ಅಂದು UI.. ಇಂದು KD.. ಹಂಗೇರಿಯಾದಲ್ಲಿ ಹಂಗಾಮ..!

ಬ್ಯಾಗ್ರೌಂಡ್ ಮ್ಯೂಸಿಕ್‌‌ಗಾಗಿ ಬುಡಾಪೆಸ್ಟ್‌‌ವರೆಗೆ ಪಯಣ

Untitled design (84)

ಕೆಡಿ ಸಿನಿಮಾದ ಟೀಸರ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಶೋಮ್ಯಾನ್ ಜೋಗಿ ಪ್ರೇಮ್, ಈ ಸಿನಿಮಾನ ಪ್ಯಾನ್ ಇಂಡಿಯಾ ಅಲ್ಲದೆ ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗಲು ಪಣ ತೊಟ್ಟಿದ್ದಾರೆ. ಧ್ರುವ ಸರ್ಜಾ- ಸಂಜಯ್ ದತ್ ಕಾಂಬೋನ ಕೆಡಿ, ಸದ್ಯ ಟೆಕ್ನಿಕಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಹಂಗೇರಿಯಾದಲ್ಲಿ ಬೀಡುಬಿಟ್ಟಿರೋದ್ಯಾಕೆ ಪ್ರೇಮ್ ಅನ್ನೋದಕ್ಕೆ ಈ ಸ್ಟೋರಿ ಓದಲೇಬೇಕು.

ರೆಟ್ರೋ ಅಂಡರ್‌‌ವರ್ಲ್ಡ್ ಕಥೆಯನ್ನ ಬಿಗ್ ಸ್ಕ್ರೀನ್‌ಗೆ ತರ್ತಿರೋ ಜೋಗಿ ಪ್ರೇಮ್, ವಿಂಟೇಜ್ ಸ್ಟೈಲ್‌‌ನಲ್ಲಿ ಕೆಡಿ ಸಿನಿಮಾನ ಕಟ್ಟಿಕೊಡ್ತಿದ್ದಾರೆ. ಅದಕ್ಕಾಗಿ ಕನ್ನಡದ ಜೊತೆಗೆ ಪರಭಾಷಾ ಸೂಪರ್ ಸ್ಟಾರ್‌‌ಗಳನ್ನ ಕೂಡ ಈ ಚಿತ್ರಕ್ಕೆ ಕರೆತಂದಿದ್ದು, ಧ್ರುವ ಸರ್ಜಾನ ಈ ಪ್ರಾಜೆಕ್ಟ್‌‌ನಿಂದ ಗ್ಲೋಬಲ್ ಸ್ಟಾರ್ ಮಾಡೋಕೆ ಹೊರಟಿದ್ದಾರೆ. ಹೌದು, ಇತ್ತೀಚೆಗೆ ಲಾಂಚ್ ಆದ ಟೀಸರ್ ಅದಕ್ಕೆ ಪುಷ್ಠಿ ಕೊಡ್ತಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದು, ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದೆ. ಸಿನಿಮಾ ಈಗ ಕಾಂಪಿಟೇಟಿವ್ ಎರಾದಲ್ಲಿ ಪ್ರೇಕ್ಷಕರನ್ನ ಮೆಚ್ಚುಸುವುದು ತುಂಬಾ ಕಷ್ಟವಿದೆ. ಹಾಗಾಗಿ ರುಚಿಸುವಂತೆ ಮಾಡೋಕೆ ಪ್ರೇಮ್ ಸಿಕ್ಕಾಪಟ್ಟೆ ಎಫರ್ಟ್‌ ಹಾಕ್ತಿದ್ದಾರೆ. ಅದಕ್ಕೆ ಹಂಗೇರಿಗೆ ಹಾರಿರೋ ಪ್ರೇಮ್ ವಿಡಿಯೋ ಸಾಕ್ಷಿ ಆಗ್ತಿದೆ.

ಹೌದು, ಇದು ಕೆಡಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗಾಗಿ ಜೋಗಿ ಪ್ರೇಮ್ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಜೊತೆಗೂಡಿ ಹಂಗೇರಿಯಾದ ಬುಡಾಪೆಸ್ಟ್‌ಗೆ ಹಾರಿದ್ದಾರೆ. ಅಲ್ಲೇ ಎರಡು ವಾರಗಳ ಕಾಲ ಬೀಡು ಬಿಡಲಿರೋ ಪ್ರೇಮ್, ಒಂದು ವಿಡಿಯೋ ಮೂಲಕ ಅಲ್ಲಿನ ಉಪಸ್ಥಿತಿಯನ್ನ ತಮ್ಮ ವಾಯ್ಸ್‌‌ನಲ್ಲಿ ಚಿತ್ರಿಸಿ ಕಳಿಸಿದ್ದಾರೆ. ಸದ್ಯದಲ್ಲೇ ಸ್ಟುಡಿಯೋ ಸಮೇತ ಬ್ಯಾಗ್ರೌಂಡ್ ಮ್ಯೂಸಿಕ್ ಮಾಡೋದನ್ನ ಕೂಡ ತೋರಿಸ್ತೀನಿ ಎಂದಿದ್ದಾರೆ.

ಇದೇ ಹಂಗೇರಿಯಾದ ಆರ್ಕೆಸ್ಟ್ರಾ ಸ್ಟುಡಿಯೋದಲ್ಲಿ ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಯುಐ ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್‌‌ ಮಾಡಿಸಿದ್ರು. ಅದಕ್ಕಾಗಿ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್‌ರನ್ನ ಕೂಡ ಅಲ್ಲಿಗೆ ಕರೆದೊಯ್ದಿದ್ದರು. ಅಂದು ಉಪ್ಪಿ ಮಾಡಿದ ಆ ಸಾಹಸವನ್ನು ಇದೀಗ ಜೋಗಿ ಪ್ರೇಮ್ ಕೂಡ ಮಾಡ್ತಿರೋದು ಇಂಟರೆಸ್ಟಿಂಗ್. ಕ್ವಾಲಿಟಿ ಸಿನಿಮಾನ ಪ್ರೇಕ್ಷಕರಿಗೆ ಉಣಬಡಿಸೋಕೆ ಪ್ರೇಮ್ ಮಾಡ್ತಿರೋ ರಿಸ್ಕ್ ನೋಡಿದ್ರೆ ಅವ್ರಲ್ಲಿರೋ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದು ಗೊತ್ತಾಗ್ತಿದೆ.

ಅಂದಹಾಗೆ ಹಂಗೇರಿಯಾದಲ್ಲಿ ಹಾಲಿವುಡ್ ಸಿನಿಮಾಗಳು ಕೂಡ ಪೋಸ್ಟ್ ಪ್ರೊಡಕ್ಷನ್ ನಡೆಸಲಿದ್ದು, ವರ್ಲ್ಡ್‌ನ ಬೆಸ್ಟ್ ಬ್ಯಾಗ್ರೌಂಡ್ ಸ್ಕೋರ್ ಸ್ಟುಡಿಯೋಗಳಿವೆ. ಅಲ್ಲಿನ ಆರ್ಕೆಸ್ಟ್ರಾ ಟೀಮ್‌ಗಳು ಸಖತ್ ಸ್ಟ್ರಾಂಗ್ ಇವೆ. ಅತ್ಯದ್ಭುತ ಟೆಕ್ನಿಷಿಯನ್ಸ್ ಇರೋ ಹಂಗೇರಿಯಾಗೆ ವಿಶ್ವದ ಬೇರೆ ಬೇರೆ ದೇಶಗಳ ಫಿಲ್ಮ್ ಮೇಕರ್ಸ್‌ ಬಂದು ಕೆಲಸಗಳನ್ನ ಮಾಡಿಕೊಂಡು ಹೋಗುವ ಪ್ರತೀತಿ ಇದೆ. ಅದೇನೇ ಇರಲಿ, ಕೆಡಿ ಸಿನಿಮಾ ಟೀಸರ್ ಹಾಗೂ ಸಾಂಗ್ಸ್‌ನಿಂದ ಹಂಗಾಮ ಮಾಡ್ತಿದ್ದು, ಹಂಗೇರಿ ಸುದ್ದಿ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಮಾಡಿದೆ.

Exit mobile version