ಬಾದ್‌ಷಾ ಕಿಚ್ಚ ಬರ್ತ್‌ಡೇಗೆ ಡಬಲ್ ಅಲ್ಲ ತ್ರಿಬಲ್ ಡೋಸ್

K47 ಟೀಸರ್ ಜೊತೆ ಬಿಲ್ಲ ರಂಗ ಬಾಷ ಫಸ್ಟ್‌‌ಲುಕ್ ಗಿಫ್ಟ್..!

Web (13)

ಬಾದ್‌ಷಾ ಬರ್ತ್ ಡೇಗೆ ಈ ಬಾರಿ ಎರಡಲ್ಲ ಮೂರಲ್ಲ ನಾಲ್ಕೈದು ಸರ್‌‌ಪ್ರೈಸ್‌‌ಗಳು ಕಾಯ್ತಿವೆ.  ಆಲ್ ಇಂಡಿಯಾ ಕಟೌಟ್ ಜನುಮ ದಿನಕ್ಕೆ ದಿನಗಣನೆ ಶುರುವಾಗಿದ್ದು, ಫ್ಯಾನ್ಸ್‌ಗೆ ಹಬ್ಬ ಕನ್ಫರ್ಮ್. ದಿನೇ ದಿನೆ ಯಂಗ್ ಅಂಡ್ ಎನರ್ಜಿಟಿಕ್ ಆಗ್ತಿರೋ ಕಿಚ್ಚನ ಬರ್ತ್ ಡೇ ಸ್ಪೆಷಾಲಿಟಿ.

ಸ್ಯಾಂಡಲ್‌ವುಡ್‌ನ ಬಬ್ಬರ್ ಶೇರ್ ಪ್ಯಾನ್ ಇಂಡಿಯಾ ಸಿನಿಮಾಗಳ ಆಲ್ ಇಂಡಿಯಾ ಕಟೌಟ್ ನಿರ್ಮಾಪಕರ ಪಾಲಿನ ಚಿನ್ನದಂತಹ ರನ್ನ ಕನ್ನಡದ ಮಾಣಿಕ್ಯ ಸ್ಟೈಲು ಮ್ಯಾನರಿಸಂನ ಮಾಸ್ಟರ್‌ಪೀಸ್ ಗತ್ತು, ಗಮ್ಮತ್ತಿನ ಸರದಾರ.. ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್‌‌‌‌ ಬರ್ತ್ ಡೇಗೆ ದಿನಗಣನೆ ಶುರುವಾಗಿದೆ.  ಇದೇ ಸೆಪ್ಟೆಂಬರ್ 2ರಂದು 54ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿರೋ ಕಿಚ್ಚ, ಅಭಿಮಾನಿಗಳಿಗೆ ಸಾಲು ಸಾಲು ಸರ್‌‌ಪ್ರೈಸ್‌‌ಗಳನ್ನ ನೀಡಲು ಸಜ್ಜಾಗಿದ್ದಾರೆ.

ಮ್ಯಾಕ್ಸ್ ಚಿತ್ರ ಮ್ಯಾಕ್ಸಿಮಮ್ ಬ್ಲಾಕ್‌ಬಸ್ಟರ್ ಹಿಟ್ ಆದ ಬಳಿಕ ಕಿಚ್ಚ ಮತ್ತಷ್ಟು ಬ್ಯುಸಿ ಆದ್ರು. ಅದೇ ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಜೊತೆ ಮತ್ತೊಂದು ಸಿನಿಮಾ ಮಾಡ್ತಿರೋ ಸುದೀಪ್, ಕೆ-47 ಶೂಟಿಂಗ್ ಆಲ್ಮೋಸ್ಟ್ ಆಲ್ ಮಾಡಿ ಮುಗಿಸಿದ್ದಾರೆ. ತಮಿಳಿನ ಸತ್ಯಜ್ಯೋತಿ ಫಿಲಂಸ್ ಬ್ಯಾನರ್‌‌ನಡಿ ತಯಾರಾಗಿರೋ ಕೆ47 ಚಿತ್ರದ ಟೀಸರ್ ಝಲಕ್ ಜೊತೆ ಟೈಟಲ್ ಕೂಡ ಬರ್ತ್ ಡೇಗೆ ರಿವೀಲ್ ಆಗ್ತಿದೆ. ಮ್ಯಾಕ್ಸ್ ಕಾಂಬೋ ಈ ಬಾರಿ ಮತ್ತೊಂದು ಮಾಸ್ ವೆಂಚರ್ ಜೊತೆ ಬರೋದು ಪಕ್ಕಾ ಆಗಿದೆ.

ಇನ್ನು ವಿಕ್ರಾಂತ್ ರೋಣ ಚಿತ್ರದ ಬಳಿಕ ಮಗದೊಮ್ಮೆ ಒಂದಾಗಿರೋ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಸುದೀಪ್, ಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಶುಭಾರಂಭ ಮಾಡಿದ್ರು. ಅದ್ರ ಫಸ್ಟ್‌ಲುಕ್ ಕೂಡ ಕಿಚ್ಚನ ಜನುಮ ದಿನ ಪ್ರಯುಕ್ತ ಬಿಡುಗಡೆ ಆಗಲಿದೆಯಂತೆ. ಕಿಚ್ಚನ ಲುಕ್ಸ್, ಮೇಕಿಂಗ್ ವಿಡಿಯೋಗಳು ಅತೀವ ನಿರೀಕ್ಷೆ ಮೂಡಿಸಿದ್ದು, ಈ ಬಾರಿ ಅನೂಪ್-ಕಿಚ್ಚ ಪ್ರೇಕ್ಷಕರಿಗೆ ಮಸ್ತ್ ಮನರಂಜನೆಯ ಪ್ರಾಡಕ್ಟ್ ಜೊತೆ ಬರೋ ಸೂಚನೆ ನೀಡಿದ್ದಾರೆ.

ಇದಲ್ಲದೆ ಬಿಗ್‌ಬಾಸ್ ಸೀಸನ್-12 ಕಿಕ್‌ಸ್ಟಾರ್ಟ್‌ ಆಗ್ತಿದ್ದು, ಕಲರ್ಸ್‌ ಕನ್ನಡ ಈಗಾಗ್ಲೇ ಪ್ರೋಮೋದಿಂದ ಬಿಗ್‌ಬಾಸ್ ಸ್ಪೆಷಲ್ ಆಡಿಯೆನ್ಸ್ ನಾಡಿಮಿಡಿತ ಹೆಚ್ಚಿಸಿದೆ. ಅದರ ಶುಭಾರಂಭದ ಡೇಟ್ ಕಿಚ್ಚನ ಬರ್ತ್ ಡೇಗೆ ರಿವೀಲ್ ಆಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಬಿಗ್ ಮನೆ ತೆರೆದುಕೊಳ್ಳಲಿದ್ದು, ಕಿಚ್ಚನ ಜೊತೆ ವಾರದ ಕಥೆಗಳು ಶುರುವಾಗಲಿವೆ ಎನ್ನಲಾಗ್ತಿದೆ.

ಇನ್ನು ಬಾದ್‌ಷಾ ಹುಟ್ಟಿದ ದಿನದ ಪ್ರಯುಕ್ತ ವಿಷ್ಣುವರ್ಧನ ಸಿನಿಮಾನ ರೀ-ರಿಲೀಸ್ ಮಾಡೋಕೆ ಪ್ಲ್ಯಾನ್ಸ್ ನಡೀತಿವೆ. ಸದ್ಯದಲ್ಲೇ ಈ ಬಗ್ಗೆ ಒಂದು ಸುದ್ದಿಗೋಷ್ಠಿ ಕರೆದು, ಎಲ್ಲವನ್ನೂ ಅಲ್ಲೇ ಅಪ್ಡೇಟ್ ಮಾಡಲಿದೆ ಟೀಂ ಕಿಚ್ಚ. ಅಂದಹಾಗೆ ತಾಯಿ ಇಲ್ಲದೆ ಸುದೀಪ್ ಸೆಲೆಬ್ರೇಟ್ ಮಾಡಿಕೊಳ್ತಿರೋ ಮೊದಲ ಬರ್ತ್ ಡೇ ಇದು. 2ನೇ ತಾರೀಖು ಜನುಮ ದಿನ ಇದ್ರೂ, ಸೆಪ್ಟೆಂಬರ್ 1ರ ಮಿಡ್ ನೈಟ್ 12ಕ್ಕೆ ಫ್ಯಾನ್ಸ್‌ಗೆ ಸಿಗ್ತೀನಿ ಅಂದಿದ್ದಾರೆ ಕಿಚ್ಚ. ಈ ಹಿಂದೆ ನಂದಿ ಲಿಂಕ್ ಗ್ರೌಂಡ್ಸ್‌‌ನಲ್ಲಿ ವಿಶಿಷ್ಠವಾಗಿ ಸೆಲೆಬ್ರೇಟ್ ಮಾಡಿದಂತೆ ಈ ಬಾರಿಯೂ ಕೂಡ ಅಲ್ಲೇ ಫ್ಯಾನ್ಸ್ ಜೊತೆ ಕಿಚ್ಚನ ಬರ್ತ್ ಡೇಗೆ ಯೋಜನೆ ಆಗಿದೆ ಎನ್ನಲಾಗ್ತಿದೆ. ಆದ್ರೆ ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಸುದೀಪ್ ಏನೆಲ್ಲಾ ಸರ್‌‌ಪ್ರೈಸ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Exit mobile version