ಸ್ವಿಟ್ಜರ್ಲೆಂಡ್‌‌ನಲ್ಲಿ KD ಗ್ಯಾಂಗ್.. ರಿಲೀಸ್ ಯಾವಾಗ..?!

ಒಂದು ವಾರ ಒಂದು ಸಾಂಗ್.. ಕಣ್ಣು ಕೋರೈಸೋ ತಾಣ

Befunky collage 2025 05 26t142225.049

ಬೇಸರದಲ್ಲಿದ್ದ ಧ್ರುವ ಸರ್ಜಾ ಫ್ಯಾನ್ಸ್‌ಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಯೆಸ್.. ಶೂಟಿಂಗ್ ಮುಗಿಸಿ ಬಹಳ ದಿನಗಳಾದ್ರೂ, ಒಂದೇ ಒಂದು ಹಾಡು ಮಾತ್ರ ಪೆಂಡಿಂಗ್ ಇತ್ತು. ಅದಕ್ಕೀಗ ಮುಹೂರ್ತ ಕೂಡಿಬಂದಿದೆ. ಇಡೀ ಕೆಡಿ ಟೀಂ ಸ್ವಿಟ್ಜರ್ಲೆಂಡ್‌‌‌ಗೆ ಹಾರಿದೆ. ಎಷ್ಟು ದಿನ ಬೀಡುಬಿಡಲಿದೆ..? ರಿಲೀಸ್ ಯಾವಾಗ..? ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.

KD- ದಿ ಡೆವಿಲ್.. ಈ ವರ್ಷದ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ಮೂವಿ. ನಟ ಧ್ರುವ ಸರ್ಜಾ ಕರಿಯರ್‌ನ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಎಂಟರ್‌ಟೈನರ್. ರೆಟ್ರೋ ಆ್ಯಕ್ಷನ್ ಡ್ರಾಮಾ ಕೆಡಿ, ಟೈಟಲ್‌ ಅನೌನ್ಸ್‌ಮೆಂಟ್‌‌ ಆದ ದಿನದಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್.

ಸಿನಿಮಾನ ಪಬ್ಲಿಸಿಟಿ ಹಾಗೂ ಮಾರ್ಕೆಟಿಂಗ್ ಮಾಡೋದ್ರಲ್ಲಿ ಪ್ರೇಮ್ ಒಂಥನಾ ಮಾನ್‌ಸ್ಟರ್. ಇವ್ರನ್ನ ಮೀರಿಸೋ ಮತ್ತೊಬ್ಬ ಡೈರೆಕ್ಟರ್ ಇಲ್ಲ. ಅದರಲ್ಲೂ ಇದೊಂದು ಭಿನ್ನ ಅಲೆಯ ಸಿನಿಮಾ ಆಗಿದ್ದು, ಧ್ರುವ ಸರ್ಜಾ ಜೊತೆ ಸಂಜಯ್ ದತ್‌, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಮಾರ್ಟಿನ್ ಸಿನಿಮಾದ ಶೂಟಿಂಗ್ ಜೊತೆ ಜೊತೆಗೇ ಕೆಡಿ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿತ್ತು. ಆದ್ರೀಗ ಮಾರ್ಟಿನ್ ರಿಲೀಸ್ ಆಗಿ ಇಷ್ಟು ತಿಂಗಳಾದ್ರೂ ಕೆಡಿ ರಿಲೀಸ್ ಅಪ್ಡೇಟ್ಸ್ ಇಲ್ಲ. ಹಾಗಂತ ಕೆಡಿ ಚಿತ್ರದ ಶೂಟಿಂಗ್ ಏನೂ ಜಾಸ್ತಿ ಪೆಂಡಿಂಗ್ ಉಳಿದಿಲ್ಲ. ಒಂದೇ ಒಂದು ಹಾಡು ಹಾಗೂ ಒಬ್ಬ ಸ್ಟಾರ್ ನಟನ ಗೆಸ್ಟ್ ಅಪಿಯರೆನ್ಸ್ ಸೀಕ್ವೆನ್ಸ್ ಮುಗಿದ್ರೆ ಕೆಡಿ ಕುಂಬಳಕಾಯಿ ಕನ್ಫರ್ಮ್‌.

ಸದ್ಯ ಕೆಡಿ- ದಿ ಡೆವಿಲ್ ಟೀಂ ಸ್ವಿಟ್ಜರ್ಲೆಂಡ್‌‌ನಲ್ಲಿ ಬೀಡು ಬಿಟ್ಟಿದೆ. ಮೇ 21ಕ್ಕೆ ಧ್ರುವ ಸರ್ಜಾ, ರೀಷ್ಮಾ, ಡೈರೆಕ್ಟರ್ ಪ್ರೇಮ್    , ನಿರ್ಮಾಪಕ ಸುಪ್ರೀತ್ ಸೇರಿದಂತೆ ಸುಮಾರು 25 ಮಂದಿ ಟೀಂ ಸ್ವಿಟ್ಜರ್ಲೆಂಡ್‌ಗೆ ಫ್ಲೈಟ್ ಏರಿತ್ತು. ಅದಕ್ಕೆ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಕೂಡ ಸಾಥ್ ನೀಡಿರೋದು ಇಂಟರೆಸ್ಟಿಂಗ್. ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಅನ್ನೋ ಸಾಂಗ್ ಈಗಾಗ್ಲೇ ಸಖತ್ ಹಿಟ್ ಆಗಿದ್ದು, ಅದೇ ಹಾಡಿನ ದೃಶ್ಯೀಕರಿಸೋಕೆ ಅಲ್ಲಿಗೆ ತೆರಳಿದೆ ಟೀಂ. ಬಹುಶಃ ಇದೇ ಮೇ 28ರ ಬುಧವಾರದ ನೈಟ್ ಬೆಂಗಳೂರಿಗೆ ವಾಪಸ್ ಆಗಲಿದೆ ಗ್ಯಾಂಗ್ ಕೆಡಿ.

ನಿರ್ದೇಶಕ ಪ್ರೇಮ್, ಸಿನಿಮಾದ ಕಥೆ ಹಾಗೂ ಪಾತ್ರಗಳಿಗೆ ಎಷ್ಟು ತಲೆ ಕೆಡಿಸಿಕೊಳ್ತಾರೋ ಅದಕ್ಕಿಂತ ಜಾಸ್ತಿ ಸಾಂಗ್ಸ್‌ಗೆ ಒತ್ತು ಕೊಡ್ತಾರೆ. ಅದೇ ಕಾರಣದಿಂದ ಪ್ರೇಮ್ ಚಿತ್ರದ ಮ್ಯೂಸಿಕ್ ಆಲ್ಬಮ್ಸ್‌‌ಗೆ ಎಂಥದ್ದೇ ಸಿನಿಮಾ ಆಗಲಿ ದೊಡ್ಡ ಸಕ್ಸಸ್ ಸಿಗುತ್ತೆ. ಸದ್ಯ ಅದೇ ಕಾರಣಕ್ಕೆ ಬಹಳ ಕಲರ್‌‌ಫುಲ್ ಆಗಿ ಹಾಡು ಮೂಡಿಬರಬೇಕು ಅಂತ ಕಣ್ಣು ಕೋರೈಸೋ ಸ್ವಿಟ್ಜರ್ಲೆಂಡ್ ಬ್ಯೂಟಿಫುಲ್ ಲೊಕೇಷನ್ಸ್‌‌‌ನಲ್ಲಿ ಈ ಹಾಡನ್ನ ಸೆರೆಹಿಡಿಯಲಾಗ್ತಿದೆ.

ಮತ್ತೊಂದು ಮೆಗಾ ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ಕೆಡಿ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ದೊಡ್ಡ ಸ್ಟಾರ್ ಎಂಟ್ರಿ ಕೊಡಲಿದ್ದಾರೆ. ಹೌದು.. ಅದೊಂದು ಗೆಸ್ಟ್ ಅಪಿಯರೆನ್ಸ್ ಆಗಿರಲಿದ್ದು, ಚಿತ್ರದಲ್ಲಿ ಪ್ರಮುಖ ಸೀಕ್ವೆನ್ಸ್ ಆಗಿರಲಿದೆಯಂತೆ. ಅದಕ್ಕಾಗಿ ಈಗಾಗಲೇ ಚಿತ್ರತಂಡ ನಟ ಶಿವಣ್ಣ ಹಾಗೂ ಸುದೀಪ್‌ ಜೊತೆ ಚರ್ಚೆ ಕೂಡ ನಡೆಸಿದೆ ಎನ್ನಲಾಗ್ತಿದೆ. ಇಬ್ಬರಲ್ಲಿ ಒಬ್ಬರು ಆ ಪಾತ್ರ ಮಾಡಲಿದ್ದು, ಯಾರಾಗ್ತಾರೆ ಆ ಸ್ಪೆಷಲ್ ಸ್ಟಾರ್ ಅನ್ನೋದನ್ನ ನಿರೀಕ್ಷಿಸಬೇಕಿದೆ. ಇನ್ನು ಬಹುಶಃ ಸ್ವಿಟ್ಜರ್ಲೆಂಡ್ ಸಾಂಗ್ ಶೂಟಿಂಗ್‌ನಿಂದ ವಾಪಸ್ ಆದ ಬಳಿಕ ಅದ್ರ ಮೇಕಿಂಗ್ ಝಲಕ್‌ನೊಂದಿಗೆ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಕೆವಿಎನ್ ಪ್ರೊಡಕ್ಷನ್ಸ್.

Exit mobile version