ಡಿವೋರ್ಸ್ ಬಳಿಕ ಕಷ್ಟ ದಿನಗಳ ನೆನಪಿಸಿ, ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ನಿವಿ!

Film 2025 04 07t084810.542

ಬಿಗ್‌ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಇತ್ತೀಚೆಗೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ತಮ್ಮ ಜೀವನದ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಗಾಯಕ ಚಂದನ್ ಶೆಟ್ಟಿಯ ಜೊತೆಗಿನ ಡಿವೋರ್ಸ್ ಬಳಿಕ ಜೀವನದಲ್ಲಿ ಎದುರಾದ ಸವಾಲುಗಳ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಅವರು, ತಾವು ಗಟ್ಟಿಯಾಗಿರಲು ತಂದೆಯೇ ಕಾರಣ ಎಂದು ತಿಳಿಸಿದ್ದಾರೆ.

ಈ ಶೋಗೆ ಅತಿಥಿಗಳಾಗಿ ಬಂದಿದ್ದ ನಟಿ ಅದಿತಿ ಪ್ರಭುದೇವ ಮತ್ತು ನೆನಪಿರಲಿ ಪ್ರೇಮ್ ಜೊತೆಗೆ, ನಿವೇದಿತಾ ಗೌಡ ಮತ್ತು ಬಿಗ್‌ಬಾಸ್ ಖ್ಯಾತಿಯ ಧನರಾಜ್ ಆಚಾರ್ಯ ತಂದೆ-ಮಗಳ ಬಾಂಧವ್ಯವನ್ನು ಚಿತ್ರಿಸುವ ‘ಮುಗಿಲು ಬೆಳ್ಮುಗಿಲು ನನ್ನ ಈ ಮಗಳು’ ಹಾಡಿಗೆ ಡ್ಯಾನ್ಸ್ ಮಾಡಿದರು. ಈ ಪ್ರದರ್ಶನದ ಬಗ್ಗೆ ಮಾತನಾಡಿದ ನಟ ಪ್ರೇಮ್, “ಪ್ರಪಂಚದಲ್ಲಿ ತಂದೆ ಎಂಬ ಜೀವ ಹೀಗೆಯೇ ಇರುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದರೆ, ಜೀವ ಬಿಟ್ಟು ಎಲ್ಲವನ್ನೂ ತಂದುಕೊಡುತ್ತಾರೆ,” ಎಂದು ಹೇಳಿದರು.

ಈ ಮಾತುಗಳನ್ನು ಕೇಳಿ ಭಾವುಕರಾದ ನಿವೇದಿತಾ, “ನನ್ನ ಜೀವನದಲ್ಲಿ ಏನೇನೋ ಆದ ಮೇಲೆ ನಾನು ಇಷ್ಟು ಗಟ್ಟಿಯಾಗಿರಲು ನನ್ನ ತಂದೆಯೇ ಕಾರಣ. ‘ನಾನು ನಿನ್ನ ಜೊತೆಗೆ ಇದ್ದೀನಿ, ತಲೆ ಕೆಡಿಸಿಕೊಳ್ಳಬೇಡ’ ಎಂದು ಅವರು ಹೇಳುತ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟದ ಸಂಗತಿ,” ಎಂದು ಕಣ್ಣೀರು ಹಾಕಿದರು. ನಿವೇದಿತಾ ಅವರ ಮಾತುಗಳನ್ನು ಕೇಳಿ ಐಶ್ವರ್ಯಾ ಶಿಂಧೋಗಿ, ಅನುಪಮಾ ಗೌಡ ಮತ್ತು ರಜತ್ ಕಿಶನ್ ಕೂಡ ಬಿಕ್ಕಿ ಬಿಕ್ಕಿ ಅತ್ತರು.

ಗಾಯಕ ಚಂದನ್ ಶೆಟ್ಟಿಯೊಂದಿಗಿನ ವಿಚ್ಛೇದನದ ನಂತರ ನಿವೇದಿತಾ ಗೌಡ ತಮ್ಮ ಜೀವನದ ಸವಾಲುಗಳ ಬಗ್ಗೆ ಮಾತನಾಡಿದ್ದು, ಅವರ ಈ ಭಾವನಾತ್ಮಕ ಕ್ಷಣ ಶೋನಲ್ಲಿ ಎಲ್ಲರ ಗಮನ ಸೆಳೆಯಿತು. ತಂದೆಯ ಬೆಂಬಲವೇ ತಮ್ಮ ಶಕ್ತಿಯ ಮೂಲ ಎಂದು ಒಪ್ಪಿಕೊಂಡ ಅವರು, ಈ ಅನುಭವವನ್ನು ವೇದಿಕೆಯ ಮೇಲೆ ಹಂಚಿಕೊಂಡರು.

Exit mobile version