ಸಾಂಗ್ ಹಿಟ್..ಶೂಟಿಂಗ್ ಕ್ಯಾನ್ಸಲ್..KD ಸೀಕ್ರೆಟ್

ರೀಷ್ಮಾಗೆ ಸೆಟ್ ಆಗಲ್ಲ ಹೋಗೆ ಅಂದಿದ್ದ ಆ್ಯಕ್ಷನ್ ಪ್ರಿನ್ಸ್

Film (10)

ಗ್ಲಾಮರ್ ಡಾಲ್ ರೀಷ್ಮಾ ನಾಣಯ್ಯಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಅಂದಿದ್ರು. ಅದೀಗ ಬರೋಬ್ಬರಿ 2 ಕೋಟಿ ವೀವ್ಸ್‌‌ನಿಂದ ಟ್ರೆಂಡಿಂಗ್‌ನಲ್ಲಿದೆ. ಸಾಂಗ್ ಏನೋ ಹಿಟ್ ಆಯ್ತು. ಆದ್ರೆ ಶೂಟಿಂಗ್ ಕ್ಯಾನ್ಸಲ್ ಆಗಿದೆ.

KD ಅಲಿಯಾಸ್ ಕಾಳಿದಾಸ.. ಸ್ಯಾಂಡಲ್‌ವುಡ್ ಅಂಗಳದಲ್ಲಿ ತಯಾರಾಗ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ರೆಟ್ರೋ ಬ್ಯಾಕ್‌‌ಡ್ರಾಪ್‌‌ನಲ್ಲಿ ತಯಾರಾಗ್ತಿರೋ ಈ ಸಿನಿಮಾ ಟೈಟಲ್, ಪಾತ್ರಗಳು, ಟೀಸರ್, ಶಿವ ಸಾಂಗ್‌ನಿಂದ ಎಲ್ಲಿಲ್ಲದ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇದೀಗ ರೀಸೆಂಟ್ ಆಗಿ ರಿಲೀಸ್ ಆದ ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಸಾಂಗ್ ಕೂಡ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಗ್ಲಾಮರ್ ಗೊಂಬೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದು, ಇದಕ್ಕೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿರೋದು ಗೊತ್ತೇಯಿದೆ. ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಅರ್ಜುನ್ ಜನ್ಯ ಮ್ಯೂಸಿಕ್, ಕ್ರಾಂತಿ ಕುಮಾರ್ ಮಾಸ್ ಡೈಲಾಗ್ಸ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ.

ನಾಲ್ಕೂವರೆ ಕೋಟಿ ವೀವ್ಸ್‌ನಿಂದ ಶಿವ ಶಿವ ಸಾಂಗ್ ಎಲ್ಲರ ಕಿವಿ ಇಂಪಾಗಿಸಿದೆ. ಲಿರಿಕಲ್ ವಿಡಿಯೋ ಆದ್ರೂ ಕೂಡ ಕಣ್ಣು ತಂಪಾಗಿಸಿದೆ. ಇದೀಗ ಸೆಟ್ ಆಗಲ್ಲ ಹೋಗೆ ಸಾಂಗ್ ಸಹ ಎರಡು ಕೋಟಿ ವೀವ್ಸ್‌‌ನಿಂದ ಮೋಸ್ಟ್ ಟ್ರೆಂಡಿಂಗ್‌ನಲ್ಲಿದೆ. ವಿಶೇಷ ಅಂದ್ರೆ ಈ ಸಾಂಗ್‌ಗೆ ಧ್ರುವ-ರೀಷ್ಮಾ ಸ್ಟೆಪ್ಸ್ ಹಾಕಿದ್ದಾರೆ. ಆದ್ರೆ ಅದೇ ಫೈನಲ್ ಅಲ್ಲ. ಫ್ಯಾನ್ಸ್ ಅಥ್ವಾ ನೋಡುಗರು ಒಳ್ಳೆಯ ಹುಕ್ ಸ್ಟೆಪ್ಸ್‌‌ನ ಹಾಕಿದ್ರೆ ಅದು ಇಷ್ಟವಾದಲ್ಲಿ ಅದೇ ಸ್ಟೆಪ್ಸ್‌ನ ಈ ಸಾಂಗ್‌‌ನಲ್ಲಿ ಅಳವಡಿಸಿ ಚಿತ್ರಿಸಲಾಗುವುದು ಎಂದಿದೆ ಟೀಂ.

ಜೋಗಿ ಪ್ರೇಮ್ ಸಾಹಿತ್ಯ ರಚಿಸಿರೋ ಹಾಗೂ ಮಿಕಾ ಸಿಂಗ್ ಹಾಡಿರೋ ಈ ಹಾಡನ್ನ ಚಿತ್ರತಂಡ ಆಂಸ್ಟರ್ಡ್ಯಾಮ್ ನಲ್ಲಿ ಚಿತ್ರಿಸೋ ಯೋಜನೆಯಲ್ಲಿತ್ತು. ಆದ್ರೀಗ ಅಲ್ಲಿ ಈಸ್ಟರ್ ಹಿನ್ನೆಲೆ ಪರ್ಮಿಷನ್ ಸಮಸ್ಯೆ ಉಂಟಾಗಿದೆ. ಹಾಗಾಗಿ ಶೂಟಿಂಗ್ ರದ್ದು ಮಾಡಲಾಗಿದೆ. ಅಲ್ಲದೆ, ಸೀಗೆಹಳ್ಳಿ ಸೆಟ್‌‌ನಲ್ಲಿ ಎರಡು ದಿನಗಳ ಕಾಲ ಪ್ಯಾಚ್ ವರ್ಕ್ ಕೂಡ ಬಾಕಿಯಿದೆ. ಗ್ರಾಫಿಕ್ಸ್, ಡಬ್ಬಿಂಗ್ ಕಾರ್ಯಗಳು ಭರದಿಂದ ಸಾಗ್ತಿದ್ದು, ಸದ್ಯದಲ್ಲೇ ಬಾಕಿ ಉಳಿದಿರೋ ಸಾಂಗ್ ಚಿತ್ರಿಸಲು ಟೀಂ ಪ್ಲ್ಯಾನ್ ಮಾಡ್ತಿದೆ.

ಅರ್ಜುನ್ ಸರ್ಜಾ ಸೀತಾಯಣದಲ್ಲಿ ಧ್ರುವ ಧಮಾಕ , ಕೆರೆಬೇಟೆ ಡೈರೆಕ್ಟರ್‌ಗೆ ಧ್ರುವ ಡೇಟ್ಸ್.. ಸದ್ಯದಲ್ಲೇ ಅನೌನ್ಸ್

ಕೆಡಿ ಸಿನಿಮಾದ ಶೂಟಿಂಗ್ ಹೇಗೋ ಸ್ಟಾಪ್ ಆಗಿದೆ. ಆದ್ರೆ ಧ್ರುವ ಸರ್ಜಾ ಕೈಕಟ್ಟಿ ಕೂತಿಲ್ಲ. ಸೋದರಮಾವ ಅರ್ಜುನ್ ಸರ್ಜಾ ನಿರ್ದೇಶಿಸ್ತಿರೋ ಸೀತಾಯಣ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಗೆ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಹೈದ್ರಾಬಾದ್‌ನ ಬುದ್ಧ ಪ್ರತಿಮೆ ಸುತ್ತಮುತ್ತ ಧ್ರುವ ಸರ್ಜಾ ಸೀತಾಯಣ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್‌‌ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಇವೆಲ್ಲವುಗಳ ನಡುವೆ ನೆಕ್ಸ್ಟ್ ಪ್ರಾಜೆಕ್ಟ್‌‌ಗೂ ತಯಾರಿ ನಡೆಯುತ್ತಿದೆ. ಹೌದು.. ಎಲ್ಲರ ಗಮನ ಸೆಳೆದ ಕೆರೆಬೇಟೆ ಚಿತ್ರದ ಡೈರೆಕ್ಟರ್ ಜೊತೆ ಧ್ರುವ ಸರ್ಜಾ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಕಥೆ, ಡೈಲಾಗ್ಸ್ ಕಾರ್ಯಗಳು ನಡೆಯುತ್ತಿದ್ದು, ಅಫಿಶಿಯಲಿ ಆ ಸಿನಿಮಾ ಅನೌನ್ಸ್ ಆಗೋದು ಬಾಕಿಯಿದೆ. ಅದೇನೇ ಇರಲಿ, ಕೆಡಿ ಸಾಂಗ್ ಶೂಟ್ ಬೇಗ ಮುಗಿಯಲಿ, ರಿಲೀಸ್ ಡೇಟ್ ಕೂಡ ಅನೌನ್ಸ್ ಆದಲ್ಲಿ ಫ್ಯಾನ್ಸ್ ಖುಷ್ ಆಗ್ತಾರೆ.

Exit mobile version