ನಟಿ ಜೊತೆ ಜಟಾಪಟಿ ನಡುವೆ ‘ಕರಳೆ’ ಕರಾಳತೆ ಬಹಿರಂಗ

Untitled design 2025 05 05t204331.327

ಫಸ್ಟ್‌‌ಲುಕ್‌‌ನಿಂದಲೇ ವಿವಾದಕ್ಕೆ ನಾಂದಿ ಹಾಡಿದ್ದ ಕರಳೆ ಪೋಸ್ಟರ್‌‌ನಿಂದ ನಿರ್ದೇಶಕ- ನಟಿಯ ನಡುವೆ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಡೈರೆಕ್ಟರ್ ಕರಳೆ ಚಿತ್ರದ ಮೇಕಿಂಗ್ ಝಲಕ್ ಬಿಟ್ಟು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ನಟಿ ಕುಂಕುಮ್ ಹಾಗೂ ನಿರ್ದೇಶಕ ಅವಿರಾಮ್ ಕಂಠೀರವ ನಡುವೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ವಿಚಾರಕ್ಕೆ ವಾದ-ವಿವಾದಗಳು ನಡೆಯುತ್ತಿವೆ. ಹೌದು.. ಕರಳೆ ಸಿನಿಮಾದ ಪೋಸ್ಟರ್ ರಿಲೀಸ್ ಆಗ್ತಿದ್ದಂತೆ ಅದರಲ್ಲಿ ಮಹಿಳೆಯ ಗುಪ್ತಾಂಗದ ಬಳಿ ಮಗುವೊಂದನ್ನ ಇರಿಸಿರೋ ಸ್ಟಿಲ್ ಫೋಟೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಫೋಟೋಶೂಟ್‌ಗೆ ಬೇರೆ ಯಾರನ್ನೋ ಬಳಸಿಕೊಂಡಿದ್ದಾರೆ. ಹಾಗೆ ಬೆತ್ತಲೆಯಾಗಿ ಮಲಗಿರೋದು ನಾನಲ್ಲ ಅಂತ ನಾಯಕನಟಿ ಕುಂಕುಮ್ ಅಳಲು ತೋಡಿಕೊಂಡಿದ್ರು. ಅಷ್ಟೇ ಅಲ್ಲ, ಇದ್ರಿಂದ ನನ್ನ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಅಗ್ತಿದೆ. ಅಲ್ಲಿರೋದು ನಾನಲ್ಲ ಅಂತ ಒಂದು ಮಾತು ಹೇಳಿ ಅಂತ ಡೈರೆಕ್ಟರ್‌ಗೆ ತಾಕೀತು ಮಾಡಿದ್ರು. ಅದನ್ನ ಸ್ಪಷ್ಟ ಪಡಿಸದ ಡೈರೆಕ್ಟರ್, ಫಿಲ್ಮ್ ಚೇಂಬರ್‌‌ನಲ್ಲೇ ಇತ್ಯರ್ಥ ಆಗಲಿ ಅಂತ ಪಟ್ಟು ಹಿಡಿದಿದ್ರು.

ಇದೀಗ ಕರಳೆ ಸಿನಿಮಾದ ಫೋಟೋಶೂಟ್ ಮೇಕಿಂಗ್ ವಿಡಿಯೋ ಹೊರಬಂದಿದೆ. ಅದರಲ್ಲಿ ಫೋಟೋಶೂಟ್ ನಲ್ಲಿ ಭಾಗಿಯಾಗಿರೋ ನಟಿಯನ್ನ ನಾವು ರಿವೀಲ್ ಮಾಡಲ್ಲ. ಅದು ಆಕೆಯ ಐಂಡೆಟಿಗೆ ಸಂಬಂಧಿಸಿದ ವಿಷಯ. ಹಾಗಾಗಿ ಗೌರವದಿಂದ ನಾವು ರಿವೀಲ್ ಮಾಡ್ತಿಲ್ಲ ಅಂತ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ. ಹಾಗಾದ್ರೆ ಬೆತ್ತಲೆಯಾಗಿ ನಟಿಯನ್ನ ಮಲಗಿಸಿ, ಗುಪ್ತಾಂಗದ ಬಳಿ ಮಗುವನ್ನು ಇಟ್ಟು, ರಕ್ತ ಬಳಸಿ ಚಿತ್ರಿಸಿರೋದು ಸದ್ಯಕ್ಕೆ ಓಕೆ. ಆದ್ರೆ ಮುಂದೆ ಸೆನ್ಸಾರ್‌‌ನಿಂದ ಇದಕ್ಕೆ ಸಂಕಷ್ಟ ತಪ್ಪಿದ್ದಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version