ನಂದಾ ಲವ್ಸ್ ನಂದಿತಾ ಫೇಮ್ ಜಿಂಕೆಮರಿ ಶ್ವೇತಾ ಈಸ್ ಬ್ಯಾಕ್. ಬೆನ್ನಿ ಟೀಚರ್ ಅವತಾರ ತಾಳಿರೋ ಈ ಚೆಲುವೆ, ಒಂದ್ಕಡೆ ಮಕ್ಕಳಿಗೆ ಗಾಂಧೀಜಿ ಅಹಿಂಸಾ ಪಾಠ ಮಾಡ್ತಾನೇ ಕತ್ತಿ ಹಿಡಿದು ರಕ್ತ ಹರಿಸುತ್ತಿದ್ದಾರೆ. ಇನ್ನೂ ಈ ವೈಲೆಂಟ್ ಆಟಕ್ಕೆ ಇಳಿದಿರೋ ಬೆನ್ನಿ ಬೆನ್ನಿಗೆ ಬಾದ್‌ಷಾ ಕಿಚ್ಚ ಸುದೀಪ್ ನಿಂತಿರೋದು ಇಂಟರೆಸ್ಟಿಂಗ್.
- ಕಿಚ್ಚನಿಂದ ಹೆಣ್ಣಿನ ತಾಳ್ಮೆ ಪಾಠ.. ಬೆನ್ನಿ ಟೀಚರ್ ವೈಲೆಂಟ್ ಆಟ
- ಮತ್ತೆ ಸ್ಯಾಂಡಲ್‌ವುಡ್‌ಗೆ ಜಿಂಕೆಮರಿ ಶ್ವೇತಾ ಭರ್ಜರಿ ಕಂಬ್ಯಾಕ್
- ಹೊಂದಿಸಿ ಬರೆದ ರಾಮೇನಹಳ್ಳಿ ಜಗನ್ನಾಥ್ ಹೊಸ ಸಾಹಸ..!
- ಪೆಪೆ ನಿರ್ದೇಶಕನ ನ್ಯೂ ಚಾಪ್ಟರ್.. ಕಥೆ ಕೇಳಿ ಬಾದ್‌ಷಾ ಫಿದಾ
ಜಿಂಕೆ ಮರೀನಾ, ಜಿಂಕೆ ಮರೀನಾ.. ಅಂತಾ ಲೂಸ್‌ಮಾದ ಯೋಗಿ ಜೊತೆ ಕುಣಿದು, ಕುಪ್ಪಳಿಸಿ, ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ನಂದಾ ಲವ್ಸ್ ನಂದಿತಾ ಸಿನಿಮಾ ಮೂಲಕ ಕನ್ನಡ ಕಲಾಭಿಮಾನಿಗಳ ಮುಂದೆ ಬಂದಿದ್ದ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದ್ರು. ಇದೀಗ ಮತ್ತೊಮ್ಮೆ ನಂದಿತಾ ಶ್ವೇತಾ ಸ್ಯಾಂಡಲ್‌ವುಡ್‌ಗೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ.
ಅಂದಹಾಗೆ ನಂದಿತಾ ಶ್ವೇತಾನ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಕರೆತರುವ ಪ್ರಯತ್ನ ಮಾಡಿರೋದು ಹೊಂದಿಸಿ ಬರೆಯಿರಿ ಸಿನಿಮಾ ಖ್ಯಾತಿಯ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಹಾಗಂತ ಶ್ವೇತಾಗೆ ಅವರು ಆ್ಯಕ್ಷನ್ ಕಟ್ ಹೇಳುತ್ತಿಲ್ಲ. ಬದಲಿಗೆ ಅವ್ರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಪೆಪೆ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀಲೇಶ್ ಎಸ್ ನಾಯರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಲ್ಲಿಗೆ ಇದೊಂದು ಸಿನಿಮೋತ್ಸಾಹಿ ಯುವತಂಡ ಅನ್ನೋದು ಪಕ್ಕಾ ಆಗಿದೆ.
ಈ ಸ್ಪೆಷಲ್ ಕಾಂಬೋ ಸಿನಿಮಾದ ಹೆಸರು ಬೆನ್ನಿ. ಚಿತ್ರದ ಫಸ್ಟ್‌ಲುಕ್ ಟೀಸರ್ ಕೂಡ ಲಾಂಚ್ ಆಗಿದ್ದು, ನೋಡುಗರ ಹುಬ್ಬೇರಿಸಿದೆ. ಯೆಸ್.. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಫಸ್ಟ್ ಝಲಕ್ ರಿಲೀಸ್ ಆಗಿದೆ. ನಟಿ ಶ್ವೇತಾ ಇಲ್ಲಿ ಬೆನ್ನಿಯಾಗಿ ಟೈಟಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳ ವಿರುದ್ಧ ನಡೆಯುವ ಪ್ರಸ್ತುತ ಕಾಲಘಟ್ಟದ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಫಸ್ಟ್ ಲುಕ್ ಗೆ ಕಿಚ್ಚ ಖಡಕ್ ಆಗಿ ವಾಯ್ಸ್ ಕೂಡ ಕೊಟ್ಟಿದ್ದು, ಕಥೆ ಕೇಳಿ ಫುಲ್ ಫಿದಾ ಆಗಿದ್ದಾರಂತೆ ಬಾದ್‌ಷಾ.
ಒಂದಲ್ಲ ಎರಡೆರಡು ಶೇಡ್‌ಗಳಲ್ಲಿ ನಂದಿತಾ ಶ್ವೇತಾ ಕಾಣಸಿಗಲಿದ್ದು, ಒಂದ್ಕಡೆ ಸ್ಕೂಲ್‌ನಲ್ಲಿ ಟೀಚರ್ ಆಗಿದ್ದುಕೊಂಡು, ಮಕ್ಕಳಿಗೆ ಗಾಂಧಿಯ ಅಹಿಂಸಾ ಪಾಠ ಮಾಡ್ತಾರೆ. ಮತ್ತೊಂದ್ಕಡೆ ಆಕೆಯ ತಾಳ್ಮೆಯನ್ನ ಪರೀಕ್ಷಿಸಿದವರಿಗೆ ಹೆಡೆಮುರಿ ಕೂಡ ಕಟ್ಟುತ್ತಾರೆ. ಕತ್ತಿ ಹಾಗೂ ಸುತ್ತಿಗೆ ಹಿಡಿದು ರಕ್ತ ಹರಿಸೋ ಆ ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಡೆಡ್ಲಿ ಹಾಗೂ ಟೆರಿಫಿಕ್ ಆಗಿ ಕಾಣ್ತಾರೆ.
ಸೌತ್ ಸಿನಿದುನಿಯಾದ ಪ್ರಮುಖ ಕಲಾವಿದರು ಈ ಬೆನ್ನಿಗೆ ಜೊತೆಯಾಗಲಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ತಯಾರಾಗ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ, ಪ್ರೆಸೆಂಟ್ ಮಾಡ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಸಿನಿಮಾಗಿದೆ. ಸದಾ ಒಳ್ಳೆಯ ಕಂಟೆಂಟ್ ಬೇಸ್ಡ್ ಚಿತ್ರಗಳ ಬಗ್ಗೆ ಒಲವಿರೋ ರಾಮೇನಹಳ್ಳಿ ಜಗನ್ನಾಥ್ ಹಾಗೂ ಬೆನ್ನಿ ಟೀಂಗೆ ಕಿಚ್ಚನ ಬೆಂಬಲ ಸಿಕ್ಕಿರೋದು ಮ್ಯಾಕ್ಸಿಮಮ್ ಬಲ ಬಂದಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
