ದಿ ವೆಯ್ಟ್ ಈಸ್ ಓವರ್.. ಮ್ಯಾಕ್ಸ್ ಜೋಡಿ ಮಾರ್ಕ್‌ನೊಂದಿಗೆ ಬಿಗ್ ನ್ಯೂಸ್ ಕೊಟ್ಟಿದೆ. ಟ್ರೈಲರ್ ಉರಂ ಮಾಸ್ ಆಗಿದ್ದು, ಸುದೀಪಿಯೆನ್ಸ್‌ಗೆ ಮಾಸ್ ಜಾತ್ರೆ ಹಂಡ್ರೆಡ್ ಪರ್ಸೆಂಟ್ ಕನ್ಫರ್ಮ್. 107 ದಿನದಲ್ಲಿ 166 ಕಾಲ್‌ಶೀಟ್ ನೀಡಿ, ನಾಲ್ಕೇ ತಿಂಗಳಲ್ಲಿ ಪಂಚಭಾಷಾ ಚಿತ್ರ ತಯಾರಾಗೋಕೆ ಬಾದ್‌ಷಾ ಕಿಚ್ಚ ಸುದೀಪ್ ಕಾರಣರಾಗಿದ್ದಾರೆ. ಹಾಗಾದ್ರೆ ಟ್ರೈಲರ್ ಹೇಗಿದೆ..? ಕಿಚ್ಚನ ಗತ್ತಿಗೆ ಇಡೀ ಇಂಡಸ್ಟ್ರಿ ಸಾಥ್ ನೀಡಿದ್ದು ಹೇಗೆ ಅನ್ನೋದ್ರ ಟ್ರೈಲರ್ ಲಾಂಚ್ ಇವೆಂಟ್ ಹೇಗಿತ್ತು ಅಂತಾ ಹೇಳ್ತೀವಿ ಈ ಸ್ಟೋರಿ ನೋಡಿ.
ನೀವು ಸಿನಿಮಾ ನೋಡೋಕೆ ಥಿಯೇಟರ್‌ಗೆ ಹೋಗೋ ಡೇಟ್‌ನ ಈಗಲೇ ಮಾರ್ಕ್ ಮಾಡಿ ಇಟ್ಕೊಳಿ. ಯಾಕಂದ್ರೆ ಈ ಬಾರಿ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಅದೇ ಮಾರ್ಕ್ ಅನ್ನೋ ಮಾಸ್ ಟೈಟಲ್‌ನೊಂದಿಗೆ ಬಿಗ್‌ಸ್ಕ್ರೀನ್‌ಗೆ ಬರ್ತಿದ್ದಾರೆ. ಒನ್ಸ್ ಅಗೈನ್ ಪೊಲೀಸ್ ಆಫೀಸರ್ ಆಗಿ ಅನ್ನೋದು ವಿಶೇಷ. ಇಂದು ಮಾರ್ಕ್ ಟ್ರೈಲರ್ ಲಾಂಚ್ ಆಗಿದ್ದು, ಇಡೀ ಚಿತ್ರರಂಗ ಬಂದು ಕಿಚ್ಚನಿಗೆ ಸಾಥ್ ನೀಡಿದ್ದು ಇಂಟರೆಸ್ಟಿಂಗ್.
ಅಬ್ಬಬ್ಬಾ.. ‘ಮಾರ್ಕ್’ ಹೈ- ವೋಲ್ಟೇಜ್ ಟ್ರೈಲರ್ ಔಟ್..!!
ತೆರೆ ಮೇಲಷ್ಟೇ ಅಲ್ಲ.. ನಿಜ ಜೀವನದಲ್ಲೂ ಸುದೀಪ್ ಹೀರೋ
ಎಸ್ ಪಿ ಅಜಯ್ ಮಾರ್ಕಂಡೇಯನಾಗಿ ಕಿಚ್ಚ ಸುದೀಪ್ ಈ ಬಾರಿ ಡಿಫರೆಂಟ್ ಹೇರ್‌ಸ್ಟೈಲ್ ಹಾಗೂ ಸ್ವ್ಯಾಗ್‌ನಿಂದ ಕಿಕ್ ಕೊಡಲಿದ್ದಾರೆ. ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರೇ ಈ ಬಾರಿಯೂ ಆ್ಯಕ್ಷನ್ ಕಟ್ ಹೇಳಿದ್ದು, ಚೈಲ್ಡ್ ಟ್ರಾಫಿಕಿಂಗ್, ಪೊಲಿಟಿಕಲ್ ಆ್ಯಂಡ್ ಗ್ಯಾಂಗ್‌ಸ್ಟರ್ ಡ್ರಾಮಾ ರೀತಿ ಕಾಣ್ತಿದೆ.
ಮ್ಯಾಕ್ಸ್‌ಗಿಂತ ಈ ಸಿನಿಮಾ ಬಹಳ ವಿಭಿನ್ನವಾಗಿರಲಿದ್ದು, ಐದಾರು ಲೇಯರ್‌ಗಳಿಂದ ಮನರಂಜನೆ ನೀಡಲಿದೆಯಂತೆ. ಮೊದಲಾರ್ಧ ಮಾಸ್, ದ್ವಿತಿಯಾರ್ಧ ಎಮೋಷನಲಿ ಜನಕ್ಕೆ ಕನೆಕ್ಟ್ ಆಗಲಿದೆಯಂತೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ತಮಿಳಿನ ಸತ್ಯಜ್ಯೋತಿ ಫಿಲಂಸ್ ಇದನ್ನ ಕನ್ನಡದ ಜೊತೆ ಪಂಚಭಾಷೆಗಳಲ್ಲಿ ಪ್ಯಾನ್ ಇಂಡಿಯಾ ತೆರೆಗೆ ತರ್ತಿದೆ. ಡಿಸೆಂಬರ್ 25ಕ್ಕೆ ಅಂದುಕೊಂಡ ಡೇಟ್‌ಗೆ ಮಾರ್ಕ್ ತೆರೆಗಪ್ಪಳಿಸುತ್ತಿದೆ.
107 ದಿನ.. 166 ಕಾಲ್‌ಶೀಟ್.. 4 ತಿಂಗಳಲ್ಲಿ 5 ಭಾಷೆ ಚಿತ್ರ
ಕಿಚ್ಚನ ಗತ್ತು.. ಇಂಡಸ್ಟ್ರಿಗೆ ಗೊತ್ತು.. ಮಾರ್ಕ್ ಉತ್ಸವ ಜೋರು
ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ಸುದೀಪ್ ತೆರೆ ಮೇಲಷ್ಟೇ ಅಲ್ಲ, ಸೆಟ್‌ನಲ್ಲಿ ಕೂಡ ಹೀರೋ. ಹಾಗಾಗಿಯೇ ಇಂತಹ ಬಿಗ್ ಸ್ಕೇಲ್ ಮೂವಿ ಇಷ್ಟು ಬೇಗ ತೆರೆಗೆ ತರುವಂತಾಯ್ತು ಎಂದರು.
ಸಿಂಪಲ್ ಸುನಿ, ಜೋಗಿ ಪ್ರೇಮ್, ಎಪಿ ಅರ್ಜುನ್, ಅನೂಪ್ ಭಂಡಾರಿ ಹಾಗೂ ಆರ್ ಚಂದ್ರು ಅಂತಹ ಡೈರೆಕ್ಟರ್‌ಗಳ ಸಾಥ್ ಮಾರ್ಕ್ ಟ್ರೈಲರ್ ಲಾಂಚ್‌ಗೆ ಸಿಕ್ಕಿತು. ಎಲ್ಲರೂ ಬಣ್ಣ ಹಚ್ಚಿದ ಮೇಲೆ ಚೆನ್ನಾಗಿ ಕಾಣ್ತಾರೆ. ಆದ್ರೆ ಮಸಿ ಬಳಿದರೂ ಚೆನ್ನಾಗಿ ಕಾಣ್ತಾರೆ ಸುದೀಪ್ ಸರ್ ಅಂತ ಸುನಿ ಹೇಳಿದ್ರೆ, ನೀವು ನಿಜಕ್ಕೂ ಸ್ಫೂರ್ತಿ ಸರ್.. 2026 ಡಿಸೆಂಬರ್‌ಗೆ ನಾನು ಸುದೀಪ್ ಸರ್ ಜೊತೆ ಸಿನಿಮಾ ಮಾಡ್ತೀನಿ ಅಂದ್ರು ಜೋಗಿ ಪ್ರೇಮ್.
ದಾದಾ ಯಾರ್ ಗೊತ್ತಾ ಹಾಡಿಗೆ ಸಾಹಿತ್ಯ ಬರೆದಿರೋ ಬಿಲ್ಲ ರಂಗ ಬಾಷ ಡೈರೆಕ್ಟರ್ ಅನೂಪ್ ಭಂಡಾರಿ ವೇದಿಕೆ ಮೇಲೆ ಆ ಹಾಡನ್ನ ಹಾಡುವುದರ ಮೂಲಕ ಎಂಟರ್‌ಟೈನ್ ಮಾಡಿದ್ರು.ಇನ್ನು ಇಡೀ ಸಿಸಿಎಲ್ ಹಾಗೂ ಕಿಚ್ಚನ ಬಳಗ ಮಾರ್ಕ್ ಟ್ರೈಲರ್ ಲಾಂಚ್‌ಗೆ ಜೋಶ್ ತುಂಬಿತು. ಡಾರ್ಲಿಂಗ್ ಕೃಷ್ಣ, ಜೆಕೆ, ಪ್ರದೀಪ್, ಪ್ರತಾಪ್ ನಾರಾಯಣ್, ಅರುಣ್ ಸಾಗರ್, ಉಗ್ರಂ ಮಂಜು, ಆನೆ ವಿನಯ್, ರಾಜೀವ್, ಪ್ರವೀಣ್, ಚಂದನ್.. ಹೀಗೆ ಇಡೀ ಕಿಚ್ಚ ಗ್ಯಾಂಗ್ ಅಲ್ಲಿ ನೆರೆದಿತ್ತು. ಇಂಟರೆಸ್ಟಿಂಗ್ ಅಂದ್ರೆ ಸೋದರಳಿಯ ಮ್ಯಾಂಗೋ ಪಚ್ಚ ಅಲಿಯಾಸ್ ಸಂಚಿತ್, ಮಾವನ ಹಾರ್ಡ್ ವರ್ಕ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು.
ನಿರ್ಮಾಣದ ಜೊತೆ ಡಿಸ್ಟ್ರಿಬ್ಯೂಷನ್‌ಗಿಳಿದ ಪ್ರಿಯಾ ಸುದೀಪ್
ಮ್ಯಾಕ್ಸ್‌ನಂತೆ ‘ಮಾರ್ಕ್’ನಲ್ಲೂ ಸಾನ್ವಿ ಸುದೀಪ್ ಗಾಯನ..!
ನನಗಿದು ಕಲಿಯೋಕೆ ಒಳ್ಳೆಯ ಅವಕಾಶ. ನಿರ್ಮಾಣದ ಜೊತೆ ಡಿಸ್ಟ್ರಿಬ್ಯೂಷನ್ ಮಾಡೋಕೆ ಅಪ್ರೋಚ್ ಬಂತು ಒಪ್ಪಿಕೊಂಡೆ ಅಂದ್ರು ಸುದೀಪ್ ಪತ್ನಿ ಪ್ರಿಯಾ ಸುದೀಪ್. ಸತ್ಯ ಜ್ಯೋತಿ ಫಿಲಂಸ್ ಜೊತೆ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಕೂಡ ನಿರ್ಮಾಣ ಮಾಡಿರೋ ಈ ಸಿನಿಮಾನ ಕೆಆರ್‌ಜಿ ಜೊತೆಗೂಡಿ ಪ್ರಿಯಾ ಸುದೀಪ್ ಅವರೇ ವಿಶಾಲ ಕರ್ನಾಟಕಕ್ಕೆ ವಿತರಣೆ ಮಾಡ್ತಿದ್ದಾರೆ. ಇನ್ನು ಮ್ಯಾಕ್ಸ್ ಚಿತ್ರದಲ್ಲಿ ಒಂದೊಳ್ಳೆ ಹಾಡನ್ನ ಅವರೇ ಬರೆದು ತಂದೆಗಾಗಿ ಹಾಡಿದ್ರು ಸಾನ್ವಿ ಸುದೀಪ್. ಈ ಬಾರಿ ಕೂಡ ಮಾರ್ಕ್ ಚಿತ್ರದಲ್ಲಿ ಅಂಥದ್ದೊಂದು ಸರ್‌ಪ್ರೈಸ್ ಕಾದಿದೆ. ಅಜನೀಶ್ ಲೋಕನಾಥ್ ಹೇಳಿದಂತೆ ಸಾನ್ವಿ ಕಿಕ್ ಕೊಡೋ ಹಾಡಿಗೆ ಧನಿಗೂಡಿಸಿದ್ದಾರೆ.
ಒಂದೇ ತಾಯಿಗೆ ಹುಟ್ಟಿಲ್ಲ.. ಆದ್ರೆ ಎಲ್ಲಾ ಡೈರೆಕ್ಟರ್ಸ್ ನನ್ನ ಬ್ರದರ್ಸ್
ಅರ್ಜುನ್ ಜನ್ಯ 45ಗೂ ಶುಭ ಕೋರಿದ ಬಾದ್‌ಷಾ ಕಿಚ್ಚ ಸುದೀಪ್
ಬ್ಯಾಕ್ ಟು ಬ್ಯಾಕ್ ತಮಿಳು ಡೈರೆಕ್ಟರ್‌ಗೆ ಡೇಟ್ಸ್ ನೀಡಿದ ವಿಚಾರ ಮಾತನಾಡಿದ ಸುದೀಪ್, ಇಲ್ಲಿ ಬಂದಿರೋ ಎಲ್ಲಾ ಕನ್ನಡದ ಡೈರೆಕ್ಟರ್ಸ್ ನನ್ನ ತಾಯಿಯಿ ಹೊಟ್ಟೆಯಲ್ಲಿ ಹುಟ್ಟಿಲ್ಲ ಅಷ್ಟೇ. ಆದ್ರೆ ಅವರೆಲ್ಲಾ ನನ್ನ ಬ್ರದರ್ಸ್ ಎಂದರು. ವಿಜಯ್ ಡೈರೆಕ್ಟ್ ಕಥೆ ಬರ್ತಾರೆ. ಆದ್ರೆ ನಮ್ಮವರು ಕಥೆಗಳನ್ನ ಮಾತಾಡ್ತಾ ಸಮಯ ಹೋಗೋದೇ ಗೊತ್ತಾಗಲ್ಲ ಅಂತ ಸಣ್ಣದಾಗಿ ಕಾಲೆಳೆದರು ಕಿಚ್ಚ.
ಇನ್ನು ಶಿವಣ್ಣ-ಉಪೇಂದ್ರ-ರಾಜ್ ಶೆಟ್ಟಿಯ 45 ಸಿನಿಮಾ ಕೂಡ ಇದೇ ಡಿಸೆಂಬರ್ 25ಕ್ಕೆ ಮಾರ್ಕ್ ಜೊತೆ ತೆರೆಗೆ ಬರ್ತಿದೆ. ಆದ್ರೆ ಅರ್ಜುನ್ ಜನ್ಯಗೆ ಮನಸಾರೆ ಹರಸಿ, ಶುಭ ಕೋರಿದ ಕಿಚ್ಚ, ಎಲ್ಲರಿಗೂ ಒಳ್ಳೆಯದಾಗಬೇಕು. 45 ದೊಡ್ಡ ಹಿಟ್ ಆಗಲಿ ಎಂದರು. ಇನ್ನು ಸೀಕಲ್ ರಾಮಚಂದ್ರಗೌಡ, ರಾಜು ಗೌಡ ಹಾಗೂ ಡಿಎಸ್ ಮ್ಯಾಕ್ಸ್‌ನ ದಯಾನಂದ್ ಅವರು ಕೂಡ ಮಾರ್ಕ್ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಭಾಗಿಯಾಗಿ ಟೀಂಗೆ ಶುಭ ಕೋರಿದ್ರು.
ಒಟ್ಟಾರೆ ಕಿಚ್ಚ ಈ ಬಾರಿ ಎಸ್‌ಪಿ ಆಗಿ ಪೊಲೀಸ್‌ಗಿರಿ ತೋರಲಿದ್ದು, ಡ್ರ್ಯಾಗನ್ ಮಂಜು, ಗೋಪಾಲ ಕೃಷ್ಣ ದೇಶಪಾಂಡೆ, ಟಾಮ್ ಚಾಕೋ, ಆನೆ ವಿನಯ್, ಚಂದನ್ ಗೌಡ, ರೋಶಿಣಿ ಪ್ರಕಾಶ್, ಚೈತ್ರಾ, ನವೀನ್ ಚಂದ್ರ, ಯೋಗಿ ಬಾಬು, ವಿಕ್ರಾಂತ್, ನಿಶ್ವಿಕಾ ನಾಯ್ಡು.. ಹೀಗೆ ದೊಡ್ಡ ತಾರಾಗಣವಿದೆ.
