ಧ್ರುವ ಸರ್ಜಾ ಫ್ಯಾನ್ಸ್ ದಿಲ್‌ಖುಷ್ ಆಗುವ, ಇಡೀ ಸ್ಯಾಂಡಲ್‌ವುಡ್ ಹೆಮ್ಮೆ ಪಡುವಂತಹ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ ಶೋಮ್ಯಾನ್ ಜೋಗಿ ಪ್ರೇಮ್. ಯೆಸ್.. ಕೆಡಿ ಸಿನಿಮಾದಿಂದ ನಯಾ ಅಪ್ಡೇಟ್ ಹೊರಬಿದ್ದಿದ್ದು, ಹಂಗೇರಿಯಾದಿಂದ ಲೈವ್ ಬಂದ ಟೀಂ ಕೆಡಿ ಕೊಟ್ಟ ಆ ಬ್ರೇಕಿಂಗ್ ನ್ಯೂಸ್ ಏನು ಅನ್ನೋದ್ರ ಸ್ಪೆಷಲ್ ಸ್ಟೋರಿ ಇಲ್ಲಿದೆ.
- KD ರೀ- ರೆಕಾರ್ಡಿಂಗ್.. ಬುಡಾಪೆಸ್ಟ್‌ನಿಂದ ಪ್ರೇಮ್ ಲೈವ್
- ಅರಕಲು ಮುರುಕಲು ಇಂಗ್ಲಿಷ್ ಮಾತಾಡ್ತಾ ಹೇಳಿದ್ದೇನು..?!
- ಶೋಮ್ಯಾನ್‌ಗೆ ಅರ್ಜುನ್ ಜನ್ಯ, KVN ಸುಪ್ರೀತ್ ಸಾಥ್..!
- ಹಂಗೇರಿಯಾದಲ್ಲಿವೆ ವರ್ಲ್ಡ್ ಬೆಸ್ಟ್ ಆರ್ಕೆಸ್ಟ್ರಾ ಸ್ಟುಡಿಯೋಸ್
ಕೆಡಿ.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕರಿಯರ್‌ನ ಮಹತ್ವದ ಸಿನಿಮಾ. ಇಲ್ಲಿಯವರೆಗೂ ಮಾಡದೇ ಇರೋ ಅಂತಹ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರೋ ಇವರುಗಳು ಇದೀಗ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಝಲಕ್ ನೋಡಿ, ಅಬ್ಬಬ್ಬಾ ಪ್ರೇಮ್ ಈಸ್ ಬ್ಯಾಕ್ ಅಂತೆಲ್ಲಾ ಮಾತಾಡ್ತಿದ್ದಾರೆ ಚಿತ್ರಪ್ರೇಮಿಗಳು.
ಯೆಸ್.. ಪ್ಯಾನ್ ಇಂಡಿಯಾ ಸುತ್ತಿ ಇಂಡಿಯಾದ ಸುಮಾರು ಐದು ಮೇಜರ್ ಸಿಟಿಗಳಲ್ಲಿ ಕೆಡಿ ಟೀಸರ್ ಲಾಂಚ್ ಮಾಡಿತ್ತು ಚಿತ್ರತಂಡ. ಕನ್ನಡದಿಂದ ಬಾಲಿವುಡ್‌ವರೆಗೆ ಅದ್ಭುತ ಕಲಾವಿದರ ದಂಡಿರೋ ಈ ಸಿನಿಮಾದ ಪಾತ್ರಗಳು, ಕಥೆ, ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದೆ. ಇದೀಗ ಅದಕ್ಕೆ ರೀ ರೆಕಾರ್ಡಿಂಗ್ ಕೂಡ ಡಿಫರೆಂಟ್ ಆಗಿ ಎಲ್ಲರೂ ಮೆಚ್ಚುವಂತೆ ಮಾಡಿಸ್ತಿದ್ದಾರೆ ಪ್ರೇಮ್.
ಅದಕ್ಕಾಗಿ ಹಂಗೇರಿಯಾದ ಬುಡಾಪೆಸ್ಟ್‌ಗೆ ತೆರಳಿದ್ದ ಡೈರೆಕ್ಟರ್ ಪ್ರೇಮ್, ಅಲ್ಲಿರೋ ವರ್ಲ್ಡ್ ಬೆಸ್ಟ್ ಆರ್ಕೆಸ್ಟ್ರಾ ಟೀಮ್‌ಗಳಿಂದ ಕೆಡಿ ಚಿತ್ರದ ರೀ- ರೆಕಾರ್ಡಿಂಗ್ ಮಾಡಿಸ್ತಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗೂ ಪ್ರೊಡ್ಯೂಸರ್ ಸುಪ್ರೀತ್ ಜೊತೆ ಬುಡಾಪೆಸ್ಟ್‌ನಲ್ಲಿ ಬೀಡುಬಿಟ್ಟಿದ್ದ ಪ್ರೇಮ್, 20ಡಿಬಿ ಸೌಂಡ್ ಸ್ಟುಡಿಯೋದಲ್ಲಿ ಬ್ಯಾಗ್ರೌಂಡ್ ಮ್ಯೂಸಿಕ್ ಮಾಡಿಸ್ತಿರೋದನ್ನ ಇನ್ಸ್‌ಟಾ ಲೈವ್ ಮೂಲಕ ತೋರಿಸಿದ್ದಾರೆ.
ಭಾಷೆಗಿಂತ ಭಾವ ಮುಖ್ಯ ಎನ್ನುವ ಪ್ರೇಮ್, ತಮಗೆ ಬರುವ ಅರಕಲು ಮುರುಕಲು ಇಂಗ್ಲಿಷ್‌ನಲ್ಲಿ ಹಂಗೇರಿಯಾ ಟೆಕ್ನಿಷಿಯನ್ಸ್ ಜೊತೆ ಮಾತಾಡ್ತಾ, ಅಲ್ಲಿನ ಆ ಕಾರ್ಯವೈಖರಿಯನ್ನ ತೋರಿಸಿದ್ದಾರೆ. ದುದ್ಡು ಜಾಸ್ತಿ ಖರ್ಚು ಮಾಡಿಸ್ತಿದ್ದಾರೆ ಅಂತ ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ಸುಪ್ರೀತ್ ಅವರು ಪ್ರೇಮ್ ಕಾಲೆಳೆದರೆ, ಅರ್ಜುನ್ ಜನ್ಯ ರೀ ರೆಕಾರ್ಡಿಂಗ್ ಕುರಿತು ಡಿಟೈಲ್ಸ್ ನೀಡಿದ್ರು.
ಲೇಟ್ ಆದ್ರೂ ಲೇಟೆಸ್ಟ್ ಆಗಿ ಥಿಯೇಟರ್‌ಗಳಿಗೆ ಎಂಟ್ರಿ ಕೊಡಲಿರೋ ಕೆಡಿ, ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಲಗ್ಗೆ ಇಡೋ ಧಾವಂತದಲ್ಲಿದೆ. ಅದೇ ಕಾರಣದಿಂದ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಅಂತಹ ದೊಡ್ಡ ಸ್ಟಾರ್‌ಗಳನ್ನ ಒಳಗೊಂಡಿದೆ. ಬಿಗ್ ಸ್ಕೇಲ್‌ನಲ್ಲಿ ಬಿಗ್ ಬಜೆಟ್ ಚಿತ್ರವಾಗಿರೋ ಕೆಡಿ, ಮೆಟ್ರೋ ಮಂದಿಗೆ ರೆಟ್ರೋ ಕಥೆಯಿಂದ ಮಸ್ತ್ ಮನರಂಜನೆ ನೀಡೋದು ಕನ್ಫರ್ಮ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
