KD.. ಸ್ಯಾಂಡಲ್ವುಡ್ನ ಶೋ ಮ್ಯಾನ್ ಜೋಗಿ ಪ್ರೇಮ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ. ಸಿನಿಮಾ ಶೂಟಿಂಗ್ ಮುಗ್ದಿದೆ. ಟೀಸರ್ ಕೂಡ ರಿಲೀಸ್ ಆಗಿದೆ.. ಬಟ್ ಸಿನಿಮಾ ರಿಲೀಸ್ ಯಾವಾಗ ಅನ್ನೋದ್ರ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಪ್ಡೇಟ್ ನೀಡಿಲ್ಲ. ಅದರಂತೆ ಈ ವರ್ಷ ಕೆಡಿ ಸಿನಿಮಾ ರಿಲೀಸ್ ಆಗೋದು ಡೌಟು ಅಂತಲೂ ಮಾತುಗಳು ಕೇಳಿ ಬರ್ತಾಯಿದೆ. ಅಷ್ಟಕ್ಕೂ ಕೆಡಿ ಟೀಂನ ಈ ಬ್ಯಾಕ್ ಸ್ಟೆಪ್ಗೆ ಕಾರಣವೇನು ಅನ್ನೋದು ನೀವು ತಿಳಿಯಲೇಬೇಕು.
- ಆಕ್ಷನ್ ಪ್ರಿನ್ಸ್ ಧ್ರುವ ಕೆಡಿ ಅಪ್ಡೇಟ್ ಯಾಕಿಲ್ಲ..?
- ಬಹುನಿರೀಕ್ಷಿತ ‘KD’ ಚಿತ್ರ ರಿಲೀಸ್ ಯಾವಾಗ..?
- KD ರಿಲೀಸ್ ಡೇಟ್ ಬಗ್ಗೆ ಅಪ್ಡೇಟ್ ಕೊಡಿ.. ಫ್ಯಾನ್ಸ್ ಮನವಿ..!
ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬೊದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಕಡಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಸಿನಿಮಾ ಶುರುವಾಗಿ ಸುಮಾರು 3 ವರ್ಷಗಳು ಆಗಿವೆ.. ಈಗಾಗಾಲೇ ಚಿತ್ರದ ಟೀಸರ್ ಹಾಡುಗಳು ರಿಲೀಸ್ ಆಗಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಧ್ರುವಾ ಸಜಾ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಬಾಲಿವುಡ್ ನಟ ಸಂಜಯ್ ದತ್ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಆದ್ರೆ ಸಿನಿಮಾ ರಿಲೀಸ್ ಯಾವಾಗ ಅನ್ನೋ ಬಗ್ಗೆ ಮಾತ್ರ ಚಿತ್ರತಂಡ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ. ಇನ್ನು ಈ ವರ್ಷ ಕೆಡಿ ಸಿನಿಮಾ ರಿಲೀಸ್ ಆಗೋದು ಡೌಟು ಅಂತಲೂ ಹೇಳಲಾಗಿದೆ. ಈಗಾಗಲೇ 2 ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಇತ್ತೀಚೆಗೆ ಟೀಸರ್ ಕೂಡ ಬಂದಿತ್ತು. ಆದರೆ ಸಿನಿಮಾ ರಿಲೀಸ್ ಡೇಟ್ ಮಾತ್ರ ಪಕ್ಕಾ ಆಗ್ಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲೇ ‘KD’ ಸಿನಿಮಾ ತೆರೆಗೆ ತರ್ತಿವಿ ಎಂದು ಚಿತ್ರತಂಡ ಘೋಷಿಸಿತ್ತು. ಇತ್ತೀಚೆಗೆ ಪ್ಯಾನ್ ಇಂಡಿಯಾ ಟೂರ್ ಮಾಡಿ ಟೀಸರ್ ರಿಲೀಸ್ ಮಾಡಿತ್ತು ಚಿತ್ರತಂಡ. ಆದ್ರೆ ಇನ್ನು ರಿಲೀಸ್ ಡೇಟ್ ಮಾತ್ರ ಫೈನಲ್ ಆಗಿಲ್ಲ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘KD’ ಸಿನಿಮಾ ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗ್ತಿದೆ. ಸಂಜಯ್ ದತ್, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. 70-80ರ ದಶಕದ ಕಥೆಯನ್ನು ಚಿತ್ರದಲ್ಲಿ ಪ್ರೇಮ್ ಕಟ್ಟಿಕೊಡುತ್ತಿದ್ದಾರೆ. ಬಾಲಿವುಡ್ ನಟಿ ನೋರಾ ಫತೇಹಿ ಕೂಡ ‘KD’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 70ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಪ್ರೇಮ್ ಚಿತ್ರದ ಕತೆ ಹೆಣೆದಿದ್ದಾರೆ. ಆ ಘಟನೆ ಏನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ರೆಟ್ರೋ ಸ್ಟೈಲ್‌ನಲ್ಲಿ ಇಡೀ ಸಿನಿಮಾ ಮೂಡಿ ಬಂದಿದೆ. ಅದಕ್ಕಾಗಿ ಭಾರೀ ಸೆಟ್‌ಗಳನ್ನು ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಮೈಸೂರು, ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.
- ಈ ವರ್ಷ ರಿಲೀಸ್ ಆಗಲ್ವಾ ಮಲ್ಟಿಸ್ಟಾರರ್ KD ಸಿನಿಮಾ..?
- ಡಿಸೆಂಬರ್‌ನಲ್ಲಿ ಬಿಗ್ ಸ್ಟಾರ್ಸ್ ಸಿನಿಮಾಗಳು ರಿಲೀಸ್..!
ವಿದೇಶದಲ್ಲಿ ‘KD’ ಚಿತ್ರದ ರೀ-ರೆಕಾರ್ಡಿಂಗ್, ಸಾಂಗ್ ರೆಕಾರ್ಡಿಂಗ್ ಕೆಲಸಗಳು ನಡೀತಿದೆ. ಯಾವುದಕ್ಕೂ ರಾಜಿಯಾಗದೇ ಕೆವಿಎನ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದೆಲ್ಲದರ ನಡುವೆ ಸಿನಿಮಾದ ಕೆಲಸಗಳು ಇನ್ನು ಮುಗಿದಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡ್ತಿಲ್ಲ ಎನ್ನಲಾಗ್ತಿದೆ. ಇನ್ನು ಅಕ್ಟೊಬರ್ನಲ್ಲಿ ಕಾಂತಾರ 1 ರಿಲೀಸ್ ಆಗುತ್ತಿದೆ. ಹೀಗಾಗಿ ಆ ತಿಂಗಳು ಕೆಡಿ ರಿಲೀಸ್ ಆಗೋದು ಡೌಟು ಅಂತಲೂ ಹೇಳಲಾಗಿದೆ.
ಇನ್ನು ಡಿಸೆಂಬರ್‌ನಲ್ಲಿ ಸ್ಯಾಂಡಲ್ವುಡ್ನ ಬಿಗ್ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿದೆ ದರ್ಶನ್ ಅಭಿನಯ ದ ಡೆವಿಲ್ ಸಿನಿಮಾ ಡಿಸೆಂಬರ್ 12ಕ್ಕೆ ರಿಲೀಸ್ ಆಗುತ್ತಿದೆ. ಹಾಗೇ ಶಿವಣ್ಣ ಉಪ್ಪಿ ಅಭಿನಯದ 45 ಸಿನಿಮಾದ ಕೂಡ ಕ್ರಿಸ್ಮಸ್ ಹಬ್ಬದ ದಿನ ಅಂದ್ರೆ ಡಿ. 25ಕ್ಕೆ ರಿಲೀಸ್ ಆಗುತ್ತಿದೆ. ಅಲ್ಲದೇ ಸುದೀಪ್ ನಟನೆಯ ಕೆ-47 ಕೂಡ ಡಿಸೆಂಬರ್‌ನಲ್ಲೇ ರಿಲೀಸ್ ಆಗಲಿದೆ. ಹೀಗಾಗಿ ಕೆಡಿ ಡೆಸೆಂಬರ್ನಲ್ಲೂ ರಿಲೀಸ್ ಆಗೋದು ಡೌಟು ಎಂಬ ಟಾಕ್ ಗಾಂಧಿನಗರದಲ್ಲಿ ಕೇಳಿಬಂದಿದೆ. ಈ ಬಗ್ಗೆ ಚಿತ್ರತಂಡವೇ ಕ್ಲಾರಿಟಿ ಕೊಡ್ಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.