ರಿಲೀಸ್‌ಗೂ ಮೊದಲೇ ‘ಕರಿಕಾಡ’ಗೆ ಪ್ರೇಕ್ಷಕ ಜೈಕಾರ..!

ನಾಡ ನಟರಾಜ್‌ಗೆ ಕಾಡ ಕನಸು ಬೀಳೋ ಥ್ರಿಲ್ಲರ್ ಕಥೆ

BeFunky collage 2026 02 04T174858.425

ಈ ವಾರ ತೆರೆಗೆ ಬರ್ತಿರೋ ಯೂತ್‌ಫುಲ್ ಸಿನಿಮೋತ್ಸಾಹಿ ಟೀಂ ಕರಿಕಾಡಗೆ ರಿಲೀಸ್‌ಗೂ ಮೊದಲೇ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಪ್ರೇಕ್ಷಕಪ್ರಭುಗಳು ಬಹುಪರಾಕ್ ಅಂದಿದ್ದಾರೆ. ವೃತ್ತಿ ಬಿಟ್ಟು ಸಿನಿಮಾ ಪ್ರವೃತ್ತಿ ಕೈಗೆತ್ತಿಕೊಂಡ ಕಾಡ ನಟರಾಜ್‌‌ಗೆ ಜನ ಕೊಟ್ಟ ಮಾರ್ಕ್ಸ್ ಎಷ್ಟು..? ಹೇಗಿದೆ ಸಿನಿಮಾ..? ಕಥೆ ಏನು..? ಮೇಕಿಂಗ್ ಹೇಗಿದೆ ಅನ್ನೋ ರಿವ್ಯೂ ರಿಪೋರ್ಟ್‌ ಇಲ್ಲಿದೆ.

ಕರಿಕಾಡ..ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಭರವಸೆ ಮೂಡಿಸಿದ್ದ ಈ ಸಿನಿಮಾ ಇದೇ ವಾರ ಅಂದ್ರೆ ಫೆಬ್ರವರಿ 6ಕ್ಕೆ ತೆರೆಗೆ ಬರ್ತಿದೆ. ಆದ್ರೆ ರಿಲೀಸ್‌ಗೂ ಮೊದಲೇ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಕಂಡ ಕರಿಕಾಡಗೆ ಚಿತ್ರಪ್ರೇಮಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದು ಚಿತ್ರತಂಡದ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ರಿಲೀಸ್‌ಗೂ ಮೊದಲೇ ‘ಕರಿಕಾಡ’ಗೆ ಪ್ರೇಕ್ಷಕ ಜೈಕಾರ..!

ಫಸ್ಟ್ ಸ್ಟೆಪ್‌‌ನಲ್ಲೇ ಭರವಸೆ ಮೂಡಿಸಿದ ಕಾಡ ನಟರಾಜ್‌

ಕಾರ್ಪೊರೇಟ್ ಸೆಕ್ಟರ್‌‌ನಲ್ಲಿ ಕೆಲಸ ಮಾಡ್ತಾ ಇರೋ ಮಲೆನಾಡು ಭಾಗದ ಕಾಡ ನಟರಾಜ್, ವೃತ್ತಿ ಜೊತೆಗೆ ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿದ್ದರು. ಇದು ಅವ್ರ ಚೊಚ್ಚಲ ನಟನೆಯ ಹಾಗೂ ನಿರ್ಮಾಣದ ಸಿನಿಮಾ. ವೆಂಕಟೇಶ್ ಅನ್ನೋರು ಆ್ಯಕ್ಷನ್ ಕಟ್ ಹೇಳಿದ್ದು, ಪತ್ನಿ ದೀಪ್ತಿ ದಾಮೋದರ್ ಬಂಡವಾಳ ಹೂಡಿದ್ದಾರೆ. ನಟರಾಜ್‌ರ ಮಗಳು ಬೇಬಿ ರಿದ್ಧಿ, ಯಶ್ ಶೆಟ್ಟಿ, ಬಲರಾಜ್‌ವಾಡಿ, ವಿಜಯ್ ಚೆಂಡೂರು, ಗಿರಿ, ಗೋವಿಂದೇಗೌಡ, ಕರಿಸುಬ್ಬು, ದಿವಂಗತ ರಾಕೇಶ್ ಪೂಜಾರಿ.. ಹೀಗೆ ಬಹುದೊಡ್ಡ ತಾರಾಗಣ ಚಿತ್ರಕ್ಕಿದೆ.

ಬೆಂಗಳೂರು, ಮಂಗಳೂರು ಪ್ರೀಮಿಯರ್ ಹೌಸ್‌ಫುಲ್

ನಾಡ ನಟರಾಜ್‌ಗೆ ಕಾಡ ಕನಸು ಬೀಳೋ ಥ್ರಿಲ್ಲರ್ ಕಥೆ

ನಾಯಕನಟಿಯಾಗಿ ನಿರೀಕ್ಷಾ ಶೆಟ್ಟಿ ಬಣ್ಣ ಹಚ್ಚಿದ್ದು, ತಮಿಳು ನಟಿ ಅಭಿರಾಮಿ ರೀತಿ ಕಾಣ್ತಾರೆ. ಅಂದಹಾಗೆ ಇದು ಮಲೆನಾಡು, ಅರೆ ಮಲೆನಾಡು ಬ್ಯಾಕ್‌ಡ್ರಾಪ್‌‌ನಲ್ಲಿ ನಡೆಯೋ ಕಥೆ ಆಗಿದ್ದು, ಕಾಡು ಹಂದಿಯ ಬೇಟೆ, ಸ್ನೇಹ, ಪ್ರೀತಿ, ದ್ವೇಷಗಳ ಮೇಲೆ ಕೇಂದ್ರೀಕೃತವಾಗಿದೆ. ನಾಯಕನಟ ಕಾಡ ನಟರಾಜ್ ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಕೆಲ ಸೀನ್‌ಗಳಲ್ಲಿ ರಂಗಸ್ಥಳಂ ಹಾಗೂ ಪೆದ್ದಿ ಸಿನಿಮಾಗಳ ರಾಮ್ ಚರಣ್ ರೀತಿ ಕಾಣಸಿಗುತ್ತಾರೆ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿರೋ ನಟರಾಜ್ ನುರಿತ ಕಲಾವಿದನಂತೆ ಮನೋಜ್ಞ ಅಭಿನಯ ನೀಡಿದ್ದಾರೆ.

ಸಿನಿಮಾಗೆ ಮ್ಯೂಸಿಕ್ ಪ್ಲಸ್ ಆಗಿದ್ದು, ಯಶ್ ಶೆಟ್ಟಿ ವಿಲನಿಸಂ ಮೆಚ್ಚುವಂತಿದೆ. ನಿರ್ದೇಶಕ ವೆಂಕಟೇಶ್ ಇನ್ನೊಂದಷ್ಟು ಹೋಮ್ ವರ್ಕ್‌ ಮಾಡಿದ್ದಿದ್ರೆ ಇದಕ್ಕಿಂತ ಚೆನ್ನಾಗಿರೋ ದೃಶ್ಯಕಾವ್ಯವನ್ನೇ ಕಟ್ಟಬಹುದಿತ್ತು. ಆದ್ರೂ ಸಹ, ಗಾಳಿಪಟ, ಕಾಂತಾರ ಚಿತ್ರಗಳ ನೆರಳು ಇಲ್ಲಿ ಕಾಣುತ್ತೆ. ಒಮ್ಮೆ ನೋಡೋಕೆ ಏನೂ ಅಡ್ಡಿಯಿಲ್ಲ. ಬಾಂಬ್‌ಗಳ ಅಬ್ಬರದ ನಡುವೆ ಆ್ಯಕ್ಷನ್, ಎಮೋಷನ್, ಲವ್, ಸೆಂಟಿಮೆಂಟ್ಸ್ ಎಲ್ಲವೂ ಹದವಾಗಿ ಬ್ಲೆಂಡ್ ಆಗಿವೆ.

ಯಾವುದೇ ಸಿನಿಮಾಗೆ ಪೇಯ್ಡ್ ಪ್ರೀಮಿಯರ್‌‌ಗಳು ಒಂಥರಾ ವಾರ್ಮಪ್ ಮ್ಯಾಚ್ ಇದ್ದಂತೆ. ಅಸಲಿ ಆಟ ರಿಲೀಸ್ ದಿನವೇ ಗೊತ್ತಾಗಲಿದೆ. ಸೋ.. ಜನ ಫೆಬ್ರವರಿ 6ಕ್ಕೆ ಸಿನಿಮಾ ನೋಡಿ ಏನು ಹೇಳ್ತಾರೆ..? ಎಷ್ಟು ಮಾರ್ಕ್ಸ್ ಕೊಡ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

Exit mobile version