ಟಾಕ್ಸಿಕ್ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಕಿಯಾರಾ

ನಾದಿಯಾ ಪಾತ್ರದಲ್ಲಿ ಮಿಂಚಲಿದ್ದಾರೆ ಬಿಟೌನ್ ಕಿಯಾರಾ

BeFunky collage (3)

ಬಾಲಿವುಡ್ ನಟಿ ಕಿಯಾರ ಅಡ್ವಾಣಿ  ತಾಯಿ ಆದ ನಂತರ ನಟಿಸುತ್ತಿರುವ ಮೊದಲ ಸಿನಿಮಾ ಟಾಕ್ಸಿಕ್. ಯಶ್ ಜೊತೆ ಸ್ಕ್ರೀನ್ ಮಾಡಿ ಸ್ಯಾಂಡಲ್‌ವುಡ್‌ಗೆ ಕಿಯಾರ ಪದಾರ್ಪಣೆ ಮಾಡಿದ್ದಾರೆ. ಸದ್ಯ ಟಾಕ್ಸಿಕ್ ಚಿತ್ರದ ಬಗ್ಗೆ ಕಿಯಾರ ಅಡ್ವಾಣಿ ಮೊದಲ ಬಾರಿಗೆ ತಮ್ಮ ಮನದಾಳದ ಮಾತು ಹೇಳಿ ಟಾಕ್ಸಿಕ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಇಡೀ ದೇಶವೇ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ ಮೇಲೆ ಕಣ್ಣಿಟ್ಟಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್ ನಟಿ ಕಿಯಾರಾ ಅಭಿನಯಿಸುತ್ತಿರೋದು ಪಕ್ಕಾ ಎಂದು ಯಶ್ ಪೋಸ್ಟ್ ಮೂಲಕ ಅಧಿಕೃತ ಮಾಡಿದ್ರು.

ಟಾಕ್ಸಿಕ್ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಕಿಯಾರಾ

ನಾದಿಯಾ ಪಾತ್ರದಲ್ಲಿ ಮಿಂಚಲಿದ್ದಾರೆ ಬಿಟೌನ್ ಕಿಯಾರಾ

ಸದ್ಯ ಕಿಯಾರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಸಿನಿಮಾದಲ್ಲಿ ಅವರು ‘ನಾದಿಯಾ’ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಬಿಡುಗಡೆಯಾದ ಪೋಸ್ಟರ್‌ನಲ್ಲಿ ಕಿಯಾರಾ ಕಪ್ಪು ಬಣ್ಣದ ಗೌನ್ ಧರಿಸಿ, ಕಣ್ಣೀರು ಹಾಕುತ್ತಿದ್ದಾರೆ.ಈ ಲುಕ್ ನೋಡಿದ ಅಭಿಮಾನಿಗಳು ಹಾರ್ಲೆ ಕ್ವಿನ್ ಅಥವಾ ಲೇಡಿ ಜೋಕರ್‌ನಂತೆ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಒಂದು ವಿಭಿನ್ನ ಫೇರಿ ಟೇಲ್ ಅನ್ನೋದು ಗೊತ್ತಾಗಿದೆ.

ಈಗಾಗಲೇ ಟಾಕ್ಸಿಕ್ ಸೆಟ್ ನಲ್ಲಿ ಯಶ್ ಹಾಗು ಕಿಯಾರ ಜೊತೆಗಿದ್ದ ಫೋಟೋ ವೈರಲ್ ಆಗಿತ್ತು. ಈಗ ಅಧಿಕೃತವಾಗಿ ಫಸ್ಟ್ ಲುಕ್ ರಿಲೀಸ್ ಆಗಿದ್ದು ನಟಿ ಕಿಯಾರ ತಮ್ಮ ಪಾತ್ರದ ಬಗ್ಗೆ ಬರೆದುಕೊಂಡಿದ್ದಾರೆ. ಟಾಕ್ಸಿಕ್‌ ಚಿತ್ರದಲ್ಲಿ ನನ್ನ ಪಾತ್ರ ನನ್ನಿಂದ ಹೆಚ್ಚಿನದನ್ನು ಬಯಸಿತ್ತು. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಪರಿವರ್ತನೆಯ ಅನುಭವ ಸಿಕ್ಕಿದೆ. ನನ್ನ ಕರಿಯರ್ ನಲ್ಲೆ ಇದುವರೆಗಿನ ಕಷ್ಟಕರ ಪಾತ್ರ ಇದು..ತಿಂಗಳುಗಳ ಕಠಿಣ ಪರಿಶ್ರಮದ ಅಗತ್ಯವಿತ್ತು ಎಂದಿದ್ದಾರೆ. ಫಸ್ಟ್‌ಲುಕ್‌ಗೆ ಅಪಾರ ಪ್ರತಿಕ್ರಿಯೆ, ಪ್ರೀತಿ ವ್ಯಕ್ತವಾಗಿದೆ. ಅದು ಪದಗಳಿಗೆ ನಿಲುಕದ್ದು ಯಶ್ ಹಾಗು ಗೀತು ಮೋಹನ್ ದಾಸ್ ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ತನ್ನ ಲುಕ್ ಬಗ್ಗೆ  ಕಿಯಾರಾ ಭಾವುಕ ಪೋಸ್ಟ್..!

ನನ್ನ ಕರಿಯರ್‌‌ನಲ್ಲಿ ಅಭಿನಯಿಸಿರುವ ಅತ್ಯಂತ ಕಠಿಣ ಪಾತ್ರ

ಬರಿ ಯಶ್ ಮತ್ತು ಕಿಯಾರಾ ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರಂತಹ ಪ್ರಮುಖ ನಟಿಯರು ಈ ಸಿನಿಮಾದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

ಈ ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್‌ ಆಗಿ  2026ರ ಮಾರ್ಚ್ 19ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.  ಕಿಯಾರಾ ಅಡ್ವಾಣಿ ಅವರು ತಾಯಿ ಆದ ನಂತರ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸ್ಯಾಂಡಲ್‌ವುಡ್‌ಗೆ ಇವರ ಪದಾರ್ಪಣೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version