT
ADVERTISEMENT

ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ. ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ‌ ಮೂಡಿ ಬಂದಿದ್ದು, ಮಿಕ್ಕಿ ಜೆ ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಹಿಟ್-3 ಚಿತ್ರಕ್ಕಿದೆ. ಟೀಸರ್ ಮೈ ಜುಮ್ ಅನ್ನೋ ಹಾಗೆ ಇದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದ್ದು, ಮೇ 1ರಂದು ಚಿತ್ರ ಬಿಡುಗಡೆಯಾಗಲಿದೆ.

Exit mobile version