ಕಿಚ್ಚನ ಸಿನಿಯಾನಕ್ಕೆ 30 ವರ್ಷ.. ಕನ್ನಡಿಗರಿಗೆ ಬಾದ್‌ಷಾ ಸ್ಪೆಷಲ್ ಲೆಟರ್

Untitled design 2026 01 31T174527.019

ಬಾದ್‌ಷಾ ಕಿಚ್ಚ ಸುದೀಪ್ ಕರಿಯರ್‌ಗೆ 30 ವರ್ಷ.. ಸೋಶಿಯಲ್ ಮೀಡಿಯಾದಲ್ಲಿ ಹರುಷ ಹಂಚಿಕೊಂಡ್ರು ಆಲ್‌ ಇಂಡಿಯಾ ಕಟೌಟ್. ಚಿತ್ರಪ್ರೇಮಿಗಳು, ಕನ್ನಡಿಗರು ಹಾಗೂ ಫ್ಯಾನ್ಸ್‌ಗೆ ಭಾವನಾತ್ಮಕ ಪತ್ರ ಬರೆದಿರೋ ಆ್ಯಂಗ್ರಿ ಯಂಗ್‌ಮ್ಯಾನ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

ಬಾದ್‌ಷಾ ಕಿಚ್ಚ ಸುದೀಪ್‌ಗೆ ಇದೊಂಥರಾ ಎಮೋಷನಲ್ ಮೊಮೆಂಟ್. ಯಾಕಂದ್ರೆ ಕಿಚ್ಚನ ಸಿನಿ ಜರ್ನಿ ಇಂದು ನಿನ್ನೆಯದ್ದಲ್ಲ. ಬರೋಬ್ಬರಿ 30 ವರ್ಷಗಳದ್ದು. ಯೆಸ್.. ಇಂಡಸ್ಟ್ರಿಯಲ್ಲಿ 30 ವರ್ಷ ಪೂರೈಸಿರೋ ಸುದೀಪ್, ತಮ್ಮ‌‌ ಸಿನಿ ಜರ್ನಿ ಕುರಿತು ವಿಶೇಷವಾದ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಮೂರು ದಶಕಗಳ ನಂತರ ಈ ಸುಂದರ ಸಿನಿರಂಗದಲ್ಲಿ ನಿಂತಿರುವಾಗ ನನ್ನ ಹೃದಯ ತುಂಬಿದೆ. ಕನಸುಗಳ ಜೊತೆ ಆರಂಭಿಸಿದ ನನ್ನ ಪ್ರಯಾಣ ಇಷ್ಟು ದೊಡ್ಡದಾಗುತ್ತದೆ ಅಂತ ಎಂದೂ ಊಹಿಸಿರಲಿಲ್ಲ. ಇದಕ್ಕೆ ಕಾರಣ ನೀವು. ಅಭಿಮಾನಿಗಳೇ ನೀವು ನನ್ನ ಶಕ್ತಿ. ನಿಮ್ಮ ಪ್ರೀತಿಯೇ ನನಗೆ ಮುಂದೆ ಸಾಗುವ ಧೈರ್ಯ ಕೊಡುತ್ತದೆ ಎಂದಿದ್ದಾರೆ.

ಕಿಚ್ಚನ ಸಿನಿಯಾನಕ್ಕೆ 30 ವರ್ಷ.. ಸುದೀಪ್ ಫುಲ್ ಹರುಷ

ಫ್ಯಾನ್ಸ್, ಇಂಡಸ್ಟ್ರಿ, ಕನ್ನಡಿಗರಿಗೆ ಬಾದ್‌ಷಾ ಸ್ಪೆಷಲ್ ಲೆಟರ್

ನಿರ್ದೇಶಕರು ಹಾಗೂ ಬರಹಗಾರರು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿರ್ಮಾಪಕರು, ನಿಮ್ಮ ಧೈರ್ಯ ಮತ್ತು ವಿಶ್ವಾಸದಿಂದ ನನ್ನ ಕನಸುಗಳು ನಿಜವಾದವು. ಸಹನಟರು ಮತ್ತು ತಂತ್ರಜ್ಞರು.. ಸಿನಿಮಾ ಅನ್ನೋದು ಒಬ್ಬರ ಕೆಲಸ ಅಲ್ಲ. ತಂಡದ ಕೆಲಸ. ನಿಮ್ಮ ಪರಿಶ್ರಮ ಅಮೂಲ್ಯ. ಮಾಧ್ಯಮಗಳಾದ ನೀವು ನನ್ನನ್ನು ಬೆಂಬಲಿಸಿ, ಪ್ರಶ್ನಿಸಿ, ಬೆಳೆಸಿದ್ದೀರಿ ಧನ್ಯವಾದಗಳು. ಕನ್ನಡ ಚಿತ್ರರಂಗಕ್ಕೆ ನೀವು ನನಗೆ ಗುರುತು ಮತ್ತು ಗೌರವ ಕೊಟ್ಟಿದ್ದೀರಿ.

ಕನ್ನಡ ಸಿನೆಮಾ ನನ್ನ ಹೆಮ್ಮೆ.ಕುಟುಂಬ ಮತ್ತು ಸ್ನೇಹಿತರಿಗೆ ಯಾವಾಗಲೂ ನನ್ನ ಜೊತೆ ನಿಂತಿದ್ದಕ್ಕೆ ಧನ್ಯವಾದಗಳು. ಈ 30 ವರ್ಷಗಳು ನನಗೆ ವಿನಯವನ್ನು ಕಲಿಸಿವೆ. ನಾನು ಇನ್ನಷ್ಟು ಶ್ರಮಿಸಿ, ಈ ಕಲೆಗೆ ಗೌರವ ಕೊಡುತ್ತಾ ಮುಂದುವರೆಯುತ್ತೇನೆ ಅಂತ ಸುದೀರ್ಘ ಪತ್ರ ಬರೆದು ಹರುಷ ವ್ಯಕ್ತಪಡಿಸಿದ್ದಾರೆ ಕಿಚ್ಚ. ಇದು ಬರೀ ಜರ್ನಿಯಲ್ಲ. ಅದೆಷ್ಟೋ ಮಂದಿಗೆ ಸ್ಫೂರ್ತಿಯ ಸೆಲೆ. ಟ್ಯಾಲೆಂಟ್ ಇದ್ರೂ ಆರಂಭದಲ್ಲಿ ನೆಲೆ ನಿಲ್ಲೋಕೆ ಕಿಚ್ಚನಿಗೆ ಆದ ಸಮಸ್ಯೆ ಎಂಥದ್ದು ಅನ್ನೋದನ್ನ ವಿಶೇಷವಾಗಿ ಹೇಳಬೇಕಿಲ್ಲ. ಆದ್ರೀಗ ಆತ ಆಲ್ ಇಂಡಿಯಾ ಕಟೌಟ್. ಮತ್ತಷ್ಟು ಮಗದಷ್ಟು ಚಿತ್ರರಂಗದ ಸೇವೆ ಅವರಿಂದ ನಿರೀಕ್ಷೆಯಿದೆ. ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಬರಹಗಾರನಾಗಿ ನಿಮ್ಮ ಕೊಡುಗೆ ಬಹಳಷ್ಟಿದೆ. ಶುಭವಾಗಲಿ ಸುದೀಪ್ ಸರ್.

 

Exit mobile version