“NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ

ಗುಟ್ಕಾ (8)

ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ “NH 66” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಶೃತಿ ಹರಿಹರನ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದೆ.

“NH 66” , ಹೆಸರೆ ಹೇಳುವಂತೆ ಒಂದು ಸಂಚಾರಿ ಕಥೆಯಾಗಿದೆ. “One highway many secrets” ಎಂಬ ಅಡಿಬರಹ ಈ ಚಿತ್ರಕ್ಕಿದೆ. ಮೂರು ಮುಖ್ಯಪಾತ್ರಗಳ ಸುತ್ತ ನಿರ್ದೇಶಕರು ರೋಮಾಂಚನಕಾರಿ ಕಥೆ ಹೆಣೆದಿದ್ದಾರೆ. ಇದು ಮಂಗಳೂರಿನಿಂದ ಮುಂಬೈಗೆ ಸಾಗುವ ಮಾರ್ಗದಲ್ಲಿ ನಡೆಯುವ ಕಥೆಯಾಗಿರಲಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಕ್ಯಾಬ್ ಚಾಲಕನಾಗಿ ಅಭಿನಯಿಸುತ್ತಿದ್ದಾರೆ. ಶೃತಿ ಹರಿಹರನ್ ಅವರದು ಪಯಣಿಗರ ಪಾತ್ರ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶೃತಿ ಹರಿಹರನ್, “NH 66” ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರ ಮಾಡಿದ್ದಾರೆ.

ಇತ್ತೀಚೆಗಷ್ಟೇ ಶೃತಿ ಹರಿಹರನ್ ಅವರ ಫಸ್ಟ್ ಲುಕ್ ಅನಾವರಣವಾಗಿದ್ದು, ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಕುರಿತು ಕೂಡ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಆದಷ್ಟು ಬೇಗ ಚಿತ್ರ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

ಗುರುರಾಯರ ಪರಮಭಕ್ತರಾದ ನಿರ್ಮಾಪಕ ಟಿ.ಆರ್.ಮಂಜುನಾಥ್ ರಾಯರ ಅನುಗ್ರಹದಿಂದ ಹಾಗೂ ಚಿತ್ರತಂಡದ ಸಹಕಾರದಿಂದ ನಾವು ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ ಎನ್ನುತ್ತಾರೆ‌. ಟಿ.ಆರ್.ಮಂಜುನಾಥ್ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿರುವ “NH 66” ಚಿತ್ರಕ್ಕೆ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ.

Exit mobile version