ನಾಲ್ಕು ಹೊಸ ಚಿತ್ರಗಳಲ್ಲಿ ನಟಿಸಲಿದ್ದಾರೆ ಸುರದ್ರೂಪಿ ನಟ ಮಿಲಿಂದ್

Untitled design 2025 08 09t212801.282

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದ “ಅನ್ ಲಾಕ್ ರಾಘವ” ಚಿತ್ರದ ಮೂಲಕ ಮಿಲಿಂದ್ ನವ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಈ ಚಿತ್ರದಲ್ಲಿ ನಟನೆ ಹಾಗೂ ನೃತ್ಯದ ಮೂಲಕ ಮಿಲಿಂದ್ ನಾಡಿನ ಜನರ ಮನ ಗೆದ್ದರು. “ಅನ್ ಲಾಕ್ ರಾಘವ” ಚಿತ್ರ ನೋಡಿದ ಅಭಿಮಾನಿಗಳು ಕನ್ನಡಕ್ಕೆ ಮತ್ತೊಬ್ಬ ಸುರದ್ರೂಪಿ ನಟ ಸಿಕ್ಕ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದರು.

ವರಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಮಿಲಿಂದ್,‌ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ಅನ್ ಲಾಕ್ ರಾಘವ” ಚಿತ್ರದ ನಂತರ ಸಾಕಷ್ಟು ಚಿತ್ರಗಳ ಕಥೆ ಕೇಳಿದೆ. ಅದರಲ್ಲಿ ನಾಲ್ಕು ಕಥೆಗಳು ಬಹಳ ಇಷ್ಟವಾಗಿದೆ. ಈ ನಾಲ್ಕು ಚಿತ್ರಗಳು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಾಗಿರುತ್ತದೆ‌. ನಾಲ್ಕು ಬೇರೆ ಬೇರೆ ನಿರ್ಮಾಣ ಸಂಸ್ಥೆಗಳು ನಿರ್ಮಿಸುತ್ತಿರುವ ಈ ಚಿತ್ರಗಳನ್ನು ನಾಲ್ಕು ಜನ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಈ ಚಿತ್ರಗಳ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇನೆ. ನನಗೆ ಮೊದಲಿನಿಂದಲೂ ತಾವು ನೀಡುತ್ತಿರುವ ಪ್ರೀತಿ ಹಾಗೂ ಸಹಕಾರ ಮುಂದೆಯೂ ಹೀಗೆ ಮುಂದುವರೆಯಲಿ ಎಂದು ಮಿಲಿಂದ್ ತಿಳಿಸಿದ್ದಾರೆ.

  • Categories: ಸಿನಿಮಾ
  • Tags:
  • Exit mobile version