ಕೆಡಿ ಅಲಿಯಾಸ್ ಕಾಳಿದಾಸ.. ಸದ್ಯ ಭಾರತೀಯ ಚಿತ್ರರಂಗದಲ್ಲಿ ಸೌಂಡ್ ಮಾಡ್ತಿರೋ ಹೆಸರು. ಸಿಂಗಲ್ ಟೀಸರ್ ಇಟ್ಕೊಂಡು ಎರಡು ದಿನದಲ್ಲಿ ನಾಲ್ಕು ರಾಜ್ಯಗಳನ್ನ ಸುತ್ತಿರೋ ಕೆಡಿ ಟೀಂ, ದೊಡ್ಡ ಮಟ್ಟದಲ್ಲಿ ತನ್ನ ಸಾಹಸ, ಶೌರ್ಯಗಳ ಪ್ರದರ್ಶನವನ್ನು ಮಾಡ್ತಿದೆ. ಧ್ರುವ ಸರ್ಜಾ ಹೆಸರು ದೇಶದ ಮೂಲೆ ಮೂಲೆಯಲ್ಲಿ ಮಾರ್ದನಿಸುತ್ತಿದೆ. ಅದೂ ಸೂಪರ್ ಸ್ಟಾರ್‌ಗಳ ಹೆಸರುಗಳ ಜೊತೆ ಅನ್ನೋದು ಇಂಟರೆಸ್ಟಿಂಗ್.
- 2 ದಿನ.. 4 ರಾಜ್ಯ.. ಕಾಳಿದಾಸನ ಸಾಹಸ ಶೌರ್ಯ ಪರ್ವ
- ಕಾಳಿದಾಸನ ಖದರ್ ನೋಡಿ ಬೆಚ್ಚಿ ಬಿದ್ದ ಪರಭಾಷಿಗರು..!
- ನಿನ್ನೆ ಮುಂಬೈ- ಹೈದ್ರಾಬಾದ್.. ಇಂದು ಚೆನ್ನೈ- ಕೊಚ್ಚಿ ಎಂಟ್ರಿ
- ಮಚ್ಚೇಶ್ವರರ ಮ್ಯಾಜಿಕ್.. ಶೋಮ್ಯಾನ್ ಪ್ರೇಮ್ಸ್ ಲಾಜಿಕ್..!
ಧ್ರುವ ಸರ್ಜಾ ಕರಿಯರ್‌ನಲ್ಲಿ ಇಲ್ಲಿಯವರೆಗೂ ಒಂದು ಲೆಕ್ಕ, ಇಲ್ಲಿಂದ ಮುಂದಕ್ಕೆ ಹೊಸ ಲೆಕ್ಕ ಅನ್ನುವಂತಾಗಿದೆ. ಹೌದು, ಯಶ್ ಕೆಜಿಎಫ್ ಸಿನಿಮಾದಂತೆ ಧ್ರುವ ಸರ್ಜಾಗೂ ಈ ಕೆಡಿ ಸಿನಿಮಾ ಮಹತ್ವದ ಹಾಗೂ ಮೇಜರ್ ಟರ್ನಿಂಗ್ ಪಾಯಿಂಟ್ ಆಗುವ ಮುನ್ಸೂಚನೆ ನೀಡಿದೆ. ಅದಕ್ಕೆ ಕಾರಣ ಕೆಡಿ ಸಿನಿಮಾದ ಲೇಟೆಸ್ಟ್ ಟೀಸರ್ ಝಲಕ್.
ಹೌದು, ಜೋಗಿ ಪ್ರೇಮ್ ನಿರ್ದೇಶನದ ಹಾಗು ಕೆವಿಎನ್ ಪ್ರೊಡಕ್ಷನ್ಸ್‌ನ ಕೆ ವೆಂಕಟ್ ನಾರಾಯಣ್ ನಿರ್ಮಾಣದ ಈ ಮಹೋನ್ನತ ಸಿನಿಮಾ, ರೆಟ್ರೋ ಕಾಲಘಟ್ಟದ ಅಂಡರ್‌ವರ್ಲ್ಡ್ ಕಥಾನಕ ಹೊಂದಿದೆ. ಸಿನಿಮಾ ಸೆಟ್ಟೇರಿದ ದಿನದಿಂದ ನೋಡುಗರಲ್ಲಿ ಅತೀವ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಈ ಚಿತ್ರ, ಇದೀಗ ಟೀಸರ್‌ನಿಂದ ವಿಶ್ಯುವಲ್ ಟ್ರೀಟ್ ನೀಡಿದೆ.
ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಕಾಂಬೋನ ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಮಾಸ್ ಖದರ್ ಕೂಡ ನೋಡಬಹುದು. ಅಷ್ಟೇ ಅಲ್ಲ ಬಾಲಿವುಡ್‌ನಲ್ಲಿ ಸೆಟಲ್ ಆಗಿರೋ ಕನ್ನಡತಿ ಶಿಲ್ಪಾ ಶೆಟ್ಟಿ, ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ನಾನು ಕನ್ನಡತಿ ಅಂತ ಚಿತ್ರರಂಗದ ಜೊತೆ ಹೆಮ್ಮೆಯಿಂದ ಗುರ್ತಿಸಿಕೊಳ್ತಿರೋದು ಇಂಟರೆಸ್ಟಿಂಗ್.
ಇವರಲ್ಲದೆ, ಕೆಡಿ ಸಿನಿಮಾದ ತಾರಾಗಣದಲ್ಲಿ ನಾಯಕನಟಿ ರೀಷ್ಮಾ ನಾಣಯ್ಯ ಹಾಗೂ ಐಟಂ ಡ್ಯಾನ್ಸರ್ ಆಗಿ ನೋರಾ ಫತೇಹಿ ಕೂಡ ಗ್ಲಾಮರ್ ಚೆಲ್ಲಿದ್ದಾರೆ. ಒಂದ್ಕಡೆ ಹೀರೋ- ವಿಲನ್‌ಗಳು ರಕ್ತ ಚೆಲ್ಲುತ್ತಿದ್ರೆ, ಈ ನಟಿಮಣಿಯರು ಬೆಡು, ಬಿನ್ನಾಣಗಳಿಂದ ಮೊನೋಟನಸ್ ಬ್ರೇಕ್ ಮಾಡಿದ್ದಾರೆ.
ಅಂದಹಾಗೆ ಕೆಡಿ ಚಿತ್ರತಂಡ ಎರಡು ದಿನದಲ್ಲಿ ನಾಲ್ಕು ರಾಜ್ಯ ಸುತ್ತಿ, ದೇಶದ ಪ್ರಮುಖ ಸಿಟಿಗಳಾದ ಮುಂಬೈ, ಹೈದ್ರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಟೀಸರ್ ಲಾಂಚ್ ಇವೆಂಟ್‌ಗಳನ್ನ ಗ್ರ್ಯಾಂಡ್ ಆಗಿ ನಡೆಸಿದೆ. ಎಲ್ಲೆಡೆ ಕೆಡಿ ಟೀಂಗೆ ಅದ್ದೂರಿ ಸ್ವಾಗತದ ಜೊತೆಗೆ ಹೈ ವೋಲ್ಟೇಜ್ ಟೀಸರ್‌ಗೆ ಶಿಳ್ಳೆ ಚಪ್ಪಾಳೆಗಳು ದೊರೆತಿವೆ.
ಇನ್ನು ಕೆಡಿ ಸಿನಿಮಾಗೆ ಪಂಚ್ ಡೈಲಾಗ್ಸ್ ಬರೆದಂತಹ ಕ್ರಾಂತಿ ಕುಮಾರ್‌ನ ಟೀಸರ್ ನೋಡಿದವರೆಲ್ಲಾ ನೆನೆಸಿಕೊಳ್ಳುವಂತಿದೆ. ಕಾರಣ ಸಂಜಯ್ ದತ್ ಪೊಲೀಸ್ ಸ್ಟೇಷನ್ ಡೈಲಾಗ್. ಅಲ್ಲದೆ, ಅರ್ಜುನ್ ಜನ್ಯ ಮ್ಯೂಸಿಕ್, ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಮೆಚ್ಚುವಂತಿದೆ. ಒಟ್ಟಾರೆ ಕೆಡಿ ಸಿನಿಮಾ ಜೋಗಿ ಪ್ರೇಮ್ ಕರಿಯರ್‌ನಲ್ಲಿ ದೊಡ್ಡದೊಂದು ಚರಿತ್ರೆ ಸೃಷ್ಠಿಸೋ ಲಕ್ಷಣ ತೋರಿದೆ.
