ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್

BeFunky collage 2026 01 17T153130.144

ಬಿಗ್ ಬಾಸ್ ಖ್ಯಾತಿಯ ಜನಪ್ರಿಯ ನಟಿ ನಿಕ್ಕಿ ತಾಂಬೋಲಿ ಕಣ್ಣಿನ ಸಮಸ್ಯೆಯಿಂದ ಬಳಲಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯಿಂದ ಹೊರಬರುವಾಗ ಅವರ ಬಲಗಣ್ಣಿಗೆ ಬ್ಯಾಂಡೇಜ್ ಹಾಕಿರುವ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ನಿಕ್ಕಿ ತಾಂಬೋಲಿ ಬಾಯ್‌ಫ್ರೆಂಡ್ ಅರ್ಬಾಜ್ ಪಟೇಲ್ ಜೊತೆಗೆ ಆಸ್ಪತ್ರೆಗೆ ತೆರಳಿದ್ದರು. ಪಾಪಾರಾಜಿಗಳು ಕೇಳಿದ ಪ್ರಶ್ನೆಗೆ ನಿಕ್ಕಿ ಪ್ರತಿಕ್ರಿಯಿಸಿ, “ಆಂಖ್ ಮೇ ಒಂದು ಸಿಸ್ಟ್ ಬಂದಿತ್ತು, ಅದಕ್ಕೆ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ. ಅವರು ನಿಧಾನವಾಗಿ ನಡೆದು ಕಾರಿನತ್ತ ಹೋಗುವಾಗ ಅರ್ಬಾಜ್ ಅವರ ಕೈ ಹಿಡಿದುಕೊಂಡು ಸಹಾಯ ಮಾಡುತ್ತಿದ್ದರು.

ಅಭಿಮಾನಿಗಳ ಆತಂಕಕ್ಕೆ ಪ್ರತಿಕ್ರಿಯಿಸಿ ಅರ್ಬಾಜ್ ಪಟೇಲ್ ಹೇಳಿದ್ದು: ನಿಕ್ಕಿಗೆ ಕಣ್ಣಿನ ಇನ್‌ಫೆಕ್ಷನ್ ಆಗಿತ್ತು. ಸ್ವಲ್ಪ ಮೈನರ್ ಪ್ರೊಸೀಜರ್ ಮಾಡಿಸಿಕೊಂಡಿದ್ದಾರೆ. ಒಂದು ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿದೆ. ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬೇರೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಕ್ಕಿ ತಾಂಬೋಲಿ ಬಿಗ್ ಬಾಸ್ 14ರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು ಮತ್ತು ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಾದ ಕಾಂಚನ 3 (ತಮಿಳು), ತಿಪ್ಪಾರ ಮೀಸಂ (ತೆಲುಗು) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮರಾಠಿ ಬಿಗ್ ಬಾಸ್‌ನಲ್ಲೂ ಸೆಕೆಂಡ್ ರನ್ನರ್ ಅಪ್ ಆಗಿದ್ದರು.

ಅಭಿಮಾನಿಗಳು ನಿಕ್ಕಿ ಶೀಘ್ರ ಗುಣಮುಖಳಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಿಕ್ಕಿ ಮತ್ತು ಅರ್ಬಾಜ್ ಜೋಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

Exit mobile version