ಕಾಂತಾರ ಚಾಪ್ಟರ್ 1 ಯಶಸ್ಸು ಪ್ರಶಸ್ತಿಗಳ ಬೇಟೆಯಲ್ಲಿ ರಿಷಬ್

SIIMAನಲ್ಲಿ ರಿಷಬ್ ಜಾದೂ..ಕಾಂತಾರಗೆ 9 ಪ್ರಶಸ್ತಿಗಳು..!

ಯ್ಯ (23)

ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಜಾದೂ ಸೈಮಾ ಅಂಗಳದಲ್ಲೂ ಮುಂದುವರಿದಿದೆ. ಬೆಂಗಳೂರಿನಲ್ಲಿ ನಡೆದ 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂತಾರ ಬರೋಬ್ಬರಿ 9 ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ.

ಕಾಂತಾರ ಚಾಪ್ಟರ್ 1 ಯಶಸ್ಸು ಪ್ರಶಸ್ತಿಗಳ ಬೇಟೆಯಲ್ಲಿ ರಿಷಬ್

SIIMAನಲ್ಲಿ ರಿಷಬ್ ಜಾದೂ..ಕಾಂತಾರಗೆ 9 ಪ್ರಶಸ್ತಿಗಳು..!

ಪ್ರಶಸ್ತಿಗಳ ನಡುವೆಯೂ ಕನ್ನಡದ ಬೇರು ಮರೆಯದ ರಿಷಬ್

‘ನಮ್ಮ ನೆಲದ ದೈವಕ್ಕೆ ಅರ್ಪಣೆ’.. ರಿಷಬ್ ಭಾವುಕ ಪೋಸ್ಟ್

ಬೆಂಗಳೂರಿನಲ್ಲಿ ನಡೆದ 14ನೇ ಆವೃತ್ತಿಯ ಸೈಮಾ ಅದ್ದೂರಿ ಪ್ರಶಸ್ತಿ ಸಮಾರಂಭದಲ್ಲಿ ‘ಕಾಂತಾರ’ ಫ್ರಾಂಚೈಸಿ ಸೃಷ್ಟಿಸಿದ ಅಲೆಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಬೆರಗಾಗಿ ನಿಂತಿದೆ. ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ತಮ್ಮ  ದೃಶ್ಯಕಾವ್ಯದೊಂದಿಗೆ ಮತ್ತೊಮ್ಮೆ ಸಿಂಹಾಸನ ಏರಿದ್ದು, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ  ಹಾಗೂ ಅತ್ಯುತ್ತಮ ನಿರ್ದೇಶಕ ಎನ್ನುವ ಹೆಮ್ಮೆಯ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 2023ರ ಸೈಮಾದಲ್ಲಿ ವಿಮರ್ಶಕರ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದಿದ್ದ ರಿಷಬ್, ಈ ಬಾರಿ ‘ಕಾಂತಾರ: ಚಾಪ್ಟರ್ 1’ ಜಾದೂವಿನಿಂದ ಮುಖ್ಯ ವಿಭಾಗದ ಟ್ರೋಫಿಗಳನ್ನು ಜೇಬಿಗಿಳಿಸಿಕೊಂಡು ಹೊಸ ಇತಿಹಾಸ ಬರೆದಿದ್ದಾರೆ.

ಈ ಸಂಭ್ರಮ ಬರಿ ರಿಷಬ್ ಒಬ್ಬರ ಸೋಲೋ ಶೋ ಆಗಿರಲಿಲ್ಲ, ಬದಲಾಗಿ ‘ಕಾಂತಾರ’ ತಂಡದ ಒಟ್ಟು 9 ಪ್ರಶಸ್ತಿಗಳ ದೊಡ್ಡ ಗೆಲುವಾಗಿತ್ತು. ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಗ್ರಾಹಕ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಗೀತರಚನೆ ಜೊತೆಗೆ ಕಾಸ್ಟ್ಯೂಮ್ ಡಿಸೈನ್‌ಗೆ ವಿಶೇಷ ಮೆಚ್ಚುಗೆ ಪ್ರಶಸ್ತಿಗಳು ಒಲಿದುಬಂದವು. ಬಿ. ಅಜನೀಶ್ ಲೋಕನಾಥ್ ಅವರ ದೈವಿಕ ಹಿನ್ನೆಲೆ ಸಂಗೀತ ಸೈಮಾ ವೇದಿಕೆಯಲ್ಲಿ ಹೊಸ ದಾಖಲೆ ಬರೆದವು. ಕೈತುಂಬಾ ಪ್ರಶಸ್ತಿ ಹಿಡಿದು ನಿಂತ ರಿಷಬ್ ಹಾಗು ಪ್ರಗತಿ ಶೆಟ್ಟಿ ಕನ್ನಡ ಸಿನಿಮಾ ರಂಗದ ಗತ್ತನ್ನು ಬಾನತ್ತರಕ್ಕೆ ಏರಿಸಿದ್ದಾರೆ.

ಟ್ರೋಫಿಗಳ ಸುರಿಮಳೆಯ ನಡುವೆಯೂ ರಿಷಬ್ ಶೆಟ್ಟಿ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಮರೆಯಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಅವರು, “ಈ ಗೆಲುವು ನಮ್ಮ ನೆಲದ ದೈವಕ್ಕೆ ಹಾಗೂ ನಮಗೆ ಶಕ್ತಿ ನೀಡಿದ ಕನ್ನಡಿಗರಿಗೆ ಅರ್ಪಿತ” ಎಂದು ಹೇಳುತ್ತಾ ‘ಜೈ ಕರ್ನಾಟಕ ಮಾತೆ’ ಎಂದಿದ್ದಾರೆ. ಭಾರತೀಯ ಚಲನಚಿತ್ರೋತ್ಸವ ಗಳಿಸಿದ ಅಂತರರಾಷ್ಟ್ರೀಯ ಹೆಮ್ಮೆಯ ಬೆನ್ನಲ್ಲೇ ಬಂದ ಈ ಸೈಮಾ ಸಂಭ್ರಮ, ನಮ್ಮ ಕರಾವಳಿಯ ಸಂಸ್ಕೃತಿ ಮತ್ತು ಜಾನಪದ ಸೊಗಡು ಜಾಗತಿಕ ಮಟ್ಟದಲ್ಲಿ ಹೇಗೆ ಮೆರೆಯುತ್ತಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version