ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!

OMG.. ದೂದ್‌ಪೇಡಾ ದಿಗಂತ್ ಜೊತೆ ನಿವಿ ಬೋಲ್ಡ್ ಸ್ಟೆಪ್ಸ್

Untitled design 2025 10 16t192909.744

ಚಂದನ್ ಶೆಟ್ಟಿ ಜೊತೆ ಡಿವೋರ್ಸ್‌ ಪಡೆದ ಬಳಿಕ ನಟಿ ನಿವೇದಿತಾ ಗೌಡ ಲೈಫ್ ಹೇಗಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಸದ್ಯ ದಿಗಂತ್ ಜೊತೆ ಈ ಹಾಟ್ ಚೆಲುವೆ ನಾಟಿ ಸ್ಟೆಪ್ಸ್ ಹಾಕಿರೋ ಐ ಆ್ಯಮ್ ಗಾಡ್ ಚಿತ್ರದ ಸಾಂಗ್ ಜೊತೆ ಎರಡನೇ ಮದುವೆ ಬಗ್ಗೆ ಮೌನ ಮುರಿದಿರೋ ನಿವೇದಿತಾ ಮದುವೆ ನಿವೇದನೆಯನ್ನ ಹೇಳ್ತೀವಿ ಈ ಸ್ಟೋರಿ ನೋಡಿ.

ಯೆಸ್.. ನಿವೇದಿತಾ ಗೌಡ ಅನ್ನೋ ಈ ಹಾಟ್ ಬ್ಯೂಟಿ.. ಅದ್ಯಾಕೋ ಚಂದನ್ ಶೆಟ್ಟಿ ಜೊತೆಗಿನ ಸಂಬಂಧ ಕಡಿದುಕೊಂಡರು. ಮದ್ವೆ ಆದ ಬಳಿಕ ಡಿವೋರ್ಸ್‌ ಪಡೆದು ನ್ಯೂ ಲೈಫ್ ಶುರು ಮಾಡಿದ್ದಾರೆ. ಆದ್ರೆ ಇಲ್ಲಿಯವರೆಗೆ ಎಲ್ಲಿಯೂ ತನ್ನ ಮಾಜಿ ಗಂಡ ಚಂದನ್ ಹಾಗೂ ಎರಡನೇ ಮದುವೆ ಬಗ್ಗೆ ಮೌನ ಮುರಿಯದ ನಿವಿ, ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ.

ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ

ಮತ್ತೆ ಮದ್ವೆ ಅಂದ್ರೆ ಭಯ.. ಮತ್ತೆ ಆ ತಪ್ಪು ಮಾಡಲ್ವಂತೆ ನಿವಿ..!!

ಎಲ್ಲವೂ ಸರಿಯಾಗಿದ್ದಿದ್ರೆ ನಾನ್ಯಾಕೆ ಇಂತಹ ನಿರ್ಧಾರ ತೆಗೆದುಕೊಳ್ತಿದ್ದೆ..? ಅದ್ರಿಂದ ಹೊರಬರೋಕೆ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ತುಂಬಾ ಸಪೋರ್ಟ್‌ ಮಾಡಿದೆ. ಅಪ್ಪ-ಅಮ್ಮನಿಗೆ ನನ್ನ ಖುಷಿಗಿಂತ ದೊಡ್ಡದು ಬೇರೇನೂ ಇಲ್ಲ. ಅಂದಿನಿಂದ ಚಂದನ್ ಎಂದೂ ಕಾಲ್, ಮೆಸೇಜ್ ಮಾಡಿಲ್ಲ. ನನಗೆ ಎರಡನೇ ಮದ್ವೆ ಆಗುವ ಯಾವುದೇ ಆಶಯ ಸದ್ಯಕ್ಕಿಲ್ಲ. ಮದ್ವೆ ಅಂದ್ರೇನೇ ಭಯ. ಆ ತಪ್ಪು ಮತ್ತೆ ಮಾಡಲ್ಲ ಅಂತೆಲ್ಲಾ ನಿವಿ ಬೋಲ್ಡ್ ಅಂಡ್ ಸ್ಟ್ರೈಟ್ ಫಾರ್ವರ್ಡ್‌ ಆಗಿ ಮಾತನಾಡಿದ್ದಾರೆ.

ಅದೂ ನಿಜಾನೇ ಬಿಡಿ. ನಿವೇದಿತಾ ಮಾತು ಕೇಳ್ತಿದ್ರೆ ಅರ್ಥವಿದೆ ಅನಿಸ್ತಿದೆ. ತನ್ನ ಸೆಕೆಂಡ್ಸ್ ಇನ್ನಿಂಗ್ಸ್ ಲೈಫ್‌ನ ಹೇಗೆ ಕಟ್ಕೋಬೇಕು ಅನ್ನೋದು ಆಕೆಗೆ ಚೆನ್ನಾಗಿ ಗೊತ್ತಿದೆ. ನೊಂದ ಮನಸಿನ, ಅನುಭವದ ಹಾಗೂ ತೂಕದ ಮಾತುಗಳು ಎದ್ದು ಕಾಣ್ತಿವೆ. ಸಾಕಷ್ಟು ಪಾಠ ಕಲಿತಿರೋ ನಿವಿ ಸದ್ಯ ಟ್ರಾವೆಲಿಂಗ್ ಹಾಗೂ ಆ್ಯಕ್ಟಿಂಗ್ ಅಂತ ಬ್ಯುಸಿ ಆಗಿದ್ದಾರಂತೆ.

OMG.. ದೂದ್‌ಪೇಡಾ ದಿಗಂತ್ ಜೊತೆ ನಿವಿ ಬೋಲ್ಡ್ ಸ್ಟೆಪ್ಸ್

ಉಪ್ಪಿ ಶಿಷ್ಯ ರವಿ ಗೌಡ ಚಿತ್ರದಲ್ಲಿ ಪಡ್ಡೆ ಹುಡುಗರ ಹಾಟ್ ಬ್ಯೂಟಿ

ಅಂದಹಾಗೆ ನಿವಿ ಸದ್ಯ ಐ ಆ್ಯಮ್ ಗಾಡ್ ಅನ್ನೋ ಚಿತ್ರದ ಹಾಡೊಂದರಲ್ಲಿ ಸ್ಟೆಪ್ ಹಾಕಿದ್ದಾರೆ. ಅದೇ ಹಾಟ್ ಅಂಡ್ ಸೆಕ್ಸಿ ಬೋಲ್ಡ್ ಲುಕ್‌‌ನಲ್ಲಿ ನೋಡುಗರ ಕಣ್ಣು ಕುಕ್ಕುತ್ತಿದ್ದಾರೆ ಈ ಕನ್ನಡತಿ. ಉಪೇಂದ್ರ ಅವರ ಅಪ್ಪಟ ಶಿಷ್ಯ ರವಿ ಗೌಡ ನಾಯಕನಟನಾಗಿ ಬಣ್ಣ ಹಚ್ಚಿ, ಅವರೇ ನಿರ್ದೇಶನ ಮಾಡಿ ನಿರ್ಮಾಣ ಕೂಡ ಮಾಡ್ತಿರೋ ಸಿನಿಮಾ ಐ ಆ್ಯಮ್ ಗಾಡ್. ಅಂದಹಾಗೆ ಐ ಆ್ಯಮ್ ಗಾಡ್ ಅಂದಾಕ್ಷಣ ಉಪ್ಪಿ ನೆನಪಾಗ್ತಾರೆ. ಆದ್ರೆ ಅವ್ರ ಶಿಷ್ಯನೇ ಮಾಡ್ತಿರೋ ಚಿತ್ರವಾದ್ದರಿಂದ ದೂದ್‌ಪೇಡಾ ದಿಗಂತ್ ಹಾಗೂ ನಿವೇದಿತಾ ಜೋಡಿಯಲ್ಲಿ ಒಂದೊಳ್ಳೆ ಡ್ಯಾನ್ಸಿಂಗ್ ನಂಬರ್ ತಯಾರಾಗಿದೆ. ದಿಗಂತ್ ಜೊತೆ ನಿವಿ ಸೊಂಟ ಬಳುಕಿಸಿರೋ ಪರಿ ವ್ಹಾವ್ ಫೀಲ್ ತರಿಸಿದೆ.

ಕಾಂತಾರ ಚಿತ್ರದಿಂದ ವಿಶ್ವದಾದ್ಯಂತ ಸದ್ದು ಮಾಡ್ತಿರೋ ಅಜನೀಶ್ ಲೋಕನಾಥ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ನವೆಂಬರ್‌‌ನಲ್ಲಿ ತೆರೆಗೆ ಬರೋ ಧಾವಂತದಲ್ಲಿದೆ ಐ ಆ್ಯಮ್ ಗಾಡ್ ಮೂವಿ.

 

 

 

Exit mobile version