ಧುರಂಧರ್ ಬಳಿಕ ಮತ್ತೆ ಒಂದಾದ ರಣ್‌ವೀರ್-ಆದಿತ್ಯ ಧರ್ ಕಾಂಬೋ..!

ಒಂದೇ ಸ್ಕ್ರೀನ್‌ನಲ್ಲಿ ನಾಲ್ಕು ಪವರ್‌ಹೌಸ್.. ಧುರಂಧರ್ ಡೈರೆಕ್ಟರ್ ಹೊಸ ಆಟ

Your paragraph text 2026 09 16T172549.893

‘ಧುರಂಧರ್’ ಸಿನಿಮಾದ ಡೈರೆಕ್ಟರ್ ಆದಿತ್ಯ ಧರ್, ಈಗ ಬಿಗ್ ಬಜೆಟ್ ಮಲ್ಟಿಸ್ಟಾರರ್ ಬಾಂಬ್ ಸಿಡಿಸೋಕೆ ರೆಡಿಯಾಗಿದ್ದಾರೆ. ಕೇವಲ 6 ತಿಂಗಳ ಗ್ಯಾಪ್‌ನಲ್ಲಿ ‘ಧುರಂಧರ್’ ಸೀಕ್ವೆಲ್ ತಂದು ಬರೋಬ್ಬರಿ 3000 ಕೋಟಿ ಕೊಳ್ಳೆ ಹೊಡೆದಿದ್ದ ಈ ಮಾಸ್ಟರ್ ಮೈಂಡ್, ಈಗ ಬಾಲಿವುಡ್‌ನಿಂದ ಸೌತ್ ಇಂಡಿಯಾವರೆಗಿನ ಬಂಟರನ್ನು ಒಂದೇ ಸ್ಕ್ರೀನ್ ನಲ್ಲಿ ತರ್ತಿದ್ದಾರೆ. ಹಾಗಾದ್ರೆ ಈ ನಾಲ್ಕು ಸ್ಟಾರ್ಸ್ ಯಾರ್ಯಾರು ಅನ್ನೋದ್ರ ಡಿಟೇಲ್ಸ್‌ ಇಲ್ಲಿದೆ ನೋಡಿ…

ಧುರಂಧರ್’ ಸಕ್ಸಸ್ ನಂತರ ಆದಿತ್ಯ ಧರ್ ಜೊತೆ ರಣ್‌ವೀರ್ ಸಿಂಗ್ ಮತ್ತೆ ಜೋಡಿಯಾಗ್ತಾರೆ ಅನ್ನೋ ಗಾಸಿಪ್ಸ್ ಇತ್ತು. ಆದರೆ ಈಗ ಸಿಕ್ಕಿರೋ ಲೇಟೆಸ್ಟ್ ಕಿಕ್ ಕೊಡುವ ಸುದ್ದಿಯೇನೆಂದರೆ, ಈ ಸಿನಿಮಾದಲ್ಲಿ ಕೇವಲ ರಣ್‌ವೀರ್ ಮಾತ್ರವಲ್ಲ ಟಾಲಿವುಡ್‌ನ ಮಾಸ್ ಗ್ಯಾಂಗ್‌ಸ್ಟರ್ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್, ಮಲಯಾಳಂ ನಟ ಫಹಾದ್ ಫಾಸಿಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಲಿದ್ದಾರೆ. ಈ ನಾಲ್ಕು ಆಟೋಂಬಾಂಬ್‌ಗಳು ಒಂದೇ ಫ್ರೇಮ್‌ಗೆ ಬಂದರೆ ಚಿತ್ರಮಂದಿರಗಳ ಸ್ಕ್ರೀನ್ ಹರಿಯೋದು ಗ್ಯಾರಂಟಿ.

​ಈ ಬಿಗ್ ಪ್ರಾಜೆಕ್ಟ್‌ಗೆ ‘ಆರ್ಯಾವರ್ತ್’ ಅಂತ ಹೆಸರು ಇಡೋಕೆ ಪ್ಲಾನ್ ನಡೆದಿದ್ದು, ಹೀರೋಯಿನ್‌ಗಳಾಗಿ ದೀಪಿಕಾ ಪಡುಕೋಣೆ ಮತ್ತು ಯಾಮಿ ಗೌತಮ್ ನಟಿಸಲಿದ್ದಾರೆ ಎನ್ನಲಾಗ್ತಿದೆ. ವಿಶೇಷ ಅಂದ್ರೆ ರಣ್‌ವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಸೇರಿಯೇ ಈ ಮಲ್ಟಿಸ್ಟಾರರ್ ದೃಶ್ಯಕಾವ್ಯಕ್ಕೆ ಕೋಟಿ ಕೋಟಿ ಹಣ ಹೂಡಲಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟಿಂಗ್ ಕೆಲ್ಸ ಫುಲ್ ಜೋರಾಗಿ ನಡೀತಿದೆಯಂತೆ.

ಎಲ್ಲವೂ ಪಕ್ಕಾ ಪ್ಲಾನ್ ಪ್ರಕಾರ ನಡೆದರೆ 2027ರ ಬೇಸಿಗೆಯಲ್ಲಿ ಈ ಸಿನಿಮಾ ಸೆಟ್‌ಗೆ ಏರಲಿದ್ದು, 2028ರಲ್ಲಿ ವರ್ಲ್ಡ್‌ವೈಡ್ ಅದ್ದೂರಿಯಾಗಿ ಗ್ರ್ಯಾಂಡ್ ರಿಲೀಸ್ ಆಗಲಿದೆ. ಇಂಡಿಯನ್ ಚಿತ್ರರಂಗದ ಅತಿ ದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಎನಿಸಿಕೊಳ್ಳಲಿರೋ ಈ ಪ್ರಾಜೆಕ್ಟ್ ಆಫೀಶಿಯಲ್ ಅನೌನ್ಸ್‌ಮೆಂಟ್‌ಗಾಗಿ ಈಗ ಇಡೀ ಸಿನಿದುನಿಯಾ ಕಾತರದಿಂದ ಕಾಯ್ತಿದೆ. ರಣ್‌ವೀರ್ ಸಿಂಗ್ ಎನರ್ಜಿ, ಜೂನಿಯರ್ ಎನ್‌ಟಿಆರ್ ಮಾಸ್ ಖದರ್, ಫಹಾದ್-ಪೃಥ್ವಿರಾಜ್ ಆಕ್ಟಿಂಗ್ ಜಾದೂ… ಈ ಕಾಂಬಿನೇಷನ್ ನೆನೆಸಿಕೊಂಡ್ರೆನೇ ಸಿನ ಪ್ರಿಯರಿಗೆ ರೋಮಾಂಚನವಾಗ್ತಿದೆ. ಆದಿತ್ಯ ಧರ್ ಅವರ ಈ ಬಿಗ್ ಮಾಸ್ಟರ್ ಪ್ಲಾನ್ ಬಾಕ್ಸ್ ಆಫೀಸ್‌ನಲ್ಲಿ ಇನ್ನೆಷ್ಟು ಸಾವಿರ ಕೋಟಿ ಉಡೀಸ್ ಮಾಡುತ್ತೋ ಕಾದು ನೋಡಬೇಕು.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version