ಕಾಂತಾರ-1 ರಿಲೀಸ್‌ಗೆ ಇನ್ನೆರಡು ವಾರಗಳಷ್ಟೇ ಬಾಕಿಯಿದೆ. ಆದ್ರೆ ಹೊಂಬಾಳೆ ಫಿಲಂಸ್ ಮಾತ್ರ ಸಿನಿಮಾ ಪ್ರಮೋಷನ್ಸ್ ಮಾಡ್ತಿಲ್ಲ ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದ್ಯಾಕೆ ಅನ್ನೋದ್ರ ಜೊತೆಗೆ ಬರೋಬ್ಬರಿ 7 ಭಾಷೆಗಳಲ್ಲಿ 30ಕ್ಕೂ ಅಧಿಕ ದೇಶಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿರೋ ಕಾಂತಾರ ಕಹಾನಿ ಹಾಗೂ 125 ಕೋಟಿಗೆ ಓಟಿಟಿ ರೈಟ್ಸ್ ಸೋಲ್ಡ್ ಔಟ್ ಆಗಿರೋ ವಿಷಯ ಕೂಡ ಇಲ್ಲಿದೆ ನೋಡಿ.
- 7 ಭಾಷೆ.. 30 ದೇಶ.. 125 ಕೋಟಿಗೆ ಕಾಂತಾರ-1 OTT ರೈಟ್ಸ್
- ಸೆಪ್ಟೆಂಬರ್ 20ಕ್ಕೆ ಟ್ರೈಲರ್.. ರಿಲೀಸ್ ಬಳಿಕವೇ ಪ್ರಮೋಷನ್ಸ್
- ಬಿಡುಗಡೆಯಾದ 8 ವಾರಗಳ ಬಳಿಕ ಪ್ರೈಮ್‌ಗೆ ಕಾಂತಾರ ಎಂಟ್ರಿ
- 2500 ಪೇಯ್ಡ್ ಪ್ರೀಮಿಯರ್ ಶೋ.. 350 ಕೋಟಿ ಬ್ಯುಸಿನೆಸ್
ಕಾಂತಾರ.. ಚಿತ್ರ ಪ್ರೇಮಿಗಳಿಗೆ ಒಂದು ಹೊಸ ಅನುಭವ ನೀಡಿದಂತಹ ದೃಶ್ಯ ಚಿತ್ತಾರ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿ, ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದಂತಹ ಚಿತ್ರ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿತ್ತು. ಅದರ ಸಕ್ಸಸ್ ಕಾಂತಾರ ಪ್ರೀಕ್ವೆಲ್ ಮಾಡೋಕೆ ಸ್ಫೂರ್ತಿಯೂ ಆಗಿತ್ತು. ಅದೇ ಕಾರಣದಿಂದ ಸದ್ಯ ಕಾಂತಾರ-1 ಸಿದ್ಧವಾಗಿದೆ. ಈ ಬಾರಿ ನೋಡುಗರ ನಿರೀಕ್ಷೆಗೆ ಹಾಗೂ ತರ್ಕಕ್ಕೆ ನಿಲುಕದ ಸಾಕಷ್ಟು ವಿಷಯಗಳನ್ನ ಚಿತ್ರತಂಡ ದೊಡ್ಡ ಪರದೆಗೆ ತರುವ ಪ್ರಯತ್ನ ಮಾಡಿದೆ.
ಯೆಸ್.. ಅದಕ್ಕಾಗಿ ರಿಷಬ್ ಶೆಟ್ಟಿ ಹೆಂಡ್ತಿ, ಮಕ್ಕಳ ಸಮೇತ ಬೆಂಗಳೂರು ಖಾಲಿ ಮಾಡಿ ಕುಂದಾಪುರದಲ್ಲಿ ಬೀಡು ಬಿಟ್ಟಿದ್ದರು. ಸುಮಾರು 25 ಎಕರೆಯಲ್ಲಿ ಬೃಹತ್ ಸೆಟ್‌ಗಳನ್ನ ನಿರ್ಮಾಣ ಮಾಡಿ, ನೂರಾರು ಮಂದಿ ಕಲಾವಿದರು, ಸಾವಿರಾರು ಮಂದಿ ಜೂನಿಯರ್ ಆರ್ಟಿಸ್ಟ್‌ಗಳು ಹಾಗೂ ತಂತ್ರಜ್ಞರಿಂದ ಕಾಂತಾರ-1 ಕಟ್ಟಿದ್ದಾರೆ. ಜಸ್ಟ್ ಒಂದು ಮೇಕಿಂಗ್ ವಿಡಿಯೋದಲ್ಲಿ ಅದ್ರ ಅಸಲಿ ಗತ್ತು, ಗಮ್ಮತ್ತೇನು ಅನ್ನೋದ್ರ ಹಿಂಟ್ ನೀಡಿದ್ದಾರೆ. ದೈವಿಕ ಅಂಶಗಳಿಂದ ಕೂಡಿರಲಿರೋ ಕಾಂತಾರ-1ನಲ್ಲಿ ಬೆಳಕು ಹಾಗೂ ಅದರ ದರ್ಶನದ ಹಿಂದಿನ ರಹಸ್ಯ ಬಯಲು ಮಾಡಲಿದ್ದಾರೆ.
ಎಲ್ಲಾ ಓಕೆ.. ಚಿತ್ರತಂಡ ಯಾಕೆ ಪ್ರಮೋಷನ್ಸ್ ಮಾಡ್ತಿಲ್ಲ ಅನ್ನೋ ಮಾತಿದೆ. ಅದಕ್ಕೆ ಕಾರಣ.. ನಾವು ಸಿನಿಮಾ ಬಗ್ಗೆ ಮಾತಾಡೋದಕ್ಕಿಂತ ಸಿನಿಮಾ ರಿಲೀಸ್ ಬಳಿಕ ಎಲ್ಲರೂ ಮಾತನಾಡುವಂತಾಗಲಿ ಅನ್ನೋದು ಚಿತ್ರತಂಡದ ಅಸಲಿ ಯೋಚನೆ ಆಗಿದೆ. ಆದ್ರೆ ಹಂಡ್ರೆಡ್ ಪರ್ಸೆಂಟ್ ಶೂರ್ ಶಾಟ್ ಮೂವಿ ಮಾಡಿರೋ ಭರವಸೆ ಹಾಗೂ ನಂಬಿಕೆಯಲ್ಲಿದೆ ಕಾಂತಾರ-1 ಚಿತ್ರತಂಡ. ಮೊದಲು ರಿಲೀಸ್ ಆಗಲಿ.. ನಂತರ ಪ್ಯಾನ್ ಇಂಡಿಯಾ ಪ್ರಮೋಷನ್ಸ್ ಮಾಡ್ತೀವಿ ಅಂತಿದ್ದಾರೆ. ಆಗ ವಿಜಯಯಾತ್ರೆಯ ಮಜಾನೇ ಬೇರೆ.
ಅಂದಹಾಗೆ ಈ ಸಿನಿಮಾಗೆ ಪ್ರಮೋಷನ್ಸ್ ಬೇಕಿಲ್ಲ ಅನಿಸುತ್ತೆ. ಕಾರಣ ಕಾಂತಾರ ಬಿಗ್ಗೆಸ್ಟ್ ಸಕ್ಸಸ್. ಅದ್ರಲ್ಲಿದ್ದ ಕ್ವಾಲಿಟಿ ಕಥೆ, ಪಾತ್ರಗಳ ಜೀವಂತಿಕೆ ಹಾಗೂ ಮೇಕಿಂಗ್ ಇಂದಿಗೂ ನೋಡುಗರನ್ನ ಕಾಂತಾರ-1ಗೆ ಸೆಳೆಯುವಂತಹ ವಿಶೇಷ ಪವರ್ ಹೊಂದಿತ್ತು. ಹಾಗಾಗಿಯೇ ಕಾಂತಾರ-1 ಪ್ರೀ ರಿಲೀಸ್ ಬ್ಯುಸಿನೆಸ್ ಬರೋಬ್ಬರಿ 350ಕೋಟಿ ರೂಪಾಯಿ ಆಗಿದೆ ಎನ್ನಲಾಗ್ತಿದೆ. ಅಲ್ಲದೆ, ವಿಶ್ವದಾದ್ಯಂತ ಸುಮಾರು 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ 7 ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ತೆರೆಗಪ್ಪಳಿಸುತ್ತಿದೆ.
ಸುಮಾರು 2500 ಪೇಯ್ಡ್ ಪ್ರೀಮಿಯರ್ ಶೋಗಳನ್ನ ಮಾಡಲು ನಿರ್ಮಾಣ ಸಂಸ್ಥೆ ಪ್ಲ್ಯಾನ್ ಮಾಡಿದ್ದು, ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 20ಕ್ಕೆ ಅಥ್ವಾ 22ಕ್ಕೆ ರಿಲೀಸ್ ಆಗಲಿದೆಯಂತೆ. ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ, ಕಾಂತಾರ-1 ಓಟಿಟಿ ರೈಟ್ಸ್ ಬರೋಬ್ಬರಿ 125 ಕೋಟಿ ಬೃಹತ್ ಮೊತ್ತಕ್ಕೆ ಅಮೆಜಾನ್ ಪ್ರೈಮ್ ಪಾಲಾಗಿದೆ. ಹೌದು.. ಸಿನಿಮಾದ ಬಂಡವಾಳವನ್ನ ಜಸ್ಟ್ ಓಟಿಟಿ ಹಕ್ಕುಗಳ ಮಾರಾಟದಿಂದ ಗಳಿಸಿರೋ ನಿರ್ಮಾಣ ಸಂಸ್ಥೆ, ಆಂಧ್ರ- ತೆಲಂಗಾಣದ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನ 100 ಕೋಟಿಗೆ ಮಾರಿರೋದು ಹೆಮ್ಮೆಯ ವಿಷಯ.
ಕಾಂತಾರ-1 ಸಿನಿಮಾ ಇದೇ ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿಯಂದು ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಓಟಿಟಿಗೆ ಯಾವಾಗ ಬರಲಿದೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಪ್ರೈಮ್ ಜೊತೆ ನಿರ್ಮಾಣ ಸಂಸ್ಥೆ ಮಾಡಿಕೊಂಡಿರೋ ಒಪ್ಪಂದದ ಪ್ರಕಾರ, ಸಿನಿಮಾ ತೆರೆಕಂಡ 8 ವಾರಗಳ ನಂತ್ರ ಓಟಿಟಿಗೆ ಎಂಟ್ರಿ ಕೊಡಲಿದೆಯಂತೆ. ಒಟ್ಟಾರೆ ಈ ತರಹದ ವಿಷಯಗಳಿಂದ ಕಾಂತಾರ-1 ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್