ಮೈಸೂರಲ್ಲಿ ಪ್ರೇಮದೂರಿನ ಶ್ರೀರಾಮ..ಅವಿಸ್ಮರಣೀಯ ಪ್ರೀತಿ, ಪ್ರೇಮ

ಜನರ ಪ್ರೀತಿಗೆ ಲಟಿಕೆ ತೆಗೆದ ಸಂತು ಅಲಿಯಾಸ್ ಶ್ರೀರಾಮ್..!!

Untitled design 2026 10 22T171441.174

ಮೈಸೂರು ದಸರಾದಲ್ಲಿ ಸ್ಯಾಂಡಲ್‌ವುಡ್‌ ಕಲಾವಿದರ ಹವಾ ಜೋರಾಗಿದ್ದು, ಪ್ರೇಮದ ಊರಲಿ ಖ್ಯಾತಿಯ ನಾಯಕ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಜನರ ಗಮನ ಸೆಳೆದಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಫಿದಾ ಆಗಿ ಶ್ರೀರಾಮ್ ಲಟಿಕೆ ತೆಗೆದಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ಮೈಸೂರು ದಸರಾ ಈ ಬಾರಿ ಎಂದಿಗಿಂತಲೂ ಹೆಚ್ಚು ವಿಶೇಷವಾಗಿತ್ತು. ಇಡೀ ಸ್ಯಾಂಡಲ್‌ವುಡ್‌ ತಾರೆಯರು ದಸರಾ ಸಡಗರದಲ್ಲಿ ಭಾಗಿಯಾಗಿದ್ರೂ, ಪ್ರೇಮದ ಊರಲಿ ಸಿನಿಮಾದ ವಿಷಯವೇ ಮುಂಚೂಣಿಯಲ್ಲಿತ್ತು. ಅದರಲ್ಲೂ ಈ ಚಿತ್ರದ ನಾಯಕ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ದಸರಾ ಹಬ್ಬದ ಪ್ರಮುಖ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ರು. ದಸರಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ್ದ ಅಂಬಾರಿಯ ಓಪನ್ ಬಸ್‌ನಲ್ಲಿ ನಿಂತು ಕನ್ನಡದ ಕಲಾವಿದರು ಜನರತ್ತ ಕೈಬೀಸಿ ಸಂಭ್ರಮಿಸಿದರು. ಸಿನಿಮಾ ಪ್ರೇಮಿಗಳ ಸಡಗರವನ್ನು ಕಂಡು ನಾಯಕ ಶ್ರೀರಾಮ್ ತುಂಬಾನೆ ಖುಷಿಪಟ್ಟರು.

ಇದೇ ವೇಳೆ ನಾಯಕ ಶ್ರೀರಾಮ್ ಜನರನ್ನ ನೋಡಿ ಪ್ರೀತಿಯಿಂದಲೇ ಲಟಿಕೆ ತೆಗೆದ ವಿಶೇಷ ಕ್ಷಣವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕೇವಲ ತೆರೆಮೇಲೆ ಮಾತ್ರವಲ್ಲದೆ, ರಿಯಲ್ ಲೈಫಿನಲ್ಲೂ ಅಭಿಮಾನಿಗಳೊಂದಿಗೆ ಬೆರೆತ ಇವರ ಸರಳತೆ ಎಲ್ಲರ ಮನಗೆದ್ದಿದೆ. ಇನ್ನು ಪ್ರೇಮದ ಊರಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಓಟ ಮುಂದುವರೆಸಿದ್ದು ಈಗಾಗಲೇ 100ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಜೋಡಿಗೆ ಮೈಸೂರು ಜನತೆಯಿಂದಲೂ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

​ಮೈಸೂರಿನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಒಂದೆಡೆ ಜಮಾಯಿಸಿದ್ದ ಈ ವಿಶೇಷ ಕ್ಷಣದಲ್ಲಿ, ಶ್ರೀರಾಮ್ ಹಿರಿಯ ನಟಿ ಜಯಮಾಲಾ ಅವರ ಬಳಿ ತೆರಳಿ ಆಶೀರ್ವಾದ ಪಡೆದರು. ಮೊದಲ ಸಿನಿಮಾದಲ್ಲೇ ಭರ್ಜರಿ ಹಿಟ್ ಕಂಡು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಎಬ್ಬಿಸಿರುವ ಶ್ರೀರಾಮ್ ಅವರ ಈ ವಿನಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರಿನ ಬೀದಿಗಳಲ್ಲಿ ಕೇಳಿಬಂದ ಪ್ರೇಮದ ಊರಲಿ ಯಶಸ್ಸಿನ ಸದ್ದು ಈಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

ಅಂದಹಾಗೆ ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲಾ ಸ್ಟಾರ್ಸ್ ಈ ಬಾರಿಯ ಮೈಸೂರು ದಸರಾಗೆ ಹೊಸ ಮೆರುಗು ತಂದರು. ಅಂಬಾರಿಯನ್ನ ಕಣ್ತುಂಬಿಕೊಂಡಷ್ಟೇ ಜನ.. ಸೆಲೆಬ್ರಿಟಿಗಳನ್ನ ಕೂಡ ನೋಡಿ ಸಂತಸ ಪಟ್ಟರು. ಇದ್ರಿಂದ ಬಹುತೇಕ ಎಲ್ಲಾ ಸ್ಟಾರ್ ಫ್ಯಾನ್ಸ್ ಅವ್ರ ನೆಚ್ಚಿನ ನಟ, ನಟಿಯರನ್ನ ನೋಡಿ ಸಂಭ್ರಮಿಸಿದ್ದು ಸುಳ್ಳಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version