ಮಜಾ ಟಾಕೀಸಲ್ಲಿ ವುಮನ್ಸ್ ಡೇ ಸ್ಪೆಷಲ್!

ಜಯಮಾಲಾ, ಅಂಬಿಕಾ, ಗಿರಿಜಾ ಲೋಕೇಶ್, ವಿನಯಾ ಪ್ರಸಾದ್ - ಸವಿನೆನಪುಗಳ ಸಂಗಮ!

Befunky collage 2025 03 06t075724.565

ಈ ಶನಿವಾರ ಮತ್ತು ಭಾನುವಾರ (ಮಾರ್ಚ್ 8 ಮಾರ್ಚ್ 9) ‘ವಿಶ್ವ ಮಹಿಳಾ ದಿನ’ದ ಪ್ರಯುಕ್ತ, ರಾತ್ರಿ 9 ರಿಂದ 10:30 ರವರೆಗೆ
ಕಲರ್ಸ್ ಕನ್ನಡದ ಜನಪ್ರಿಯ ಶೋ ‘ಮಜಾ ಟಾಕೀಸ್’ನಲ್ಲಿ ಕನ್ನಡದ ಜನಪ್ರಿಯ ತಾರೆಮಣಿಯರು ಪ್ರತ್ಯಕ್ಷವಾಗಲಿದ್ದಾರೆ.

ಕನ್ನಡ ಚಿತ್ರರಂಗದ ಪ್ರಸಿದ್ಧ ತಾರೆಯರಾದ ಜಯಮಾಲಾ, ಅಂಬಿಕಾ, ಗಿರಿಜಾ ಲೋಕೇಶ್ ಹಾಗೂ ವಿನಯಾ ಪ್ರಸಾದ್ ಈ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.

ಈ ತಾರೆಯರು ತಮ್ಮ ತಾರೆಲೋಕದ ಅವಿಸ್ಮರಣೀಯ, ಖುಷಿಯಾದ ಪ್ರಸಂಗಗಳನ್ನು ಇಲ್ಲಿ ಹಂಚಿಕೊಂಡು. ಈ ಸಂಚಿಕೆಯ ಮಜಾವನ್ನು ಹೆಚ್ಚಿಸಿದೆ.

ಡಾ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರ ಜತೆ ನಡೆದ ಬಲು ಅಪರೂಪದ ಕಥೆಗಳು ಈ ಸ್ಪೆಷಲ್ ಎಪಿಸೋಡಿನಲ್ಲಿವೆ.
ಹಾಗೆಯೇ ಒಂದು ವಿಶೇಷ ಗಿಮಿಕ್ ಇಲ್ಲಿ ಅನಾವರಣಗೊಂಡಿದೆ. ಒಂದು ಸಾಲನ್ನು ಕೊಟ್ಟು ಈ ಕಲಾವಿದರು ‘ನವರಸ’ದಲ್ಲಿ ಅದನ್ನು ಅಭಿನಯಿಸಿ ತೋರಿಸಿರುವುದು ಕಚಗುಳಿ ಇಡುತ್ತದೆ.

ಇಷ್ಟೆಲ್ಲ ಮನರಂಜನೆ ನಡುವೆ ಒಂದು ಹೃದಯಸ್ಪರ್ಶಿ ಘಟನೆಗೂ ಈ ಸಂಚಿಕೆ ಸಾಕ್ಷಿಯಾಗಿದೆ. ಅದೇನೆಂದರೆ ಎರಡೂ ಕೈಗಳಿಲ್ಲದ ಬಳ್ಳಾರಿಯ ಲಕ್ಷೀದೇವಿಯವರು ತಮ್ಮ ಪಾದಗಳಿಂದ ಸೃಜನ್ ಗೆ ಪತ್ರ ಬರೆದಿರುವುದು.


ಒಟ್ಟಿನಲ್ಲಿ ‘ಮಜಾ ಟಾಕೀಸ್’ನ ಈ ಮಹಾನ್ ನಟಿಯರ ಮಹಾಸಂಗಮ – ಭರಪೂರ ಮನರಂಜನೆ ಕೊಟ್ಟು – ‘ಮಹಿಳಾ ದಿನ’ವನ್ನು ವಿಶೇಷವಾಗಿ ಆಚರಿಸಿರುವುದನ್ನು ‘ಕಲರ್ಸ್ ಕನ್ನಡ’ದಲ್ಲಿ ತಪ್ಪದೇ ನೋಡಿ!

Exit mobile version