ಗುಂಡನನ್ನ ಚಾರ್ಲಿಗೆ ಹೋಲಿಸಿದ ಬಾದ್ ಷಾ ಸುದೀಪ್

ನಾನು ಮತ್ತು ಗುಂಡ-2 ಟ್ರೈಲರ್‌ಗೆ ಬೊಂಬಾಟ್ ರೆಸ್ಪಾನ್ಸ್

11 (33)

ಮನುಷ್ಯ ಹಾಗೂ ಶ್ವಾನದ ನಡುವೆ ಅವಿನಾಭಾವ ಸಂಬಂಧವಿದೆ. ಬಹುತೇಕ ಮಂದಿ ಮನೆಯಲ್ಲಿ ಶ್ವಾನಗಳು ಕೂಡ ಫ್ಯಾಮಿಲಿ ಮೆಂಬರ್ಸ್‌ನಂತೆ ಬೆರೆತು ಹೋಗಿರುತ್ತವೆ. ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಶ್ವಾನ ಸಿನಿಮಾ ಬರ್ತಿದೆ. ಯೆಸ್.. ನಾನು & ಗುಂಡ-2 ಟ್ರೈಲರ್‌ಗೆ ಬಾದ್‌ ಷಾ ಕಿಚ್ಚ ಸುದೀಪ್ ಭೇಷ್ ಅಂದಿದ್ದಾರೆ.

ನಾನು & ಗುಂಡ.. ಐದು ವರ್ಷಗಳ ಹಿಂದೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ನಟಿಸಿದ ಶ್ವಾನದ ಕುರಿತ ಸಿನಿಮಾ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ವಿನೂತನ ಪ್ರಯತ್ನವಾಗಿತ್ತು. ಆದ್ರೀಗ ಅದರ ಸೀಕ್ವೆಲ್ ಸಿನಿಮಾ ಬರ್ತಿದೆ. ಟ್ರೈಲರ್ ಲಾಂಚ್ ಆಗಿದ್ದು, ಟೆಕ್ನಿಕಲಿ ಸಖತ್ ಸೌಂಡಿಂಗ್ ಆಗಿದೆ. ಅಲ್ಲದೆ, ಎಮೋಷನಲಿ ನೋಡುಗರನ್ನ ಕಟ್ಟಿಹಾಕ್ತಿದೆ.

ಯೆಸ್.. ಇದು ನಾನು ಮತ್ತು ಗುಂಡ-2 ಸಿನಿಮಾದ ಹೊಚ್ಚ ಹೊಸ ಟ್ರೈಲರ್. ಈ ಬಾರಿ ಗುಂಡ ಅನ್ನೋ ಶ್ವಾನದ ಜೊತೆಗೆ ಜೋಶ್ ಖ್ಯಾತಿಯ ರಾಕೇಶ್ ಅಡಿಗ ಹಾಗೂ ಹೆಂಗೆ ನಾವು ಫೇಮ್ ರಚನಾ ಇಂದರ್ ಮುಖ್ಯಭೂಮಿಕೆಯಲ್ಲಿ ಕಾಣಸಿಗಲಿದ್ದು, ರಘು ಹಾಸನ್ ಕನಸಿಗೆ ನೀರೆರೆದಿದ್ದಾರೆ.

ಟಿಪಿಕಲ್ ಡ್ರಾಮಾ ಶೈಲಿಯ ಟ್ರೈಲರ್ ಇದಾಗಿದ್ದು, ಇಲ್ಲಿ ಮನುಜ ಹಾಗೂ ಶ್ವಾನದ ನಡುವಿನ ಎಮೋಷನಲ್ ಬಾಂಡಿಂಗ್ ಹೈಲೈಟ್ ಆಗಿದೆ. ಕಾಮಿಡಿ, ಸಸ್ಪೆನ್ಸ್, ಎಮೋಷನ್ಸ್ ಸೇರಿದಂತೆ ಎಲ್ಲವೂ ಪರ್ಫೆಕ್ಟ್ ಆಗಿ ಬ್ಲೆಂಡ್ ಆಗಿವೆ. ನಿರ್ದೇಶಕ ರಘು ಹಾಸನ್ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಎಫರ್ಟ್‌ ಹಾಕಿದ್ದು, ಬಹುದೊಡ್ಡ ತಾರಾಗಣದೊಂದಿಗೆ ಶ್ವಾನದ ಬಳಿ ನಟನೆ ತೆಗೆಸಿರೋದು ನಿಜಕ್ಕೂ ಚಾಲೆಂಜಿಂಗ್ ಅನಿಸಲಿದೆ.

ಟ್ರೈಲರ್ ನೋಡಿ ಭೇಷ್ ಎಂದಿರೋ ಬಾದ್ ಷಾ ಕಿಚ್ಚ ಸುದೀಪ್, ಇದೊಂದು ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಸಿನಿಮಾ. ಮೊದಲ ಭಾಗಕ್ಕೂ ನಾನು ಸಾಥ್ ನೀಡಿದ್ದೆ. ಪೆಟ್ ಲವರ್ಸ್‌ ಗೆ ಇದೊಂದು ವಿಶೇಷ ಅನುಭವ ನೀಡಲಿದೆ. ರಕ್ಷಿತ್ ಶೆಟ್ಟಿಯ 777 ಚಾರ್ಲಿಯಂತೆ ಇದು ಕೂಡ ಗೆಲ್ಲಲಿದೆ ಅಂತೆಲ್ಲಾ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸಾಧು ಕೋಕಿಲಾ, ನಯನಾ, ಜಿಜಿ, ಅವಿನಾಶ್, ವಿಜಯ್ ಚೆಂಡೂರು ಹೀಗೆ ಸಾಕಷ್ಟು ಮಂದಿ ನುರಿತ ಕಲಾವಿದರ ದಂಡು ನಾನು & ಗುಂಡ ಚಿತ್ರಕ್ಕಿದೆ. ಆರ್ ಪಿ ಪಟ್ನಾಯಕ್ ಸಂಗೀತ ಹಾಗೂ ಥನ್ವಿಕ್ ಸಿನಿಮಾಟೋಗ್ರಫಿ ಸಿನಿಮಾಗಿದ್ದು, ಕೆ ಎಂ ಪ್ರಕಾಶ್ ಶಾರ್ಪ್ ಎಡಿಟಿಂಗ್ ಕೂಡ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಈ ಸಿನಿಮಾ ತೆರೆಗೆ ಬರ್ತಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬೋನಲ್ಲಿ ತಯಾರಾದ 777 ಚಾರ್ಲಿ ಸಿನಿಮಾ ಬಳಿಕ ಬರ್ತಿರೋ ಶ್ವಾನದ ಕುರಿತಾದ ಮತ್ತೊಂದು ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ ಇದಾಗಿದ್ದು, ಸಿಜಿ, ಸ್ಪೆಷಲ್ ಎಫೆಕ್ಟ್ಸ್ ಎಲ್ಲವೂ ಸಿನಿಮಾ ಮೇಲಿನ ಭರವಸೆ ಹೆಚ್ಚಿಸಿವೆ. ಸಿನಿಮಾ ಇದೇ ಜೂನ್‌‌ನಲ್ಲಿ ತೆರೆಗೆ ಬರಲಿದ್ದು, ಡಾಗ್ ಲವರ್ಸ್‌ ಕಣ್ಣುಗಳು ಒದ್ದೆಯಾಗೋದು ಕನ್ಫರ್ಮ್‌. ಫ್ಯಾಮಿಲಿ ಸಮೇತ ನಾನು & ಗುಂಡನನ್ನ ನೋಡೋಕೆ ಕಾಯ್ತಿರೋರಿಗೆ ಇದು ಜಸ್ಟ್ ಟ್ರೈಲರ್. ಪಿಕ್ಚರ್ ಅಭಿ ಬಾಕಿ ಹೈ ಅಂತ ಹೇಳಬಹುದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version