ಕುಗ್ಗದ KVN..ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧ ಧ್ರುವ, ದಳಪತಿ, ಯಶ್

ಏಪ್ರಿಲ್ to ಜೂನ್..ಬೆಳ್ಳಿತೆರೆಗೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾ..!

KVN..ಧ್ರುವ, ದಳಪತಿ, ಯಶ್

ಜನನಾಯಗನ್ ಜೊತೆ ಟಾಕ್ಸಿಕ್ ರಿಲೀಸ್ ಕೂಡ ಪೋಸ್ಟ್‌ಪೋನ್ ಆಗಿದೆ. ಆದ್ರೆ ಸಾವಿರಾರು ಕೋಟಿ ಬಂಡವಾಳ ಹೂಡಿರೋ ನಿರ್ಮಾಣ ಸಂಸ್ಥೆಯ ಗತಿ ಏನಾಗಬೇಕು ಅನ್ನೋದು ಸದ್ಯದ ಟಾಕ್. ಹೀಗಿರುವಾಗ ಕೆವಿಎನ್ ಸಂಸ್ಥೆ ಕುರಿತ ಒಂದು ಎಕ್ಸ್‌‌ಕ್ಲೂಸಿವ್ ಖಬರ್ ಹೇಳ್ತೀವಿ ಕೇಳಿ. ಏಪ್ರಿಲ್‌‌ನಿಂದ ಜೂನ್‌ವರೆಗೆ ಬಾಕ್ಸ್ ಆಫೀಸ್ ಮೇಲೆ ಬ್ಯಾಕ್ ಟು ಬ್ಯಾಕ್ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಸಜ್ಜಾಗಿದ್ದಾರೆ ಯಶ್, ಧ್ರುವ ಸರ್ಜಾ ಹಾಗೂ ದಳಪತಿ ವಿಜಯ್.

ಕೆವಿಎನ್ ಪ್ರೊಡಕ್ಷನ್ಸ್..ಹೊಂಬಾಳೆ ರೀತಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡೋಕೆ ಸಜ್ಜಾಗಿರೋ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ. ಕೆ ವೆಂಕಟ್ ನಾರಾಯಣ್ ಒಡೆತನದ ಈ ಸಂಸ್ಥೆ ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ಕೆಡಿ, ತಮಿಳಲ್ಲಿ ದಳಪತಿ ವಿಜಯ್ ಜೊತೆಗಿನ ಜನನಾಯಗನ್ ಹಾಗೂ ಹಾಲಿವುಡ್ ಸ್ಟ್ಯಾಂಡರ್ಡ್ ಟಾಕ್ಸಿಕ್ ಸಿನಿಮಾಗಳನ್ನ ನಿರ್ಮಾಣ ಮಾಡಿದೆ. ಬ್ಯಾಡ್ ಟೈಂ ಏನಂದ್ರೆ ಈ ಮೂರೂ ಸಿನಿಮಾಗಳ ರಿಲೀಸ್‌ಗೆ ಗ್ರಹಗತಿಗಳೇ ಸರಿ ಅನಿಸ್ತಿಲ್ಲ.

ಕುಗ್ಗದ KVN..ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧ ಧ್ರುವ, ದಳಪತಿ, ಯಶ್

ಏಪ್ರಿಲ್ to ಜೂನ್..ಬೆಳ್ಳಿತೆರೆಗೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾ..!

ಮೊದಲು ಕೆಡಿ ಸಿನಿಮಾದ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಯ್ತು. ನಂತ್ರ ಜನನಾಯಗನ್‌ ರಿಲೀಸ್‌ಗೆ ಸೆನ್ಸಾರ್ ಕಂಟಕವಾಯ್ತು. ಇದೀಗ ಟಾಕ್ಸಿಕ್ ಕೂಡ ಮಾರ್ಚ್‌ 19ರ ಬದಲಿಗೆ ಜೂನ್ 4ಕ್ಕೆ ತನ್ನ ರಿಲೀಸ್ ಡೇಟ್ ಪೋಸ್ಟ್‌‌ಪೋನ್ ಮಾಡಿದೆ. ಅಲ್ಲಿಗೆ ಮೂರೂ ಸಿನಿಮಾಗಳು ಅಂದುಕೊಂಡ ಡೇಟ್‌ಗೆ ಬರೋಕೆ ಆಗಲಿಲ್ಲ. ಹಾಗಂತ ಕೆವಿಎನ್ ಪ್ರೊಡಕ್ಷನ್ಸ್ ಏನೂ ಎದೆಗುಂದಿಲ್ಲ. ಯಾಕಂದ್ರೆ ಟಾಕ್ಸಿಕ್ ಸಿನಿಮಾವೊಂದರ ಪ್ರೀ ರಿಲೀಸ್ ಬ್ಯುಸಿನೆಸ್ಸೇ ಬರೋಬ್ಬರಿ 1000 ಕೋಟಿ ಆಗಿದೆ.

ಅಂದಹಾಗೆ ಕೆವಿಎನ್ ಸಂಸ್ಥೆಗೆ ಹಣದ ಕೊರತೆ ಇಲ್ಲವೇ ಇಲ್ಲ. ಯಾಕಂದ್ರೆ ಹಣದ ಸಮಸ್ಯೆ ಇದ್ದಿದ್ರೆ ಟಾಲಿವುಡ್‌‌ನಲ್ಲಿ ಚಿರಂಜೀವಿ ಜೊತೆ ಸಿನಿಮಾ ಆರಂಭಿಸುತ್ತಿರಲಿಲ್ಲ. ಬಾಲಿವುಡ್‌ನ ಅಕ್ಷಯ್ ಕುಮಾರ್ ಜೊತೆ ಹೈವಾನ್ ಸಿನಿಮಾ ಶೂಟಿಂಗ್ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಮಲಯಾಳಂ ಸಿನಿಮಾವೊಂದಕ್ಕೂ ಬಂಡವಾಳ ಹೂಡಿದ್ದು, ಅದು ಕೂಡ ರಿಲೀಸ್‌ಗೆ ತಯಾರಾಗ್ತಿದೆ. ಹೀಗೆ ಸಾಲು ಸಾಲು ಸಿನಿಮಾಗಳ ಮೂಲಕ ಕೆವಿಎನ್ ಸಂಸ್ಥೆ ಸದ್ದು ಮಾಡ್ತಾನೇ ಇದೆ.

ಕೆಡಿ, ಜನನಾಯಗನ್, ಟಾಕ್ಸಿಕ್..ತುಂಬಲಿದೆ ಕೆವಿಎನ್‌ ಖಜಾನೆ

ಚಿರಂಜೀವಿ, ಅಕ್ಷಯ್ ಚಿತ್ರಗಳು ಆ್ಯಕ್ಟೀವ್..ಹಣಕ್ಕಿಲ್ವಂತೆ ಕೊರತೆ

ಧ್ರುವ ಕೆಡಿ ಚಿತ್ರಕ್ಕೆ 100 ಕೋಟಿ, ಯಶ್ ಟಾಕ್ಸಿಕ್‌‌ಗೆ 500 ಕೋಟಿ ಹಾಗೂ ದಳಪತಿ ವಿಜಯ್ ಜನ ನಾಯಗನ್‌ಗೆ 500 ಕೋಟಿ.. ಹೀಗೆ ಸಾವಿರಕ್ಕೂ ಅಧಿಕ ಕೋಟಿ ಬಜೆಟ್ ಹಾಕಿರೋ ಕೆವಿಎನ್ ಸಂಸ್ಥೆ ಸದ್ಯ ಸಂಕಷ್ಟಕ್ಕೆ ಸಿಲುಕಿರಬಹುದು. ಆದ್ರೆ ಏಪ್ರಿಲ್‌‌ನಲ್ಲಿ ಕೆಡಿ, ಮೇನಲ್ಲಿ ಜನ ನಾಯಗನ್ ಹಾಗೂ ಜೂನ್‌ನಲ್ಲಿ ಟಾಕ್ಸಿಕ್ ಮೂಲಕ ಬಾಕ್ಸ್ ಆಫೀಸ್ ಮೇಲೆ ಸರ್ಜಿಕಲ್ ಸ್ಟ್ರೈಕ್‌ಗೆ ಸಜ್ಜಾಗ್ತಿದೆ. ಈ ಬಾರಿ ಹೊಡೆದ್ರೆ ಬೆಟ್ಟವನ್ನೇ ಹೊಡೆಯಲಿದೆ ಕೆವಿಎನ್. ಸೋ.. ಸಿನಿಮಾಗಳ ಡೇಟ್ಸ್ ಪೋಸ್ಟ್‌ಪೋನ್ ಆಗಿರೋದ್ರಿಂದ ಸಿಂಪಥಿ ತೋರಿಸಿ, ಟ್ರೋಲ್ ಮಾಡ್ತಿರೋರಿಗೆ ಈ ಮೂಲಕ ಫೀನಿಕ್ಸ್‌ನಂತೆ ಬರೋ ಮುನ್ಸೂಚನೆ ನೀಡಿದೆ ಕೆವಿಎನ್.

 

 

Exit mobile version