ಈ ವಾರ ರಿಲೀಸ್ ಆಗ್ತಿರೋ ಲವ್ ಓಟಿಪಿ ಸಿನಿಮಾ ರಿಲೀಸ್‌ಗೂ ಮೊದಲೇ ಪ್ರೀಮಿಯರ್ ಶೋಗಳಿಂದ ಗೆಲುವಿನ ಓಟಿಪಿ ಪಡೆದಾಗಿದೆ. ಅಕಿರ ಅನೀಶ್ ಒಂದೂವರೆ ದಶಕದ ಕನಸು ಕೊನೆಗೂ ನನಸಾಗಿದೆ. ಕನ್ನಡದ ಜೊತೆಗೆ ಪಕ್ಕದ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿರೋ ಅನೀಶ್, ಯೂತ್‌ಫುಲ್ ಸಬ್ಜೆಕ್ಟ್‌ನಿಂದ ಸಕ್ಸಸ್ ಸಿಹಿ ಕಂಡಿದ್ದಾರೆ. ಹಾಗಾದ್ರೆ ಹೇಗಿದೆ ಲವ್ ಓಟಿಪಿ..? ಕಥೆ ಏನು..? ಟೀಂ ಏನು ಹೇಳುತ್ತೆ ಅಂತೀರಾ..? ಇಲ್ಲಿದೆ ನೋಡಿ.
- ರಿಲೀಸ್‌ಗೂ ಮೊದಲೇ ಅನೀಶ್‌ಗೆ ಸಿಕ್ತು ಗೆಲುವಿನ ಓಟಿಪಿ
- ಕನ್ನಡದ ಜೊತೆ ಆಂಧ್ರದಲ್ಲೂ ಲವ್ OTPಗೆ ಬಹುಪರಾಕ್
- ನನಸಾಯ್ತು ಅಪ್ಪು ನೆಚ್ಚಿನ ಅನೀಶ್ ಕಂಡ ದಶಕದ ಆ ಕನಸು
- ಯೂತ್ ಸಬ್ಜೆಕ್ಟ್.. ಪೇರೆಂಟ್ಸ್ ಕೂಡ ಮಸ್ಟ್ ನೋಡ್ಲೇಬೇಕು
ಲವ್ ಓಟಿಪಿ.. ಕನ್ನಡದ ಜೊತೆ ತೆಲುಗಿನಲ್ಲಿ ಕೂಡ ಈ ವಾರ ರಿಲೀಸ್ ಅಗ್ತಿರೋ ದ್ವಿಭಾಷಾ ಸಿನಿಮಾ. ಈ ಹಿಂದೆ ರಾಮಾರ್ಜುನ ಸಿನಿಮಾ ನಿರ್ದೇಶಿಸಿ, ನಟಿಸಿದ್ದ ಅಕಿರ ಅನೀಶ್, ಒನ್ಸ್ ಅಗೈನ್ ಈ ಲವ್ ಓಟಿಪಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಜೊತೆಗೆ ಲೀಡ್‌ನಲ್ಲಿ ನಟಿಸಿದ್ದಾರೆ ಕೂಡ. ಚಿತ್ರದಲ್ಲಿ ಸ್ವರೂಪಿಣಿ ಹಾಗೂ ಜಾಹ್ನವಿಕಾ ಅನ್ನೋ ಇಬ್ಬರು ನಾಯಕಿಯರಿದ್ದು, ಚೇತನ್ ಗಂಧರ್ವ ಕೂಡ ವಿಶೇಷ ಪಾತ್ರದಲ್ಲಿ ಕಾಣಸಿಗುತ್ತಾರೆ. ಅಲ್ಲದೆ, ಜೂನಿಯರ್ ಎನ್‌ಟಿಆರ್ ಆಪ್ತಮಿತ್ರ ರಾಜೀವ್ ಕನಕಾಲ, ತುಳಸಿ ಅವರು ಈ ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
ಯೆಸ್.. ರಿಲೀಸ್‌ಗೂ ಮೊದಲೇ ಹೈದ್ರಾಬಾದ್ ಹಾಗೂ ಬೆಂಗಳೂರಿನಲ್ಲಿ ಸ್ಪೆಷಲ್ ಆಗಿ ಪ್ರೀಮಿಯರ್ ಕಂಡ ಲವ್ ಓಟಿಪಿ ಚಿತ್ರಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಅಪ್ಪು ನೆಚ್ಚಿನ ಅಕಿರ ಅನೀಶ್ ಕಳೆದ ಒಂದೂವರೆ ದಶಕದಿಂದ ಒಂದೊಳ್ಳೆ ಸಕ್ಸಸ್‌ಗಾಗಿ ಎದುರು ನೋಡ್ತಿದ್ರು. ಆ ಬಹುನಿರೀಕ್ಷಿತ ಸಕ್ಸಸ್, ಈ ಲವ್ ಓಟಿಪಿಯಿಂದ ಸಿಕ್ಕಿದೆ. ಅದಕ್ಕೆ ಕಾರಣ ಚಿತ್ರದ ಕಥೆ, ಪಾತ್ರಗಳು, ಮೇಕಿಂಗ್, ಹಿನ್ನೆಲೆ ಧ್ವನಿ. ಅದ್ರಲ್ಲೂ ಜನ್ ಝೀ ಜನರೇಷನ್‌ಗೆ ಸಂಬಂಧಿಸಿದ ಯೂತ್‌ಫುಲ್ ಕಥೆ ನೋಡುಗರಿಗೆ ಬೇಹ ಕನೆಕ್ಟ್ ಆಗ್ತಿದೆ.
ಹದಿ ಹರೆಯದ ಮನಸುಗಳ ಪ್ರೀತಿ, ಸ್ನೇಹ, ಮನದ ಭಾವನೆಗಳ ಏರಿಳಿತಗಳು. ಅದಕ್ಕೆ ಜನರೇಷನ್ ಗ್ಯಾಪ್ ಇರೋ ಪೋಷಕರ ವರ್ತನೆಗಳು. ಲವ್, ಆ್ಯಕ್ಷನ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್, ಎಮೋಷನ್ಸ್, ತಂದೆ-ಮಗನ ಬಾಂಡಿಂಗ್. ತಂದೆ-ಮಗಳ ಬಾಂಧವ್ಯ ಹೀಗೆ ಸಾಕಷ್ಟು ವಿಷಯಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ನೋಡೋಕೆ ಸೀದಾ ಸಾದ ಕಥೆ ಅನಿಸುತ್ತೆ. ನಮ್ಮಗಳ ಕಣ್ಮುಂದೆಯೇ ನಡೀತಿರೋ ವಿಷಯಗಳು ಅನಿಸುತ್ತೆ. ಆದ್ರೆ ಅದನ್ನ ಪ್ರಸ್ತುತ ಪಡಿಸಿರೋ ವಿಧಾನ ಮಾತ್ರ ಅದ್ಭುತ. ಅನೀಶ್ ಈ ಬಾರಿ ಈ ವಿಚಾರದಲ್ಲಿ ಸೆಂಚುರಿ ಬಾರಿಸಿದ್ದಾರೆ. ಒಬ್ಬ ಕ್ರಿಕೆಟರ್ ಆಗಿಯೂ ಸಹ, ಕ್ರಿಕೆಟ್ ಪ್ರೀತಿಯ ಸುತ್ತ ತನ್ನ ನಿಜ ಪ್ರೀತಿಯ ಕಂಡುಕೊಳ್ಳುವ ನಿರಂತರ ಪ್ರಯತ್ನದ ಜರ್ನಿ ಇದಾಗಿದೆ.
ಅನೀಶ್‌ಗಾಗಿ ಅವ್ರ ಬಹುಕಾಲದ ಗೆಳೆಯ ವಿಜಯ್ ರೆಡ್ಡಿ ಈ ಸಿನಿಮಾಗೆ ಬಂಡವಾಳ ಹಾಕಿ, ಸಿನಿಮಾನ ಬಹಳ ರಿಚ್ ಆಗಿ ಕಟ್ಟಿಕೊಟ್ಟಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಅಂದು ಹೇಳಿದ್ದ ಆ ಡೈಲಾಗ್ ಅನೀಶ್ ಮೇಲೂ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ಅಣ್ತಮ್ಮಾ.. ಇಲ್ಲಿ ಯಾರು ಯಾರನ್ನೂ ಹೀರೋ ಮಾಡಲ್ಲ. ನಮಗೆ ನಾವೇ ಹೀರೋ ಆಗ್ಬೇಕು ಅಂದಿದ್ರು. ಅದೀಗ ಅನೀಶ್‌ಗೆ ಮನದಟ್ಟಾಗಿ ತಮಗೆ ತಾವೇ ಫ್ರೇಮ್ ಇಟ್ಕೊಂಡು ಸಕ್ಸಸ್ ಆಗಿದ್ದಾರೆ. ಮಕ್ಕಳಿಂದ ಮುದುಕರವರೆಗೆ ಇಡೀ ಕುಟುಂಬ ಕೂತು ನೋಡುವಂತಹ ಫ್ಯಾಮಿಲಿ ಕಮ್ ಯೂತ್ ಎಂಟರ್‌ಟೈನರ್ ನೀಡಿದ್ದಾರೆ.
ಕಾಲೇಜ್‌ಗೆ ಹೋಗ್ತಿದ್ದ ಸ್ವರೂಪಿಣಿ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ದೃಶ್ಯ ಚಿತ್ರದಲ್ಲಿ ನಟಿಸಿದ್ರು. ಅದಾದ ಬಳಿಕೆ ಆಕೆಗೆ ಈ ಸಿನಿಮಾ ಬಹುದೊಡ್ಡ ನೇಮು, ಫೇಮು ತಂದುಕೊಡಲಿದೆ. ಕಾರಣ ಭಗ್ನ ಪ್ರೇಯಸಿಯಾಗಿ ಎಮೋಷನ್ಸ್‌ನ ಎಮೋಟ್ ಮಾಡಿರೋ ಪರಿ ಅವರ್ಣನೀಯ.
ಇನ್ನು ಬಹುಭಾಷಾ ನಟಿ ತ್ರಿಶಾ ರೀತಿ ಕಾಣುವ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಪ್ರತಿಭೆ ಜಾಹ್ನವಿಕಾ, ಈ ಚಿತ್ರದಲ್ಲಿ ಫಿಸಿಯೋ ತೆರಪಿಸ್ಟ್ ನಕ್ಷತ್ರಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆನಂದ್ ರಾಜವಿಕ್ರಮ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಮಜಬೂತಾಗಿದ್ದು, ಇಡೀ ಸಿನಿಮಾ ಎಲ್ಲೂ ಬೋರ್ ಹೊಡಿಸದೆ, ನೋಡುಗರನ್ನ ಎಂಗೇಜ್ ಆಗಿ ಹಿಡಿದಿಟ್ಟುಕೊಳ್ಳಲಿದೆ. ಒಟ್ಟಾರೆ ಲವ್ ಓಟಿಪಿ ಬರ್ತಿರೋ ಹತ್ತಾರು ಚಿತ್ರಗಳ ನಡುವೆ ಸ್ಪೆಷಲ್ ಆಗಿ ನಿಲ್ಲಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
