ಬಿಗ್ಸ್ಕ್ರೀನ್ ಮೇಲೆ ಕಮಾಲ್ ಮಾಡೋಕೆ ರೆಡಿ ಕೋಮಲ್-ಸೋನಲ್ ಜೋಡಿ. ಯೆಸ್.. ಅವ್ರಿಗೆ ಟೈಸನ್ ವಿನೋದ್ ಪ್ರಭಾಕರ್ ಕೂಡ ಸಾಥ್ ನೀಡಿದ್ದು.. ನಗುವಿನ ಟಾನಿಕ್ ಜೊತೆ ರಿಲ್ಯಾಕ್ಸ್ ಆಗಿ ಅಂತ ಬರ್ತಿದೆ ಈ ಟ್ರಯೋ ಕಾಂಬೋ. ಹೊಡಿ ಬಡಿ ಕಡಿ ಸಿನಿಮಾಗಳಿಂದ ಬೇಸರ ಆಗಿದ್ರೆ.. ನಾನ್ಸ್ಟಾಪ್ ಮನರಂಜನೆಯ ಔಟ್ & ಔಟ್ ರಿಲ್ಯಾಕ್ಸ್ ಹಬ್ಬ ಕೊಡಲಿದೆ ಈ ರಿಲ್ಯಾಕ್ಸ್. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಟೈಸನ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್
- ನಗುವಿನ ಟಾನಿಕ್ ಜೊತೆ ನಗೆ ಹಬ್ಬಕ್ಕೆ ಟೀಂ ರಿಲ್ಯಾಕ್ಸ್ ಸಜ್ಜು..!
- ಡಿಬಾಸ್ ಮೆಜೆಸ್ಟಿಕ್ & ಚಿಂಗಾರಿ ನಿರ್ಮಾಪಕರಿಂದ ಟ್ರೈಲರ್
- ನಾನ್ಸ್ಟಾಪ್ ಫನ್, ಎಮೋಷನ್, ಮಸ್ತ್ ಮೇಕಿಂಗ್ ಮೂವಿ
ಇದು ಕಾಮಿಡಿ ಕಿಂಗ್ ಕೋಮಲ್ ನಟನೆಯ ರಿಲ್ಯಾಕ್ಸ್ ಸಿನಿಮಾದ ಟ್ರೈಲರ್ ಝಲಕ್. ಸೋನಲ್ ಮೊಂಟೆರೋ ಜೊತೆ ಕಮಾಲ್ ಮಾಡೋಕೆ ಬರ್ತಿರೋ ಕೋಮಲ್ಗೆ ನಟ ವಿನೋದ್ ಪ್ರಭಾಕರ್ ಕೂಡ ವಿಶೇಷ ಪಾತ್ರದ ಮೂಲಕ ಸಾಥ್ ನೀಡಿದ್ದಾರೆ. ಅಂಬಟಿ ಮಧುಮೋಹನ್ ಕೃಷ್ಣ ನಿರ್ಮಾಣದ ಹಾಗೂ ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಚಿತ್ರ ಮುಂದಿನ ವಾರವೇ ನಿಮ್ಮನ್ನ ಥಿಯೇಟರ್ನಲ್ಲಿ ರಂಜಿಸಲು ಸಜ್ಜಾಗಿ ನಿಂತಿದೆ.
ದರ್ಶನ್ ನಟನೆಯ ಮೆಜಿಸ್ಟಿಕ್ ಚಿತ್ರದ ನಿರ್ಮಾಪಕರಾದ ಭಾಮಾ ಹರೀಶ್ ಹಾಗೂ ಚಿಂಗಾರಿ ಮಹದೇವ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಅಂಬಟಿ ಮಧುಮೋಹನ್ ಕೃಷ್ಣ ಚಿತ್ರದ ಕಥೆ ಹಾಗೂ ನಿರ್ಮಾಣದ ಅನುಭವವನ್ನು ಹಂಚಿಕೊಂಡರು. 25 ಪರ್ಸೆಂಟ್ ಶೂಟಿಂಗ್ ಬಳಿಕ ರಷಸ್ ನೋಡಿದಂತಹ ಪ್ರೊಡ್ಯೂಸರ್ಗೆ ಕೋಮಲ್ ಪಾತ್ರ ತುಂಬಾ ಇಷ್ಟವಾಯಿತಂತೆ. ಹಾಗಾಗಿ ಸಿನಿಮಾವನ್ನು ಟೇಕ್ ಓವರ್ ಮಾಡಲು ನಿರ್ಧರಿಸಿದ್ರಂತೆ. ಬಡ ಕುಟುಂಬದ ನಾಯಕ ಹಾಗೂ ಶ್ರೀಮಂತ ಮನೆತನದ ನಾಯಕಿಯ ನಡುವಿನ ಕಥೆ ಇದಾಗಿದ್ದು. ಹಣ ಬರುತ್ತೆ, ಹೋಗುತ್ತೆ. ಆದ್ರೆ ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ನನಗಿದೆ. ಅಪ್ಪ-ಮಗನ ಸಂಬಂಧದ ಸನ್ನಿವೇಶಗಳು ಚಿತ್ರದಲ್ಲಿ ಹೈಲೆಟ್ ಅಂತಾರೆ ನಿರ್ಮಾಪಕರು.
ಹಾಸ್ಯಮಯ ಮಾತುಗಳ ಮೂಲಕ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕೋಮಲ್.. ಅಮೃತವರ್ಷಿಣಿ ಡೈರೆಕ್ಟರ್ ದಿನೇಶ್ ಬಾಬು ಜೊತೆ ಕೇವಲ ಎಂಟೂವರೆ ದಿನಗಳಲ್ಲಿ 38 ಲಕ್ಷ ರೂಪಾಯಿ ವೆಚ್ಚದಲ್ಲಿ ಮಿಸ್ಟರ್ ಗರಗಸ ಚಿತ್ರ ಮಾಡಿದ್ದೆವು. ಆ ಸಿನಿಮಾ ಉತ್ತಮ ಹಣ ಗಳಿಸಿತು. ರಿಲ್ಯಾಕ್ಸ್ ಚಿತ್ರವೂ ನನಗೆ ಒಳ್ಳೆಯ ಮೈಲೇಜ್ ನೀಡುವ ಸಿನಿಮಾ ಅನ್ನೋ ವಿಶ್ವಾಸವಿದೆ. ಎಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಈ ಚಿತ್ರವನ್ನು ಒಬ್ಬರೇ ಕುಳಿತು ನೋಡಿದರೆ ನಗುತ್ತೀರಿ, ಜೊತೆಯಲ್ಲಿ ಕುಳಿತು ನೋಡಿದರೆ ಬಿದ್ದು ಬಿದ್ದು ನಗುತ್ತೀರಿ ಎಂದರು.
ರಾಕೇಶ್ ಸಿ. ತಿಲಕ್ ಕ್ಯಾಮೆರಾ ಕೈಚಳಕ, ಜೆಸ್ಸಿ ಗಿಫ್ಟ್ ಸಂಗೀತ ಹಾಗೂ ಅರವಿಂದ್ ರಾಜ್ ಸಂಕಲನ ಈ ಚಿತ್ರಕ್ಕಿದೆ. ನಂದು ಹಿನ್ನೆಲೆ ಸಂಗೀತ ನೀಡಿದ್ದು, ಯೋಗಾನಂದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕಲೈ ಹಾಗೂ ಮುರಳಿ ಮಾಸ್ಟರ್ಗಳು ಕೊರಿಯೋಗ್ರಫಿ ಮಾಡಿದ್ದಾರೆ. ಹಾಸ್ಯ, ಪ್ರೀತಿ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ಮೂಡಿಬಂದಿರೋ ರಿಲ್ಯಾಕ್ಸ್ ಚಿತ್ರದಲ್ಲಿ ಕೋಮಲ್ ಹಾಸ್ಯ, ಸೋನಲ್ ಅಭಿನಯ ಹಾಗೂ ವಿನೋದ್ ಪ್ರಭಾಕರ್ ಸ್ಪೆಷಲ್ ಝಲಕ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆಯಿದೆ. ನವೆಂಬರ್ 27ಕ್ಕೆ ಈ ಚಿತ್ರ ತೆರೆಗೆ ಬರ್ತಿದ್ದು.. ಸಿನಿಮಾದ ಸ್ಯಾಂಪಲ್ಸ್ ನೋಡುಗರ ನಾಡಿಮಿಡಿತ ಹೆಚ್ಚಿಸಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
