ಮತೊಮ್ಮೆ ಸೌತ್ ಕ್ವೀನ್‌ ನಯನತಾರಾಗೆ ಬಾಲಿವುಡ್ ರೆಡ್ ಕಾರ್ಪೆಟ್

ಜವಾನ್ ನಂತರ ಮತ್ತೊಬ್ಬ ಖಾನ್ ಜೊತೆ ನಯನತಾರಾ

Untitled design (19)

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಲೇಡಿ ಸೂಪರ್​ಸ್ಟಾರ್​ ನಯನತಾರಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸೌತ್​ ಸಿನಿಮಾಗಳಲ್ಲಿ ನಟಿಸ್ತಿರೋ ನಯನ, ಇದೀಗ ಮತ್ತೆ ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. ವಿಶೇಷ ಅಂದ್ರೆ ಶಾರೂಖ್​ ಬಳಿಕ ನಯನತಾರಾ ಮತ್ತೊಬ್ಬ ಖಾನ್​ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.

ಲೇಡಿ ಸೂಪರ್​ಸ್ಟಾರ್​ ನಯನತಾರಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸೌತ್​ ಸಿನಿಮಾಗಳಲ್ಲಿ ನಟಿಸುತ್ತಿರುವ ನಯನತಾರಾ ಈಗ ಮತ್ತೆ ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. 2023ರಲ್ಲಿ ಶಾರೂಖ್​ ಖಾನ್​ ಅವರ ಜವಾನ್​ ಚಿತ್ರದ ಮೂಲಕ ನಯನತಾರಾ ಬಿಟೌನ್​ಗೆ ಎಂಟ್ರಿ ಕೊಟ್ಟಿದ್ದರು ಈ ಸಿನಿಮಾದಲ್ಲಿ ನರ್ಮದಾ ರೈ ಎಂಬ ಖಡಕ್​ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿಂಗ್ ಖಾನ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಲೇಡಿ ಸೂಪರ್‌ಸ್ಟಾರ್, ಈಗ ಸಲ್ಲು ಭಾಯ್ ಜೊತೆ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವುದು ಬಿ-ಟೌನ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ದಕ್ಷಿಣದಲ್ಲಿ ಎರಡು ದಶಕಗಳ ಕಾಲ ಆಳ್ವಿಕೆ ನಡೆಸಿದ ನಯನ, ಬಾಲಿವುಡ್‌ನಲ್ಲೂ ತಮ್ಮ ಮ್ಯಾಜಿಕ್ ಮುಂದುವರಿಸಲು ರೆಡಿಯಾಗಿದ್ದಾರೆ.

 

ಮತೊಮ್ಮೆ ಸೌತ್ ಕ್ವೀನ್‌ಗೆ ಬಾಲಿವುಡ್ ರೆಡ್ ಕಾರ್ಪೆಟ್

ಜವಾನ್ ನಂತರ ಮತ್ತೊಬ್ಬ ಖಾನ್ ಜೊತೆ ನಯನತಾರಾ

ಶಾರೂಖ್​ ಗೆಳೆಯ ಬಾಲಿವುಡ್​ ಭಾಯ್​ಜಾನ್​ ಸಲ್ಮಾನ್​ ಖಾನ್​ ಸಿನಿಮಾದಲ್ಲಿ ನಯನತಾರಾ ನಟಿಸಲಿದ್ದಾರೆ ಅನ್ನೋದು ಕನ್ಫರ್ಮ್ ಆಗಿದೆ. ಸಲ್ಮಾನ್ ಖಾನ್ ನಟಿಸಲಿರುವ ಹೊಸ ಸಿನಿಮಾನಲ್ಲಿ ನಯನತಾರಾ ನಾಯಕಿಯಾಗಿ ನಟಿಸಲಿದ್ದು ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಇಬ್ಬರೂ ಸಹ ದಕ್ಷಿಣದವರೇ ಆಗಿದ್ದಾರೆ. ಇದೇ ಕಾರಣಕ್ಕೆ ನಾಯಕಿಯೂ ಸೌತ್​ ಚಿತ್ರರಂಗದವರೇ ಆಗಿದ್ದಾರೆ. ದಕ್ಷಿಣದ ಖ್ಯಾತ ಸಿನಿಮಾ ನಿರ್ಮಾಪಕ ಮತ್ತು ವಿತರಕ ದಿಲ್ ರಾಜು ಅವರು ಸಲ್ಮಾನ್ ಖಾನ್ ನಟಿಸಲಿರುವ ಹೊಸ ಸಿನಿಮಾದ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಪಲ್ಲಿ ನಿರ್ದೇಶನ ಮಾಡಲಿದ್ದಾರೆ.

ನಯನತಾರಾ ಅವರ ಕರಿಯರ್ ಬಗ್ಗೆ ಹೇಳಬೇಕು ಅಂದ್ರೆ, ಅವರು ಕೇವಲ ಸ್ಟಾರ್ ಅಲ್ಲ, ಬ್ರ್ಯಾಂಡ್. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಎಲ್ಲಾ ಭಾಷೆಗಳಲ್ಲೂ ನಾಯಕಿಯಾಗಿ ಮಿಂಚಿದ್ದಾರೆ. ತಮ್ಮ ಪಾತ್ರಗಳ ಆಯ್ಕೆಯಲ್ಲಿ ವಿಭಿನ್ನತೆ ತಂದುಕೊಂಡು, ಫೀಮೇಲ್ ಒರಿಯೆಂಟೆಡ್ ಸಿನಿಮಾಗಳಿಗೂ ಹೊಸ ಟಚ್ ನೀಡಿದ್ದಾರೆ. ಈಗ ಅದೇ ಸ್ಟೈಲ್ ಅನ್ನು ಬಾಲಿವುಡ್‌ಗೆ ಕೂಡ ಕ್ಯಾರಿ ಮಾಡ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅವರ ಫ್ಯಾನ್ಸ್.

ಬಾಲಿವುಡ್‌‌ನಲ್ಲಿ ನಯನ ಪವರ್ ಪ್ಲೇ.. ಸಲ್ಲುಗೆ ನಾಯಕಿ..!

ಶಾರೂಖ್ ನಂತ್ರ ಸಲ್ಲು ಸರದಿ.. ನಯನತಾರಾ ಲಕ್ಕಿ ಚಾರ್ಮ್

ವಂಶಿ ಪೈಡಪಲ್ಲಿ ನಿರ್ದೇಶನ ಶೈಲಿ ಕೂಡ ಈ ಸಿನಿಮಾಗೆ ಪ್ಲಸ್ ಆಗಲಿದೆ. ಮಹರ್ಷಿ, ಊಪಿರಿ, ವಾರಿಸು ಹೀಗೆ ಸಾಮಾಜಿಕ ಸಂದೇಶದ ಜೊತೆಗೆ ಕಮರ್ಶಿಯಲ್ ಎಲೆಮೆಂಟ್ಸ್ ಮಿಕ್ಸ್ ಮಾಡುವಲ್ಲಿ ಅವರು ಮಾಸ್ಟರ್. ಸಲ್ಮಾನ್ ಖಾನ್ ಮಾಸ್ ಇಮೇಜ್‌ಗೆ ನಯನತಾರಾ ಕ್ಲಾಸ್ ಟಚ್ ಸೇರಿದರೆ, ಈ ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್ ಅನ್ನೋ ಲೆಕ್ಕಾಚಾರ ಈಗಲೇ ಶುರುವಾಗಿದೆ.

ವಂಶಿ ಪೈಡಪಲ್ಲಿ ತುಸು ಭಿನ್ನ ರೀತಿಯ ಸಿನಿಮಾ ನಿರ್ದೇಶಕ. ಸಾಮಾಜಿಕ ಸಂದೇಶವುಳ್ಳ ಕಮರ್ಶಿಯಲ್ ಸಿನಿಮಾಗಳನ್ನು ಮಾಡುತ್ತಾ ಯಶಸ್ಸು ಕಾಣುತ್ತಾ ಬಂದಿದ್ದಾರೆ. ಸಾಲು ಸಾಲು ಸೋಲಿನಿಂದ ಕಂಗಾಲಾಗಿರುವ ಸಲ್ಮಾನ್​ಗೆ ಖಾನ್​ಗೆ ಗೆಲುವಿನ ಅಗತ್ಯ ಇದೆ. ಇದೇ ವರ್ಷ ಅವರ ಮಾತೃಭೂಮಿ ಸಿನಿಮಾ ರಿಲೀಸ್​ ಆಗುತ್ತಿದ್ದು, ಆ ಬಳಿಕ ಸಲ್ಮಾನ್​ ಖಾನ್​ ಹೊಸ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಸದ್ಯ ನಯನತಾರಾ ಹಾಗೂ ಸಲ್ಲು ಕೆಮಿಸ್ಟರಿ ಆನ್​ಸ್ಕ್ರೀನ್​ನಲ್ಲಿ ಯಾವ ರೀತಿ ಮೂಡಿಮಾಡಲಿದೆ ಅಂತ ಕಾದುನೋಡಬೇಕಿದೆ.

 

Exit mobile version