ಕಾಂತಾರ ಮೂರನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್..ಬರೋಬ್ಬರಿ 235 ಕೋಟಿ ಗಳಿಕೆ

Untitled design 2025 10 05t183313.603

ಭಾರತೀಯ ಸಿನಿಮಾ ಜಗತ್ತಿನಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಸಿದೆ ‘ಕಾಂತಾರ’ ಚಾಪ್ಟರ್‌ 1. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 2ಕ್ಕೆ ಬಿಡುಗಡೆಯಾದ ಈ ಚಿತ್ರ, ಮೂರು ದಿನಗಳಲ್ಲಿ ಬರೋಬ್ಬರಿ 235 ಕೋಟಿ ರೂಪಾಯಿ ವರ್ಲ್ಡ್ ವೈಡ್ ಗ್ರಾಸ್ ಕಲೆಕ್ಷನ್ ದಾಖಲಿಸಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿತವಾದ ಈ ಚಿತ್ರದ ಸಂಪೂರ್ಣ ವರದಿ ಬಹಿರಂಗಪಡಿಸಿದ್ದು, ಸಿನಿಮಾ ಪ್ರೇಮಿಗಳಲ್ಲಿ ಉತ್ಸಾಹದ ಧೂಳ್‌ ಎಬ್ಬಿಸಿದೆ. 7 ಭಾಷೆಗಳಲ್ಲಿ ರಿಲೀಸ್ ಆದ ‘ಕಾಂತಾರ’ ಚಾಪ್ಟರ್‌ 1, 30ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲದಲ್ಲಿ ತೆರೆಗೆ ಬಂದಿದ್ದು, ಎಲ್ಲೆಡೆ ಹೌಸ್ ಫುಲ್ ಶೋಗಳೊಂದಿಗೆ ದಾಖಲೆ ಸೃಷ್ಟಿಸಿದೆ.

ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಮೂಲಕ ಮೂಡಿಬಂದ ‘ಕಾಂತಾರ’ ಚಾಪ್ಟರ್‌ 1, ತುಳುನಾಡಿನ ಗುಜ್ಜನಾಡಿನ ಜನಪದ ಸಂಸ್ಕೃತಿಯನ್ನು ಕಥಾ ಹಿನ್ನೆಲೆಯಾಗಿ ತಂದಿದೆ. ಚಿತ್ರದ ಕಥೆಯು ಭೂಮಿ, ಪ್ರಕೃತಿ ಮತ್ತು ದೇವತೆಗಳ ಸಂಬಂಧವನ್ನು ಆಳವಾಗಿ ಚಿತ್ರಿಸುತ್ತದೆ. ಗುಜ್ಜನಾಡಿನ ಭೂಮಿ ಹಕ್ಕುಗಳ ಸಂಘರ್ಷ, ಗುಲಿಗಜ್ಜು ದೇವತೆಯ ಪೂಜೆ ಮತ್ತು ಮಾನವ-ಪ್ರಕೃತಿಯ ಸಮ್ಮಿಲನವನ್ನು ಚಿತ್ರದ ಮೂಲಕ ರಿಷಬ್ ಶೆಟ್ಟಿ ಅದ್ಭುತವಾಗಿ ಚಿತ್ರಿಸಿದ್ದಾರೆ.

ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈಗಾಗಲೇ ‘ಕೆಜಿಎಫ್’ ಚಿತ್ರಗಳ ಮೂಲಕ ಮೆಗಾ ಹಿಟ್‌ಗಳನ್ನು ನೀಡಿದ್ದು, ‘ಕಾಂತಾರ’ ಇದರ ಮತ್ತೊಂದು ಮೈಲುಗಲ್ಲು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಗುಜ್ಜನಾಡಿನ ಸ್ಥಳೀಯ ಕಲಾವಿದರೊಂದಿಗೆ ತಯಾರಿಸಿ, ಜಾಗತಿಕ ಮಟ್ಟದಲ್ಲಿ ತಲುಪಿಸಿದ್ದಾರೆ. ಚಿತ್ರದ ರಿಲೀಸ್‌ಗೆ ಮುಂಚೆಯೇ 7 ಭಾಷೆಗಳಲ್ಲಿ (ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ) ಡಬ್ಬಿಂಗ್ ಮಾಡಿ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಯುರೋಪ್‌ನ ಹಲವು ದೇಶಗಳಲ್ಲಿ ತೆರೆಗೆ ಬಂದಿದೆ.

Exit mobile version