ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ನಮ್ಮ ಕಂಚಿನ ಕಂಠದ ಪ್ರತಿಭೆ ವಸಿಷ್ಠ ಸಿಂಹ ನಟನೆಯ ಒಡೆಲಾ-2 ಸಿನಿಮಾ ವಿವಾದದ ಸುಳಿಗೆ ಸಿಲುಕಿದೆ. ಯೆಸ್.. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡ್ಕೊಳ್ತಿದ್ದು, ಸಿನಿಮಾದಲ್ಲೊಂದು ವಿವಾದಿತ ಅಂಶ ಒಂದು ಜಾತಿಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.
ಟಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ರಿಲೀಸ್ ಆದ ಸಿನಿಮಾ ಒಡೆಲಾ-2. ಇದೇ ಏಪ್ರಿಲ್ 17ರಂದು ತೆರೆಕಂಡ ಈ ಸಿನಿಮಾ, ಈ ಹಿಂದೆ ಎಲ್ಲರ ಮನಸ್ಸು ಗೆದ್ದಿದ್ದ ಒಡೆಲಾ ರೈಲ್ವೇ ಸ್ಟೇಷನ್ ಸಿನಿಮಾದ ಸೀಕ್ವೆಲ್. ಅಶೋಕ್ ತೇಜಾ ನಿರ್ದೇಶನದ ಈ ಸಿನಿಮಾ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಜಾನರ್ನಿಂದ ಕೂಡಿದ್ದು, ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ನಮ್ಮ ಕನ್ನಡದ ಸ್ಟಾರ್ ವಸಿಷ್ಠ ಸಿಂಹ ಲೀಡ್ನಲ್ಲಿ ನಟಿಸಿದ್ದಾರೆ.
ಈ ಸಿನಿಮಾಗೆ ಮೊದಲ ಭಾಗದಂತೆ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಎಲ್ಲೆಡೆಯಿಂದ ವ್ಯಕ್ತವಾಗ್ತಿದ್ದು, ಮೇಕಿಂಗ್ ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದೆ. ಇನ್ನು ತಮನ್ನಾ ಹಾಗೂ ವಸಿಷ್ಠ ನಡುವಿನ ದೃಶ್ಯಗಳು ನೋಡುಗರಿಗೆ ಮಸ್ತ್ ಥ್ರಿಲ್ ಕೊಡ್ತಿವೆ. ಈ ಚಿತ್ರದ ಬಗ್ಗೆ ಜನರ ಜೊತೆ ಚಿತ್ರರಂಗ ಕೂಡ ಮಾತನಾಡುವಂತಾಗಿದೆ. ಹೀಗಿರುವಾಗಲೇ ಒಡೆಲಾ-2ಗೆ ವಿವಾದವೊಂದು ಅಂಟಿಕೊಂಡಿದೆ.
ಹೌದು.. ಮದುವೆಯೊಂದರ ದೃಶ್ಯದಲ್ಲಿ ಪಿಚ್ಚಿಗುಂಟ್ಲ ಅನ್ನೋ ಜಾತಿಗೆ ಅಪಮಾನ ಎಸಗಲಾಗಿದೆ ಅಂತ ಆ ಜಾತಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. BC ಆಯೋಗಕ್ಕೆ ದೂರು ಕೂಡ ನೀಡಲಾಗಿದ್ದು, ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಬರಹಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಕುರಿತು ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಾಗಿದೆ.
ಸಿನಿಮಾದಲ್ಲಿ ಆ ಅಕ್ಷೇಪಾರ್ಹ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಥ್ವಾ ಆಡಿಯೋನ ಮ್ಯೂಟ್ ಮಾಡಬೇಕು ಅಂತ ಚಿತ್ರತಂಡಕ್ಕೆ ತಾಕೀತು ಮಾಡಿದ್ದಾರೆ ಪಿಚ್ಚಗುಂಟ್ಲ ಜಾತಿಯ ಸದಸ್ಯ ಪಿ ಮಲ್ಲೇಶ್. ಸೋ.. ಸಿನಿಮಾದಲ್ಲಿ ಆ ದೃಶ್ಯಕ್ಕೆ ಕತ್ತರಿ ಬೀಳುತ್ತಾ ಇಲ್ವಾ ಅನ್ನೋದು ನಿರೀಕ್ಷಿಸಬೇಕಿದೆ.
ವಿಜಯ್ ವರ್ಮಾ ಜೊತೆ ಲವ್ ಬ್ರೇಕಪ್ ಮಾಡಿಕೊಂಡಿರೋ ಮಿಲ್ಕಿ ಬ್ಯೂಟಿಯ ಸಿನಿಮಾಗೆ ಈ ರೀತಿಯ ಸಮಸ್ಯೆ ಎದುರಾಗಿರೋದು ತಮನ್ನಾ ಫ್ಯಾನ್ಸ್ಗೆ ಆಘಾತ ತಂದಿದೆ. ಅದೇನೇ ಇರಲಿ, ಸಿನಿಮಾಗಳಲ್ಲಿ ಈ ರೀತಿಯ ವಿವಾದಗಳು ಸರ್ವೇ ಸಾಮಾನ್ಯ ಅನ್ನೋದು ಗೊತ್ತಿರೋದೇನೇ. ಆದಷ್ಟು ಬೇಗ ಸಿನಿಮಾದ ಸಮಸ್ಯೆ ಬಗೆಹರಿಯಲಿ, ಒಳ್ಳೆಯ ಕಲೆಕ್ಷನ್ ಮಾಡಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್