ಕುಬೇರ ರಾಕ್ಸ್..‌‌ ರಾಜಮೌಳಿ ಸಿದ್ಧಾಂತ ಸೀಕ್ರೆಟ್ ರಿವೀಲ್ಸ್

ನ್ಯಾಷನಲ್ ಕ್ರಶ್ ರಶ್ಮಿಕಾನ ಕೊಂಡಾಡಿದ ಸೌತ್ ಸ್ಟಾರ್ಸ್‌..!

Untitled design 2025 06 16t170247.524

ಸೌತ್ ಸೂಪರ್ ಸ್ಟಾರ್ಸ್‌ ಹಾಗೂ ಸೆನ್ಸೇಷನಲ್ ಡೈರೆಕ್ಟರ್‌ಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ ಕುಬೇರ. ಯೆಸ್.. ನಾಗಾರ್ಜುನ್-ಧನುಷ್-ರಶ್ಮಿಕಾ ಟ್ರೈಲರ್ ಲಾಂಚ್ ಇವೆಂಟ್‌‌ಗೆ ಆಗಮಿಸಿದ ರಾಜಮೌಳಿ ಚಿತ್ರದ ಬಗ್ಗೆ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಶೇಖರ್ ಕಮ್ಮುಲ ಹಾಗೂ ತನ್ನ ಸಿದ್ದಾಂತಗಳ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ.

ಅಲ್ಟ್ರಾ ನಿಯೋ ರಿಚ್ ಪ್ರಪಂಚದಲ್ಲಿ ನಾಗಾರ್ಜುನ್. ಅಲ್ಟ್ರಾ ಪೂರ್ ಪ್ರಪಂಚದಲ್ಲಿ ಧನುಷ್. ಇವರಿಬ್ಬರು ಸಮಾಗಮ ಆಗುವ ಅವಿಸ್ಮರಣೀಯ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ದಿನ ಬಂದೇ ಬಿಡ್ತು. ಯೆಸ್.. ಕುಬೇರ ಸಿನಿಮಾದ ರಿಲೀಸ್‌ಗೆ ಇನ್ನು ಮೂರೇ ದಿನ ಬಾಕಿಯಿದೆ. ಇದೇ ಜೂನ್ 20ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ ಸಿನಿಮಾ. ಟ್ರೈಲರ್ ಕೂಡ ಲಾಂಚ್ ಆಗಿದ್ದು, ರಾಜಮೌಳಿ ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೇಖರ್ ಕಮ್ಮುಲ ನಿರ್ದೇಶನದ ಈ ಸಿನಿಮಾದಲ್ಲಿ ಕಿಂಗ್ ನಾಗಾರ್ಜುನ್ ಹಾಗೂ ಧನುಷ್ ಜೊತೆ ನ್ಯಾಷನಲ್ ಕ್ರಶ್ ರಶ್ಮಿಕಾ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರೀ ರಿಲೀಸ್ ಇವೆಂಟ್ ಸಖತ್ ಜೋರಾಗಿ ನಡೆದಿದ್ದು, ರಾಜಮೌಳಿ ಸೇರಿದಂತೆ ಸ್ಟಾರ್‌ಗಳ ಸಮಾಗಮಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಇನ್ನು ಶೇಖರ್ ಕಮ್ಮುಲ ನನಗಿಂತ ಜೂನಿಯರ್ ಅಂದುಕೊಂಡಿದ್ದೆ ಆದ್ರೆ ಅವರು ನನಗಿಂತ ಒಂದು ವರ್ಷ ಸೀನಿಯರ್. ನಾನೇ ಜೂನಿಯರ್ ಎಂದಿದ್ದಾರೆ ಬಾಹುಬಲಿ ಡೈರೆಕ್ಟರ್.

ಟ್ರಾನ್ಸ್ ಆಫ್ ಕುಬೇರ ಟೀಸರ್ ನೋಡಿ ಫಿದಾ ಆಗಿದ್ದ ರಾಜಮೌಳಿ, ಸಿನಿಮಾ ಮೇಲಿನ ಕೌತುಕತೆಯನ್ನ ಡಿಟೈಲ್ಡ್ ಆಗಿ ವಿವರಿಸಿದರು. ಅಷ್ಟೇ ಅಲ್ಲ, ಶೇಖರ್ ಕಮ್ಮುಲ ಹಾಗೂ ನನ್ನ ಸಿದ್ಧಾಂತಗಳು ಬೇರೆ ಬೇರೆ ಎಂದರು. ಹೌದು..

ನೀವು ನಂಬಿದೆ ಸಿದ್ಧಾಂತಗಳ ಮೇಲೆಯೇ ನೀವು ಸಿನಿಮಾಗಳನ್ನ ತೆಗೆಯುತ್ತೀರಿ. ನಾನು ನಂಬಿದ ಸಿದ್ಧಾಂತಗಳಿಗೆ ನಾನು ಮಾಡುವ ಸಿನಿಮಾಗಳಿಗೂ ಸಂಬಂಧ ಇರಲ್ಲ. ಈ ವಿಚಾರದಲ್ಲಿ ನಾವಿಬ್ಬರೂ ತದ್ವಿರುದ್ಧ. ಆದ್ರೆ ನಾನು ಅದನ್ನ ಯಾವತ್ತೂ ಗೌರವಿಸುತ್ತೇನೆ ಅಂತ ತಮ್ಮ ಸಿದ್ಧಾಂತ ಸೀಕ್ರೆಟ್ ಬಹಿರಂಗಪಡಿಸಿದ್ರು ಜಕ್ಕನ್ನ.

ಇನ್ನು ಧನುಷ್, ನಾಗಾರ್ಜುನ್, ಶೇಖರ್ ಕಮ್ಮುಲ ಸೇರಿದಂತೆ ಎಲ್ಲರೂ ನಮ್ಮ ಕನ್ನಡತಿ, ಕಿರಿಕ್ ಬ್ಯೂಟಿ ರಶ್ಮಿಕಾ ಬಗ್ಗೆ ಕೊಂಡಾಡಿದ್ರು. ಅದರಲ್ಲೂ ಧನುಷ್ ಆಡಿದ ಒಂದೊಂದು ಮಾತು ಕೂಡ ಆಕೆಯ ಸ್ಟಾರ್ಡಮ್‌ನ ಮತ್ತಷ್ಟು ಹಿಗ್ಗಿಸುವಂತಿದೆ.

ಅದೇನೇ ಇರಲಿ, ಕುಬೇರ ಸಿನಿಮಾ ಮೇಕಿಂಗ್‌ನಿಂದಲೇ ದೊಡ್ಡ ಭರವಸೆ ಮೂಡಿಸಿದೆ. ಅನಾರೋಗ್ಯದ ನಡುವೆಯೂ ಸಿನಿಮಾನ ಅದ್ಭುತವಾಗಿ ಕಟ್ಟಿಕೊಟ್ಟಿರೋ ಡೈರೆಕ್ಟರ್ ಶೇಖರ್ ಕಮ್ಮುಲಗೆ ದೊಡ್ಡ ಗೆಲುವು ಸಿಗಬೇಕು ಅನ್ನೋದು ಎಲ್ಲರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version