ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!

ರಾವಣ ಗತ್ತು.. ದುರ್ಯೋಧನ ಗೈರತ್ತು.. ದೇವರಾಯನ ಸಾಹಸ

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ (2)

ಬಾಕ್ಸ್ ಆಫೀಸ್ ಶೇಕ್ ಮಾಡೋ ಅಂತಹ ಮೂರು ಕಟೌಟ್‌ಗಳು ಬೆಳ್ಳಿಪರದೆ ಮೇಲೆ ರಾಜ-ಮಹಾರಾಜರಾಗಿ ನಿಂತರೆ ಥಿಯೇಟರ್‌ಗಳು ಬ್ಲಾಸ್ಟ್ ಆಗೋದು ಪಕ್ಕಾ. ಇತಿಹಾಸದ ಪುಟಗಳಿಂದ ಎದ್ದು ಬಂದಂತೆ.. ಗಜ ಗಾಂಭೀರ್ಯದಿಂದ ಮೆರೆಯುತ್ತಿರೋ ನಮ್ಮ ಸ್ಟಾರ್ಸ್ ಎಲ್ಲರ ಹುಬ್ಬೇರಿಸಿದ್ದಾರೆ. ಹಾಗಾದ್ರೆ ಪೌರಾಣಿಕ ಪಾತ್ರಗಳಿಂದ ಅಬ್ಬರಿಸಿದ, ಆರ್ಭಟಿಸುತ್ತಿರೋ ಆ ರೋಮಾಂಚನಕಾರಿ ಅವತಾರಗಳ ಸಿಕ್ರೇಟ್.. ಆ ಸ್ಟಾರ್‌ಗಳ ಅಸಲಿ ಕಹಾನಿ ಇಲ್ಲಿದೆ.

ಪೌರಾಣಿಕ ಯುಗದಿಂದ ಹಿಡಿದು ಐತಿಹಾಸಿಕ ಸಾಮ್ರಾಜ್ಯಗಳವರೆಗೆ ನಮ್ಮ ಸ್ಯಾಂಡಲ್‌ವುಡ್ ನಟರು ರಾಜ-ಮಹಾರಾಜರಾಗಿ ಸ್ಕ್ರೀನ್ ಮೇಲೆ ನಿಂತ್ರೆ, ಬಾಕ್ಸ್ ಆಫೀಸ್ ಧೂಳೆದ್ದು ಹೋಗೋದ್ರಲ್ಲಿ ಎರಡು ಮಾತಿಲ್ಲ. ಡಾ. ರಾಜ್‌ಕುಮಾರ್ ಅವರ ಕಾಲದಿಂದ ಶುರುವಾದ ಈ ರಾಯಲ್ ಪರಂಪರೆಯನ್ನು ಇಂದಿನ ಯಶ್, ದರ್ಶನ್ ಮತ್ತು ಸುದೀಪ್ ತಮ್ಮದೇ ಮಾಸ್ ಶೈಲಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿರೋದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಭಾರತೀಯ ಪೌರಾಣಿಕ ಇತಿಹಾಸದಲ್ಲೇ ಅತ್ಯಂತ ಬುದ್ಧಿವಂತ, ಕಾಂಪ್ಲೆಕ್ಸ್ ಹಾಗೂ ಪವರ್‌ಫುಲ್ ಕ್ಯಾರಕ್ಟರ್ ರಾವಣ. ಇಂತಹ ಪಾತ್ರಕ್ಕೆ ನಮ್ಮ ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಸಿನಿಮಾ ಮೂಲಕ ರಾವಣನಾಗಿ ಅವತಾರ ಎತ್ತಿದ್ದಾರೆ. ತಮ್ಮ ಕಮಾಂಡಿಂಗ್ ಸ್ಕ್ರೀನ್ ಪ್ರೆಸೆನ್ಸ್, ತೀಕ್ಷ್ಣ ಕಣ್ಣೋಟ ಮತ್ತು ಆ Larger Than Life ಆಟಿಟ್ಯೂಡ್‌ನಿಂದ ಯಶ್ ರಾವಣನ ಅಹಂಕಾರ, ಕ್ಷಾತ್ರ ತೇಜಸ್ಸು ಮತ್ತು ಪರಾಕ್ರಮಕ್ಕೆ ಮಾಸ್ ಆಗಿ ಜೀವ ತುಂಬೋದ್ರಲ್ಲಿ ಯಾವುದೇ ಡೌಟೇ ಇಲ್ಲ ಇದಕ್ಕೆ ಸಾಕ್ಷಿ ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್.

ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ ಪಾತ್ರಗಳಿಗೆ ಹೊಸ ಮೆರಗು ತಂದ ಚಿತ್ರ ಮುನಿರತ್ನ ಕುರುಕ್ಷೇತ್ರ. ಈ ಬಿಗ್ ಬಜೆಟ್ ಹೈ-ವೋಲ್ಟೇಜ್ ಸಿನಿಮಾದಲ್ಲಿ ಕೌರವ ರಾಜಕುಮಾರ ದುರ್ಯೋಧನನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ಭಟಿಸಿದ ರೀತಿ ಸಣ್ಣದಲ್ವೇ ಅಲ್ಲ. ತಮ್ಮ ಗಂಭೀರ ನಡಿಗೆ, ಕಟು ಧ್ವನಿ ಮತ್ತು ಸಿಂಹದಂತಹ ಗಾಂಭೀರ್ಯದಿಂದ ಇಡೀ ಸಿನಿಮಾವನ್ನು ಒಂಟಿ ಕಾಲಿನಲ್ಲಿ ಮುನ್ನಡೆಸಿ, ದುರ್ಯೋಧನನ ಸ್ವಾಭಿಮಾನಕ್ಕೆ ಹೊಸ ಭಾಷ್ಯ ಬರೆದಿದ್ದರು.

ಇನ್ನು 1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರು ‘ಶ್ರೀ ಕೃಷ್ಣದೇವರಾಯ’ನಾಗಿ ಬೆಳ್ಳಿಪರದೆ ಮೇಲೆ ರಾರಾಜಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ದಶಕಗಳ ಬಳಿಕ, ಅದೇ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ತೆರೆಗೆ ತರಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ. ಮಾಸ್ ಅಂಡ್ ಕ್ಲಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಈಗ  ದೇವರಾಯನಾಗಿ ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಒಟ್ಟಾರೆ, ಈ ಮೂವರು ದಿಗ್ಗಜರ ಐತಿಹಾಸಿಕ ಲುಕ್‌ಗಳ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದು, ಅಭಿಮಾನಿಗಳ ಕೌತುಕವನ್ನು ನೆಕ್ಸ್ಟ್ ಲೆವೆಲ್‌ಗೆ ತೆಗೆದುಕೊಂಡು ಹೋಗಿವೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version