ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ 7 ಕೋಟಿ ಮೌಲ್ಯದ ‘ಫಾಲ್ಕನ್’ ಕ್ಯಾರವ್ಯಾನ್ ದೇಶದ ಟಾಕ್ ಆಗಿತ್ತು. ಆದ್ರೀಗ ಅದೇ ಲೀಗ್‌ಗೆ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಎಂಟ್ರಿ ಕೊಡ್ತಿದ್ದಾರೆ. ಹೈಟೆಕ್ ಕ್ಯಾರವ್ಯಾನ್ ಕಿಚ್ಚನಿಗಾಗಿ ರೆಡಿಯಾಗಿದ್ದು, ಒಳಗಿನ ಐಷಾರಾಮಿ ಸೌಲಭ್ಯಗಳು ಈಗ ಸಿನಿಪ್ರಿಯರ ಕಣ್ಣು ಕುಕ್ಕುತ್ತಿವೆ. ಹಾಗಿದ್ರೆ ಅಲ್ಲು ಫಾಲ್ಕನ್‌ಗೂ ಕಿಚ್ಚನ ಹೊಸ ಕ್ಯಾರವ್ಯಾನ್‌ಗೂ ಇರುವ ವ್ಯತ್ಯಾಸ ಏನು..? ಇಲ್ಲಿದೆ ಫುಲ್ ರಿಪೋರ್ಟ್.
- ಸೌತ್ ಸ್ಟಾರ್ಸ್ ಕ್ಯಾರವಾನ್ ಕ್ಲಬ್‌ಗೆ ಕಿಚ್ಚ ಸುದೀಪ್ ಎಂಟ್ರಿ..!
- ಸ್ಯಾಂಡಲ್‌ವುಡ್‌ನ ನಂ.1 ಕ್ಯಾರವಾನ್ ಕಿಚ್ಚನ ಗ್ಯಾರೇಜ್‌ಗೆ..!
- 6.5 ಕೋಟಿ ಕ್ಯಾರವಾನ್ನಲ್ಲಿ ಕಿಚ್ಚನ ರಾಯಲ್ ಲೈಫ್..!
- ಕಿಚ್ಚನ ಕ್ಯಾರವಾನ್ನಲ್ಲಿ ಮಿನಿ ಕಿಚನ್..ಮಿನಿ ಜಿಮ್..!
ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಅವರ ‘ಫಾಲ್ಕನ್’ ಕ್ಯಾರವ್ಯಾನ್ ಸ್ಟೈಲ್ ಮತ್ತು ಲಕ್ಸುರಿಗೆ ಸಿಕ್ಕಾಪಟ್ಟೆ ಫೇಮಸ್. ಸುಮಾರು 7 ಕೋಟಿ ಮೌಲ್ಯದ ಈ ವ್ಯಾನಿಟಿ ವ್ಯಾನ್‌ಗೆ ದೇಶದ ಹಲವಾರು ಸ್ಟಾರ್ಸ್ ಫಿದಾ ಆಗಿದ್ದರು. ಈಗ ಅದೇ ರೇಸ್‌ಗೆ ಕಿಚ್ಚ ಸುದೀಪ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸುಮಾರು ₹6.5 ಕೋಟಿ ಮೌಲ್ಯದ ಹೊಸ ಹೈಟೆಕ್ ಕ್ಯಾರವ್ಯಾನ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಕನ್ನಡ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಹಾಗೂ ಅತ್ಯಾಧುನಿಕ ಕ್ಯಾರವ್ಯಾನ್ ಎನ್ನಲಾಗುತ್ತಿದೆ. ಕಾರುಗಳ ಕ್ರೇಜ್ ಬಳಿಕ ಈಗ ಕಿಚ್ಚನ ಈ ಹೊಸ ಸೇರ್ಪಡೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.
ಭಾರತದ ಖ್ಯಾತ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ DC2 ಸಂಸ್ಥೆ ಕಿಚ್ಚನ ಅಭಿರುಚಿಗೆ ತಕ್ಕಂತೆ ಈ ಕ್ಯಾರವ್ಯಾನ್ ವಿನ್ಯಾಸ ಮಾಡಿದೆ ಎನ್ನಲಾಗಿದೆ. ಹೊರಗಡೆ ಸ್ಟೈಲಿಶ್ ಲುಕ್ ಇದ್ದರೆ, ಒಳಗಡೆ ಐಷಾರಾಮಿ ಮನೆಯ ಅನುಭವ. ಆಕರ್ಷಕ ಲಿವಿಂಗ್ ಏರಿಯಾ, ಕಂಫರ್ಟ್ ಬೆಡ್‌ರೂಮ್, ಮಿನಿ ಕಿಚನ್, ಹೈಟೆಕ್ ವಾಶ್‌ರೂಮ್, ಮ್ಯೂಸಿಕ್ ಸಿಸ್ಟಮ್, ಟಿವಿ, ಜೊತೆಗೆ ಮಿನಿ ಜಿಮ್ ಕೂಡ ಅಳವಡಿಸಲಾಗಿದೆ ಎನ್ನಲಾಗಿದೆ. ‘ಬಿಲ್ಲ ರಂಗ ಭಾಷಾ’, ‘ಬಿಗ್ ಬಾಸ್’ ಸೇರಿದಂತೆ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಕಿಚ್ಚನಿಗೆ ಶೂಟಿಂಗ್ ಸ್ಪಾಟ್‌ನಲ್ಲೇ ಮನೆಯ ಅನುಭವ ಸಿಗುವಂತೆ ಈ ಕ್ಯಾರವ್ಯಾನ್ ಸಿದ್ಧವಾಗಿದೆ.
ಸದ್ಯ ಈ ಐಷಾರಾಮಿ ಕ್ಯಾರವ್ಯಾನ್ ಇನ್ನೂ ಕಿಚ್ಚ ಸುದೀಪ್ ಕೈ ಸೇರಿಲ್ಲ. ಪೂನೆಯಲ್ಲಿ ಫೈನಲ್ ಫಿನಿಶಿಂಗ್ ನಡೆಯುತ್ತಿದ್ದು, ಇನ್ನೆರಡು-ಮೂರು ವಾರಗಳಲ್ಲಿ ಬೆಂಗಳೂರಿಗೆ ಬರಲಿದೆ ಎನ್ನಲಾಗುತ್ತಿದೆ. ‘ಬಿಲ್ಲ ರಂಗ ಭಾಷಾ’ ಮುಂದಿನ ಶೆಡ್ಯೂಲ್ ವೇಳೆಗೆ ಈ ಡ್ರೀಮ್ ಕ್ಯಾರವ್ಯಾನ್ ಕಿಚ್ಚನ ಜೊತೆಗಿರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ, ಅಲ್ಲು ಅರ್ಜುನ್ ಅವರ ‘ಫಾಲ್ಕನ್’ ನಂತರ ಈಗ ಕಿಚ್ಚ ಸುದೀಪ್ ಅವರ ಹೈಟೆಕ್ ಕ್ಯಾರವ್ಯಾನ್ ಕೂಡ ದಕ್ಷಿಣ ಭಾರತದ ಸ್ಟಾರ್ ವ್ಯಾನಿಟಿ ವ್ಯಾನ್‌ಗಳ ಪಟ್ಟಿಯಲ್ಲಿ ಹೊಸ ಸೆನ್ಸೇಷನ್ ಆಗುವ ಲಕ್ಷಣ ಕಾಣಿಸುತ್ತಿದೆ.
