ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ನ ಆಕ್ಷನ್ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಭರ್ಜರಿ ಆಕ್ಷನ್ ಸೀನ್‌ಗಳು, ಕಿಚ್ಚನ ಖದರ್ ಲುಕ್ ಮತ್ತು ಪವರ್‌ಪ್ಯಾಕ್ಡ್ ಡೈಲಾಗ್‌ಗಳು ಟೀಸರ್‌ನಲ್ಲಿ ಕಂಡುಬಂದಿವೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಎಂದು ಕಾಮೆಂಟ್ ಮಾಡುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಟೀಸರ್ ಆರಂಭದಲ್ಲೇ ಮಾರ್ಕ್ ಬಗ್ಗೆ ಮಾತಾಡುವ ಮನಸ್ಸಿನೊಳಗೆ ಮಾತಾಡ್ಬೇಕು ಎಂಬ ಡೈಲಾಗ್ ಕಿಚ್ಚನ ಧ್ವನಿಯಲ್ಲಿ ಮೊಳಗುತ್ತದೆ. ಆ ನಂತರ ಆಕ್ಷನ್ ಸೀಕ್ವೆನ್ಸ್‌ಗಳು ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಸೈಕೋ ಸೈತಾನ್ ಹಾಡು ಟೀಸರ್‌ಗೆ ಬ್ಯಾಕ್‌ಗ್ರೌಂಡ್ ಸ್ಕೋರ್ ಆಗಿ ಬಳಕೆಯಾಗಿದ್ದು, ಫ್ಯಾನ್ಸ್ ಇದನ್ನು ಮೆಚ್ಚಿಕೊಂಡಿದ್ದಾರೆ. ಮೊದಲು ಬಿಡುಗಡೆಯಾದ ಟೈಟಲ್ ಟೀಸರ್ ಕೂಡ ಭಾರೀ ಸದ್ದು ಮಾಡಿತ್ತು. ಈಗ ಆಕ್ಷನ್ ಟೀಸರ್ ನಿರೀಕ್ಷೆಗಳನ್ನು ಮೀರಿ ಬಂದಿದೆ.
ಮಾರ್ಕ್ ಟೀಸರ್ ರಿಲೀಸ್: ಕಿಚ್ಚ ಸುದೀಪ್ ಭರ್ಜರಿ ಆಕ್ಷನ್..!!
