ಗ್ಯಾಂಗ್‌ಸ್ಟರ್ಸ್ ವಾರ್.. ಬಾದ್‌ಷಾ ಮಾರ್ಕ್ ಮ್ಯಾಜಿಕ್..!

ಇಯರ್ ಎಂಡ್‌ಗೆ ಥಿಯೇಟರ್‌‌ನಲ್ಲಿ ಮಾಸ್ ಜಾತ್ರೆ ಫಿಕ್ಸ್

Untitled design 2025 11 08t134814.562

ಅಬ್ಬಬ್ಬಾ.. ಈ ವರ್ಷಾಂತ್ಯಕ್ಕೂ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋಕೆ ಬರ್ತಿದ್ದಾರೆ ಬಾದ್‌ಷಾ ಕಿಚ್ಚ ಸುದೀಪ್. ದಾದಾ ಯಾರ್ ಗೊತ್ತಾ..? ಅನ್ನೋ ಸೈಕೋ ಸೈತಾನ್ ಸಾಂಗ್‌ನಿಂದ ಸೈಕ್ ಹಿಡಿಸಿದ್ದ ಸುದೀಪ್, ಇದೀಗ ಹೈ ವೋಲ್ಟೇಜ್ ಗ್ಯಾಂಗ್‌ಸ್ಟರ್ ಟೀಸರ್‌ನಿಂದ ಹುಬ್ಬೇರಿಸಿದ್ದಾರೆ. ಹಾಗಾದ್ರೆ ಮಾರ್ಕ್ ಟೀಸರ್ ಹೇಗಿದೆ ಹೇಳ್ತೀವಿ ಈ ಸ್ಟೋರಿ ನೋಡಿ.

ಬಾದ್‌ಷಾ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಮಾರ್ಕ್ ಲೇಟೆಸ್ಟ್ ಟೀಸರ್ ಝಲಕ್. ಹೀರೋ ಇಂಟ್ರಡಕ್ಷನ್ ಟೀಸರ್ ಇದಾಗಿದ್ದು, ಹಿಂದೆಂದೂ ಕಂಡಿರದ ಹೈ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್ ಆಗಿ ಕಿಚ್ಚ ಕಿಚ್ಚು ಹೊತ್ತಿಸಿದ್ದಾರೆ. ಹೌದು.. ಸಿಕ್ಕಾಪಟ್ಟೆ ಮಾಸ್ ಆಗಿರೋ ಈ ಟೀಸರ್‌ನಿಂದ ಥಿಯೇಟರ್ ಅಂಗಳದಲ್ಲಿ ಈ ವರ್ಷಾಂತ್ಯಕ್ಕೆ ಮಾಸ್ ಜಾತ್ರೆ ಗ್ಯಾರಂಟಿ ಅನ್ನೋ ಹಿಂಟ್ ನೀಡಿದ್ದಾರೆ ಆಲ್ ಇಂಡಿಯಾ ಕಟೌಟ್.

ಗ್ಯಾಂಗ್‌ಸ್ಟರ್ಸ್ ವಾರ್.. ಬಾದ್‌ಷಾ ಮಾರ್ಕ್ ಮ್ಯಾಜಿಕ್..!

ಹೈ ವೋಲ್ಟೇಜ್ ಆ್ಯಕ್ಷನ್ ದೃಶ್ಯ.. ದಂಗಾದ ಸೌತ್ ದುನಿಯಾ

ಮಾರ್ಕ್ ಬಗ್ಗೆ ಮಾತಾಡುವಾಗ ಮನಸ್ಸಿನೊಳಗೆ ಮಾತಾಡ್ಬೇಕು.. ಇಲ್ಲ ಅಂದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಟೀಸರ್ ಸಾಕ್ಷಿ ಆಗಿದೆ. ಭರ್ಜರಿ ಆಕ್ಷನ್ ಸೀನ್ಸ್‌‌ನಿಂದ ಮಾರ್ಕ್‌ ಮಸಲತ್ತು ಸಖತ್ ಜೋರಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ. ಕಳದೆ ವರ್ಷ ಇದೇ ಕಿಚ್ಚನ ಜೊತೆ ಮ್ಯಾಕ್ಸ್ ಸಿನಿಮಾ ಮಾಡಿದ್ದ ವಿಜಯ್ ಕಾರ್ತಿಕೇಯ ಈ ಬಾರಿ ಮಾರ್ಕ್‌ ಚಿತ್ರ ತಯಾರಿಸಿದ್ದು, ಇದು ಕೂಡ ಪ್ರೇಕ್ಷಕರನ್ನ ಹಂಡ್ರೆಡ್ ಪರ್ಸೆಂಟ್ ರುಚಿಸಲಿದೆ.

ಕಿಚ್ಚನ ಈ ಮಾಸ್ ಖದರ್ ನೋಡಿ, ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಅಂತ ಕಮೆಂಟ್ ಮಾಡ್ತಿದ್ದಾರೆ ಸುದೀಪಿಯೆನ್ಸ್ ಆ್ಯಂಡ್ ಚಿತ್ರಪ್ರೇಮಿಗಳು. ಈ ಹಿಂದೆ ಬಂದಂತಹ ಸೈಕೋ ಸೈತಾನ್ ಹಾಡನ್ನ ಫ್ಯಾನ್ಸ್ ಮೆಚ್ಚಿಕೊಂಡಿದ್ರು. ಅದಕ್ಕೂ ಮೊದಲು ಬಂದ ಟೈಟಲ್ ಟೀಸರ್ ಅನ್ನೂ ಇಷ್ಟಪಟ್ಟಿದ್ರು. ಆದ್ರೀಗ ಟೀಸರ್ ಹೇಗಿರಲಿದೆ ಅನ್ನೋ ನಿರೀಕ್ಷೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪವರ್ ಪ್ಯಾಕ್ಡ್ ಹೈ ವೋಲ್ಟೇಜ್ ಆ್ಯಕ್ಷನ್ ಟೀಸರ್ ನೋಡಿ ಕಿಚ್ಚನ ಬಳಗ ದಿಲ್‌ಖುಷ್ ಆಗಿದೆ.

ಇಯರ್ ಎಂಡ್‌ಗೆ ಥಿಯೇಟರ್‌‌ನಲ್ಲಿ ಮಾಸ್ ಜಾತ್ರೆ ಫಿಕ್ಸ್

ಅಂದು ಸೈಕೋ ಸೈತಾನ್.. ಇಂದು ಬೆಂಕಿ ಚೆಂಡಿನ ಟೀಸರ್

ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿರೋ ಕಿಚ್ಚ, ಗ್ಯಾಂಗ್‌ಸ್ಟರ್‌‌ಗಳಿಗೆ ಗುನ್ನ ಇಡೋ ರೋಲ್‌ನಲ್ಲಿ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದಾರೆ. ಮ್ಯಾಕ್ಸ್ ಚಿತ್ರದಲ್ಲಿ ವಿಜಯ್ ಕಾರ್ತಿಕೇಯ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದಿದ್ರು. ಈ ಬಾರಿ ಕೂಡ ಅಂಥದ್ದೇ ಪ್ರಯತ್ನ ನಡೀತಿದೆ. ಮತ್ತಷ್ಟು ರೋಚಕವಾಗಿ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್‌, ಅಜನೀಶ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಅಜಯ್ ಮಾರ್ಕಂಡೇ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಹೇರ್‌ಸ್ಟೈಲ್ ಬದಲಿಸಿ ದರ್ಶನ ಕೊಟ್ಟಿದ್ರು. ಇದೀಗ ಮಾರ್ಕ್‌ ಇದೇ ಡಿಸೆಂಬರ್ ತಿಂಗಳಾಂತ್ಯಕ್ಕೆ ಕ್ರಿಸ್‌ಮಸ್ ವಿಶೇಷ ಥಿಯೇಟರ್‌‌ನಲ್ಲಿ ಧೂಳೆಬ್ಬಿಸೋದು ಪಕ್ಕಾ ಆಗಿದೆ.

 

 

Exit mobile version