ಎದೆಯೆತ್ತರಕ್ಕೆ ಮಗ ಇದ್ದರೂ, ತನಗಿಂತ 8 ವರ್ಷ ಚಿಕ್ಕವನ ಜೊತೆ ಎರಡನೇ ಮದುವೆಗೆ ರೆಡಿಯಾ ಖ್ಯಾತ ನಟಿ..?

Web 2025 05 16t184459.254

ಬಾಲಿವುಡ್‌ನ ಖ್ಯಾತ ನಟಿ ಕೊಂಕಣಾ ಸೇನ್ ಶರ್ಮಾ ತಮಗಿಂತ 8 ವರ್ಷ ಚಿಕ್ಕವರಾದ ನಟ ಅಮೋಲ್ ಪರಾಶರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಮಾಯಾನಗರಿ ಮುಂಬೈನಲ್ಲಿ ಹರಿದಾಡುತ್ತಿವೆ. ತಮ್ಮ ಮಗನ ಜೊತೆ ಸಂಸಾರ ನಡೆಸುತ್ತಿರುವ ಕೊಂಕಣಾ, ಎರಡನೇ ಪ್ರೀತಿಯ ಅಮಲಿನಲ್ಲಿ ತೇಲುತ್ತಿರುವ ಚರ್ಚೆ ಜೋರಾಗಿದೆ.

ಕೊಂಕಣಾ ಸೇನ್ ಶರ್ಮಾ, ‘ಪೇಜ್ 3’, ‘ಓಂಕಾರ’, ‘ಲೈಫ್ ಇನ್ ಮೆಟ್ರೋ’, ‘ವೇಕ್ ಅಪ್ ಸಿದ್’, ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ’ನಂತಹ ಚಿತ್ರಗಳ ಮೂಲಕ ಗುರುತಿಸಿಕೊಂಡವರು. 2007ರಲ್ಲಿ ಬಾಲಿವುಡ್ ಕಲಾವಿದ ರಣವೀರ್ ಶೋರೆ ಜೊತೆ ಪ್ರೀತಿಯಲ್ಲಿ ಬಿದ್ದ ಕೊಂಕಣಾ, 2010ರಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾದರು. ಇವರಿಗೆ ಒಬ್ಬ ಮಗನೂ ಇದ್ದಾನೆ. ಆದರೆ, 2020ರಲ್ಲಿ ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿ, ವಿಚ್ಛೇದನ ಪಡೆದರು.

ADVERTISEMENT
ADVERTISEMENT


ವಿಚ್ಛೇದನದ ನಂತರ ಕೊಂಕಣಾ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಮುನ್ನಡೆಯುತ್ತಿದ್ದರು. ಆದರೆ, ಇತ್ತೀಚೆಗೆ ತಮಗಿಂತ 8 ವರ್ಷ ಚಿಕ್ಕವರಾದ ನಟ ಅಮೋಲ್ ಪರಾಶರ್ ಜೊತೆ ಕೊಂಕಣಾ ಸೇನ್ ಶರ್ಮಾ ಅವರ ಹೆಸರು ಜೋಡಿಯಾಗಿದೆ. ಅಮೆಜಾನ್ ಪ್ರೈಂನ ‘ಗ್ರಾಮ್ ಚಿಕಿತ್ಸಾಲಯ್’ ವೆಬ್ ಸರಣಿಯ ವಿಶೇಷ ಪ್ರದರ್ಶನದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಇವರ ಆತ್ಮೀಯತೆಯನ್ನು ಕಂಡ ಅನೇಕರು ಇಬ್ಬರ ನಡುವೆ ಪ್ರೀತಿಯ ಸಂಬಂಧ ಇದೆ ಎಂದು ಊಹಿಸುತ್ತಿದ್ದಾರೆ.

2019ರಲ್ಲಿ ನೆಟ್‌ಫ್ಲಿಕ್ಸ್‌ನ ‘ಡಾಲಿ ಕಿಟ್ಟಿ ಔರ್ ವೋ ಚಮಕ್ಕೆ ಸಿತಾರೆ’ ಚಿತ್ರದಲ್ಲಿ ಕೊಂಕಣಾ ಮತ್ತು ಅಮೋಲ್ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಪ್ರೀತಿಯಾಗಿ ಮೊಳಕೆಯೊಡೆದಿರಬಹುದು ಎಂದು ಚರ್ಚೆಯಾಗುತ್ತಿದೆ. ಆದರೆ, ಈ ಸಂಬಂಧದ ಬಗ್ಗೆ ಕೊಂಕಣಾ ಮತ್ತು ಅಮೋಲ್ ಇದುವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಕೊಂಕಣಾ ಸೇನ್ ಶರ್ಮಾ ಅವರ ಈ ಹೊಸ ಪ್ರೀತಿಯ ಕಥೆ ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮ ಮಗನೊಂದಿಗೆ ಜೀವನ ನಡೆಸುತ್ತಿರುವ ಕೊಂಕಣಾ, ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಈ ಜೋಡಿಯ ಮುಂದಿನ ಹೆಜ್ಜೆಗಳ ಬಗ್ಗೆ ಅನೇಕರ ಕುತೂಹಲವಿದೆ.

Exit mobile version