ಬಾದ್‌ಷಾ ಕಿಚ್ಚ ಸುದೀಪ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಸಿನಿಮಾ, ಕ್ರಿಕೆಟ್, ಗಾಯನ, ಬಿಗ್‌ಬಾಸ್, ಫ್ಯಾಮಿಲಿ, ಫ್ರೆಂಡ್ಸ್.. ಹೀಗೆ ಎಲ್ಲವನ್ನ ಬ್ಯಾಲೆನ್ಸ್ ಮಾಡುವ ಮಹಾನ್ ಮಾಂತ್ರಿಕ. ಸದ್ಯ ಮಾರ್ಕ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದು, ಹುಬ್ಬಳ್ಳಿಯಲ್ಲಿ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್ ನಡೆಯುತ್ತಿದೆ. ಅಲ್ಲದೆ, ಪತ್ನಿ ಪ್ರಿಯಾ, ಮಗಳು ಸಾನ್ವಿ ಬಗ್ಗೆ ಕಿಚ್ಚ ಶಾಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಅದೇನು ಅಂತೀರಾ..ಹೇಳ್ತೀವಿ ನೋಡಿ.
ಮಾರ್ಕ್ ದಿ ಡೇಟ್.. ಡಿ.20ಕ್ಕೆ ಹುಬ್ಬಳ್ಳಿಯಲ್ಲಿ ಕಿಚ್ಚೋತ್ಸವ
22 ವರ್ಷಗಳ ನಂತ್ರ ಗಂಡು ಮೆಟ್ಟಿದ ನಾಡಿಗೆ ಕಿಚ್ಚ ಸುದೀಪ್
ಮಾರ್ಕ್.. ಈ ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್ ಧೂಳೆಬ್ಬಿಸೋಕೆ ಬರ್ತಿರೋ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಕಿಚ್ಚ ಸುದೀಪ್ ಕರಿಯರ್‌ನ ಹೈ ವೋಲ್ಟೇಜ್ ಸಿನಿಮಾಗಳಲ್ಲಿ ಇದು ಕೂಡ ಒಂದಾಗಲಿದ್ದು, ಮ್ಯಾಕ್ಸ್‌ನ ಮೀರಿಸೋ ಮಾಸ್ ಮಸಾಲ ಧಮಾಕದೊಂದಿಗೆ ಇದೇ ಡಿಸೆಂಬರ್ 25ಕ್ಕೆ ವರ್ಲ್ಡ್ ವೈಡ್ ತೆರೆಗಪ್ಪಳಿಸುತ್ತಿದೆ.
ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಮಾರ್ಕ್ ರಿಲೀಸ್ ಆಗ್ತಿದ್ದು, ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರೇ ಮಾರ್ಕ್‌ಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸತ್ಯ ಜ್ಯೋತಿ ಫಿಲಂಸ್ ಜೊತೆ ಕಿಚ್ಚ ಕ್ರಿಯೇಷನ್ಸ್ ಕೈ ಜೋಡಿಸಿ ನಿರ್ಮಾಣವಾಗಿರೋ ಮಾರ್ಕ್‌ನ ಸ್ವತಃ ಪ್ರಿಯಾ ಸುದೀಪ್ ಅವರೇ ತಮ್ಮ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋದಿಂದ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡ್ತಿದ್ದಾರೆ. ಅದಕ್ಕೆ ಕೆಆರ್‌ಜಿ ಕಾರ್ತಿಕ್ ಗೌಡ-ಯೋಗಿ ಜಿ ರಾಜ್ ಕೂಡ ಸಾಥ್ ನೀಡ್ತಿದ್ದಾರೆ.
ಸ್ಟಾರ್ಸ್, ರಾಜಕಾರಣಿಗಳಿಂದ ಮಾರ್ಕ್ ಇವೆಂಟ್ ರಂಗು
ಇದು ಕಿಚ್ಚ ಕರಿಯರ್‌ನ ದಿ ಬೆಸ್ಟ್ ರೇಜ್ ಎಂಟರ್‌ಟೈನರ್
ಇತ್ತೀಚೆಗೆ ಮಾರ್ಕ್ ಟ್ರೈಲರ್ ಲಾಂಚ್ ಆಗಿತ್ತು. ಇದೀಗ ಚಿತ್ರತಂಡದಿಂದ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್‌ಗೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಯೆಸ್.. ಕಳೆದ ಬಾರಿ ಮ್ಯಾಕ್ಸ್ ಇವೆಂಟ್‌ನ ಚಿತ್ರದುರ್ಗದಲ್ಲಿ ನಡೆಸಿದ್ದ ಸುದೀಪ್ ಅವರು, ಈ ಬಾರಿ ಮಾರ್ಕ್‌ಗೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯನ್ನ ಮಾರ್ಕ್ ಮಾಡಿ ಇಟ್ಟಿದ್ದಾರೆ. ಇದೇ ಡಿಸೆಂಬರ್ 20ರಂದು ಮಾರ್ಕ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳ ಸಮಕ್ಷಮದಲ್ಲಿ ನಡೆಯಲಿದೆ. ಅದನ್ನ ಸ್ವತಃ ಸುದೀಪ್ ಅವರೇ ನಮ್ಮ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಗ್ಯಾರಂಟಿಯಲ್ಲಿ ಪುತ್ರಿ, ಪತ್ನಿ ಬಗ್ಗೆ ಸುದೀಪ್ ಅಚ್ಚರಿ ಮಾತು
ಸಾನ್ವಿ ಸುದೀಪ್ ಅದ್ಭುತ ಚಿತ್ರ ಸಾಹಿತಿ & ಗಾಯಕಿಯಂತೆ
ಚಿತ್ರರಂಗದ ಸಾಕಷ್ಟು ಮಂದಿ ಸ್ಟಾರ್‌ಗಳು ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದು, ರಾಜಕಾರಣಿಗಳ ದಂಡು ಕೂಡ ಇರಲಿದೆ. ಕಿಚ್ಚನ ಗ್ಯಾಂಗ್ ಜೊತೆ ಯಾರೆಲ್ಲಾ ಸರ್‌ಪ್ರೈಸ್ ಎಂಟ್ರಿ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಸಾನ್ವಿ ಸುದೀಪ್ ಮ್ಯಾಕ್ಸ್ ಸಿನಿಮಾಗೆ ಒಂದೊಳ್ಳೆ ಸಾಂಗ್ ಹಾಡಿದ್ರು. ಅಷ್ಟೇ ಅಲ್ಲ, ಅದಕ್ಕೆ ಲಿರಿಕ್ಸ್ ಕೂಡ ಆಕೆಯೇ ಬರೆದುಕೊಂಡು ಹಾಡಿದ್ದು ವಿಶೇಷವಾಗಿತ್ತು. ಇಂಗ್ಲಿಷ್ ಪದಗಳ ಮಿಶ್ರಿತ ಆ ಹಾಡು ಸಖತ್ ವೈಬ್ರೆಂಟ್ ಆಗಿತ್ತು. ಇದೀಗ ಮಾರ್ಕ್ ಚಿತ್ರದಲ್ಲೂ ಒಂದೊಳ್ಳೆ ಹಾಡು ಹಾಡಿದ್ದಾರಂತೆ.
ಸುಪ್ರಿಯಾನ್ವಿ ಬ್ಯಾನರ್ ಕಂಪ್ಲೀಟ್ ಪ್ರಿಯಾ ಸುದೀಪ್‌ರದ್ದು
ಅಲ್ಲಿ ನನ್ನ ದುಡ್ಡಿಲ್ಲ.. ಕಂಪ್ಲೀಟ್ ಕ್ರೆಡಿಟ್ ಅವರದ್ದೇ ಎಂದ ಕಿಚ್ಚ
ಇನ್ನು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನ ಹುಟ್ಟಿಹಾಕಿದ್ದ ಸುದೀಪ್ ಮನೆಯಲ್ಲಿ ಮತ್ತೊಂದು ಹೊಚ್ಚ ಹೊಸ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಕೂಡ ಹುಟ್ಟಿಕೊಂಡಿದೆ. ಅದೇ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ. ಅಂದಹಾಗೆ ಇದು ಕಂಪ್ಲೀಟ್ ಆಗಿ ಪ್ರಿಯಾ ಸುದೀಪ್ ಒಡೆತನದ್ದಂತೆ. ಇದರಲ್ಲಿ ಸುದೀಪ್ ಅವರ ಒಂದು ಪೈಸೆ ಇನ್ವೆಸ್ಟ್‌ಮೆಂಟ್ ಕೂಡ ಇಲ್ಲ ಅನ್ನೋದು ಅಚ್ಚರಿ. ಹೌದು.. ಒಳ್ಳೆಯ ಬ್ಯುಸಿನೆಸ್ ಐಡಿಯಾಸ್ ಇರೋ ಪ್ರಿಯಾ ಸುದೀಪ್ ಅವರು ಈಗಾಗ್ಲೇ ಹತ್ತು ಹಲವು ಕಡೆ ಹಣ ಹೂಡಿಕೆ ಮಾಡಿದ್ದು, ಅದ್ರಿಂದ ಬಂದ ಲಾಭದಲ್ಲಿ ಸುಪ್ರಿಯಾನ್ವಿ ಸಂಸ್ಥೆ ಕಟ್ಟಿ, ಮನೆ ಮಗ ಸಂಚಿತ್‌ನ ಲಾಂಚ್ ಮಾಡ್ತಿದ್ದಾರೆ. ಮ್ಯಾಂಗೋ ಪಚ್ಚ ಅವ್ರ ಚೊಚ್ಚಲ ಸಿನಿಮಾ. ಅಷ್ಟೇ ಅಲ್ಲ, ಮಾರ್ಕ್ ಚಿತ್ರದ ವಿತರಣಾ ಜವಾಬ್ದಾರಿ ಕೂಡ ಪ್ರಿಯಾ ಅವರೇ ಹೊರುತ್ತಿರೋದು ವಿಶೇಷ.
ಒಟ್ಟಾರೆ ಮಾರ್ಕ್ ಹತ್ತು, ಹಲವು ವಿಶೇಷತೆಗಳಿಂದ ಕೂಡಿರೋ ಮಾಸ್ ಎಂಟರ್‌ಟೈನರ್. ನೋಡುಗರಿಗೆ ವಿಶಿಷ್ಟ ಅನುಭವ ನೀಡಲಿರೋ ಮಾರ್ಕ್, ಈ ವರ್ಷ ಕೂಡ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮುವ ಸೂಚನೆ ನೀಡಿದೆ.
