ವಸ್ತ್ರವಿನ್ಯಾಸಕ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್ 

Untitled design 2025 06 15t154910.608

ಚಿತ್ರರಂಗದಲ್ಲಿ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ನವರಸ ನಾಯಕ ಜಗ್ಗೇಶ್ ಸೇರಿದಂತೆ ಕನ್ನಡದ ಹಲವಾರು ಸ್ಟಾರ್ ಕಲಾವಿದರಿಗೆ ವಸ್ತ್ರ ವಿನ್ಯಾಸಕರಾಗಿ, ಅಲ್ಲದೆ ಕಿರುತೆರೆಯ ಕಾಮಿಡಿ‌ ಕಿಲಾಡಿಗಳು ಷೋದಲ್ಲೂ ಕೆಲಸ ಮಾಡಿ ಗುರುತಿಸಿಕೊಂಡಿರುವ ಎಂ. ನವೀನ್ ಕುಮಾರ್ (Forever Naveen Kumar) ಅವರೀಗ ಅಮೇರಿಕಾ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್‌ ನಿರ್ಮಾಪಕ ಮೆಹುಲ್ ಕುಮಾರ್ ಮತ್ತು ಗೋವಾದ ಸಮಾಜ ಕಲ್ಯಾಣ ಸಚಿವರಾದ ಸುಭಾಷ್ ದೇಸಾಯಿ ಅವರು ನವೀನ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ನವೀನ್ ಕುಮಾರ್ ಅವರ ತಂದೆ K.S Mohan ಕೂಡ ಗಾರ್ಮೆಂಟ್ಸ್ ಉದ್ಯಮದಲ್ಲಿ ತೊಡಗಿಕೊಂಡವರು. ಅದೇ ನವೀನ್ ಕುಮಾರ್ ಅವರನ್ನು ಫ್ಯಾಷನ್ ಕ್ಷೇತ್ರದೆಡೆಗೆ ಸೆಳೆದಿದೆ.

ADVERTISEMENT
ADVERTISEMENT

ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು.

Exit mobile version