ಸೀರೀಸ್‌ ಟ್ರೆಂಡ್‌‌ನಲ್ಲಿ ಕೃಷ್ಣ-ಮಿಲನ ಜೋಡಿ ಮಾಕ್ಟೇಲ್ ಕಿಕ್

‘ಲವ್ ಮಾಕ್ಟೇಲ್-3'ಗೆ ಶ್ರೀಕಾರ.. ಶೂಟಿಂಗ್ ಕಿಕ್‌ಸ್ಟಾರ್ಟ್..!

Untitled design 2025 07 15t175726.415

ಭಾರತೀಯ ಚಿತ್ರರಂಗದಲ್ಲಿ ಸೀರೀಸ್‌ ಆಫ್ ಸಿನಿಮಾಗಳ ಟ್ರೆಂಡ್ ಹಾವಳಿ ಎಬ್ಬಿಸಿದೆ. ಇದೇ ವೇಳೆ ಕನ್ನಡದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರೋ ‘ಲವ್‌ ಮಾಕ್ಟೇಲ್‌’ ಸೀರೀಸ್‌ನ ಎರಡೂ ಚಿತ್ರಗಳು ಬಾಕ್ಸಾಫೀಸ್‌ ಲೂಟಿ ಮಾಡಿದ್ದವು. ಇದೀಗ  ಮೂರನೇ ಭಾಗಕ್ಕೆ ಶ್ರೀಕಾರ ಹಾಕಿದ್ದಾರೆ ಕ್ರಿಸ್ಮಿ ಕಪಲ್. ಹಾಗಾದ್ರೆ ಹೇಗಿದೆ ಲವ್ ಮಾಕ್ಟೇಲ್-3 ಶೂಟಿಂಗ್ ಅನ್ನೋದರ ಝಲಕ್ ಇಲ್ಲಿದೆ.

ಕೊರೋನಾ ವೇಳೆ ಬಿಡುಗಡೆಯಾದ ಲವ್ ಮಾಕ್ಟೇಲ್ ಸಿನಿಮಾ ಥಿಯೇಟರ್ ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದ್ರೆ ಇದೆ ಸಿನಿಮಾ ಓಟಿಟಿನಲ್ಲಿ ರಿಲೀಸ್ ಆದ ಕೂಡಲೇ ಆಟಿ ಹೆಚ್ಚು ವ್ಯೂಸ್ ಪಡೆದು ಕನ್ನಡದ ನಂಬರ್ 1 ಟ್ರೆಂಡಿಂಗ್ ಲಿಸ್ಟ್ ನಲ್ಲಿತ್ತು. ಈ ಸಿನಿಮಾ ಗೆದ್ದ ಮೇಲೆ ನಿರ್ದೇಶಕ ಕಮ್ ನಟ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್-೨ ಮಾಡಿದರು. ಇದು ಕೂಡ ಕೈ ಹಿಡಿಯಿತು.

ಎರಡು ಸಿನಿಮಾಗಳು ಬ್ಯಾಕ್ to ಬ್ಯಾಕ್ ಹಿಟ್ ಆದ ಕಾರಣ ಲವ್ ಮಾಕ್ಟೇಲ್ ಜೋಡಿ ಮಿಲನ ಮತ್ತು ಡಾರ್ಲಿಂಗ್ ಕೃಷ್ಣ ಗೆದ್ದು ಬೀಗಿದರು. ಹಾಗಂತ ಸುಮ್ನೆ ಕೂಡಲಿಲ್ಲ. ಬದಲಾಗಿ ಮತ್ತೊಂದು ಲವ್ ಮಾಕ್ಟೇಲ್ ಚಿತ್ರಕ್ಕೆ ರೆಡಿ ಆಗಿದ್ದಾರೆ. ಎಸ್, ನಿಮ್ಮ ಊಹೆ ಸರಿಯಾಗಿದೆ. ಇತೀಚೆಗೆ ಮಿಲನ ನಾಗರಾಜ್ ತಮ್ಮ ಇನ್ಸ್ಟಾದಲ್ಲಿ ಪತಿ ಕೃಷ್ಣ ಜೊತೆ ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ರು. ಸ್ಕ್ರಿಪ್ಟ್ ಮುಗಿತ..? ಎಲ್ಲಿವರ್ಗು ಸ್ಕ್ರಿಪ್ಟ್ ಕೆಲಸ ಬಂತು ಅಂತ ಮಿಲನ ಕೃಷ್ಣಗೆ ಪ್ರಶ್ನೆ ಮಾಡಿದ್ರು. ಈ ವಿಡಿಯೋ ನೋಡಿದ ಫ್ಯಾನ್ಸ್ ಯಾವ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಇವರು ಮಾತಾಡ್ತಿದ್ದಾರೆ ಅಂತ ತಲೆಗೇಡಿಸಿಕೊಂಡಿದ್ರು.

ಅ0ತೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಲವ್ ಬರ್ಡ್ಸ್ ಕೊಟ್ಟಾಗಿದೆ. ಲವ್ ಮಾಕ್ಟೇಲ್ ಪಾರ್ಟ್ 1ಹಾಗು ಪಾರ್ಟ್ 2 ಹಿಟ್ ಆದ ಬೆನ್ನಲೇ ಪಾರ್ಟ್ 3 ಸೀರೀಸ್ ಕಂಟಿನ್ಯೂ ಮಾಡೋ ಪ್ಲಾನ್ ಮಾಡಿದ್ದಾರೆ ಕ್ರಿಸ್ಮಿ ಜೋಡಿ. ಹೌದು, ಕೆಲವು ದಿನಗಳ ಹಿಂದೆ ಲವ್ ಮಾಕ್ಟೇಲ್ 3ಗಾಗಿ ಪುಟ್ಟ ಹುಡುಗಿ ಆಡಿಷನ್ ಕಾಲ್ ನೀಡಿದ್ದ ಚಿತ್ರತಂಡ, ಬಾಲ ಕಲಾವಿದೆಗೆ ಇರಬೇಕಾದ ಕ್ವಾಲಿಟಿಸ್ ಮೆಂಷನ್ ಮಾಡಿದ್ರು. ಎಕ್ಸಪ್ರೆಸಿವ್ ಫೇಸ್ ಇರ್ಬೇಕು. ಸಿಕ್ಕಾಪಟ್ಟೆ ಎನರ್ಜಿ ಇರ್ಬೇಕು. ಅಭಿನಯದ ಬಗ್ಗೆ ಆಸಕ್ತಿ ಇರಬೇಕು. ವಯಸ್ಸು 5 ರಿಂದ 8 ಇರಬೇಕು. ಈ ಎಲ್ಲ ಕ್ವಾಲಿಟಿಸ್ ಇರೋ ಹುಡುಗಿ ಸಿಕ್ಕಾಯ್ತು ಈಗ ಶೂಟಿಂಗ್ ಕೂಡ ಶುರುವಾಗಿದೆ.

ಕೃಷ್ಣ ನಿರ್ದೇಶಿಸಿ ನಟಿಸುತ್ತಿರೋ ಈ ಚಿತ್ರಕ್ಕೆ ಮಿಲನ ನಾಗರಾಜ್ ಬಂಡವಾಳ ಹೂಡುತ್ತಿದ್ದಾರೆ. ಸತಿ ಪತಿ ಸೇರಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಡೋಕೆ ಆಲ್ ಸೆಟ್ ಅಂತಿದ್ದಾರೆ. ಲೈಟ್ಸ್, ಕ್ಯಾಮೆರಾ, ಆಕ್ಷನ್ ಅಂತ ಕೃಷ್ಣ ಹೇಳಿದ್ರೆ.. ಡೈಲಾಗ್ಸ್ ಹೇಗೆ ಬರ್ಬೇಕು..ಶೂಟಿಂಗ್ ಹೇಗೆ ನಡಿತಿದೆ ಅಂತ ಮಿಲನ ಕಲಾವಿದರ ಮೇಲೆ ಕಣ್ಣು ಇಟ್ಟಿದ್ದಾರೆ.

ಸದ್ಯ ನಟ ಕೃಷ್ಣ ‘ಫಾದರ್’ ಹಾಗೂ ‘ಬ್ರ್ಯಾಟ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈಗ ಅವರ ಬ್ಯಾನರ್ ನಲ್ಲೇ ಲವ್ ಮಾಕ್ಟೇಲ್ 3 ಬರ್ತಿದೆ. ಇನ್ನು ಇತೀಚೆಗಷ್ಟೇ ಮಗುವಿನ ತಾಯಿಯಾಗಿರೋ ಮಿಲನ ನಿರ್ಮಾಪಕಿಯಾಗಿ ಫೀಲ್ಡ್ ಗೆ ಇಳಿದಿದ್ದಾರೆ. ಒಟ್ಟಾರೆ ಲವ್ ಮಾಕ್ಟೇಲ್ 3 ಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಇದು ಖುಷ್ ಖಬರ್ ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಸಿನಿಮಾ ರಿಲೀಸ್ ಮಾಡ್ಲಿ ಹಿಟ್ ಲಿಸ್ಟ್ ಗೆ ಈ ಸಿನಿಮಾ ಕೂಡ ಸೇರಲಿ ಅಂತ ಆಶಿಸೋಣ

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version