ಕಾಂತಾರ-3ಗೆ ಜೂನಿಯರ್ ಎನ್‌ಟಿಆರ್ ಹೀರೋ.. ಏನಿದು ಮೆಗಾ ಟ್ವಿಸ್ಟ್..?

ಡ್ರ್ಯಾಗನ್ ಬಳಿಕ ಕಾಂತಾರ-3..? ತಾರಕ್‌ಗೆ ರಿಷಬ್ ಡೈರೆಕ್ಷನ್..?

Untitled design 2025 08 05t160334.497

ಕರಾವಳಿಯಿಂದ ವಿಶ್ವ ಸಂಸ್ಥೆವರೆಗೆ ಎಲ್ಲರ ದಿಲ್ ದೋಚಿದ ಕಾಂತಾರ, ಇದೀಗ ಪ್ರೀಕ್ವೆಲ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನ ಹೊಚ್ಚ ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ. ಇಂಟರೆಸ್ಟಿಂಗ್ ಅಂದ್ರೆ ಕಾಂತಾರ-3ಗೆ ನಾಯಕನಟ ರಿಷಬ್ ಬದಲಿಗೆ ಎನ್‌ಟಿಆರ್ ಎನ್ನಲಾಗ್ತಿದೆ. ಈ ಕುರಿತ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ.

ಕಾಂತಾರ ಕಾಂತಾರ ಕಾಂತಾರ.. ಯಾವಾಗ ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿ ಕಾಂಬೋನಲ್ಲಿ ಈ ಸಿನಿಮಾ ತಯಾರಾಯ್ತೋ, ಅಂದಿನಿಂದ ಇಂದಿನವರೆಗೆ ಅದರ ಮಹಿಮೆ ಮತ್ತಷ್ಟು, ಮಗದಷ್ಟು ಎಚ್ಚುತ್ತಲೇ ಇದೆ. ಯೆಸ್.. 16 ಕೋಟಿ ಬಜೆಟ್‌‌ನಲ್ಲಿ ತಯಾರಾದ ಕಾಂತಾರ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 450 ಕೋಟಿ ಗಳಿಸೋ ಮೂಲಕ ದೈವಾಂಶದ ಗತ್ತು, ಗಮ್ಮತ್ತು ತೋರಿತ್ತು.

ಇದೀಗ ಕಾಂತಾರ ಪ್ರೀಕ್ವೆಲ್ ಕಾಂತಾರ-1 ಸದ್ದು ಜೋರಾಗಿದೆ. ಕಾಂತಾರಗಿಂತ ಸುಮಾರು 50 ಪಟ್ಟು ಜೋರಿರಲಿರೋ ಈ ಪ್ರೀಕ್ವೆಲ್‌ಗೆ ಸುಮಾರು 125 ಕೋಟಿ ಬೃಹತ್ ಮೊತ್ತದ ಹಣ ವ್ಯಯಿಸಲಾಗಿದೆ. ಇತ್ತೀಚೆಗೆ ಶೂಟಿಂಗ್ ಕಂಪ್ಲೀಟ್ ಮಾಡಿದ ರಿಷಬ್ ಶೆಟ್ರು, ಅದ್ರ ಮೇಕಿಂಗ್ ಹಾಗೂ ಸೆಟ್‌ನ ದೃಶ್ಯವೈಭವ ತೋರಿಸಿದ್ರು. ಇದು ನಿಜಕ್ಕೂ ಬೆಳಕಲ್ಲ, ದರ್ಶನ್ ಅನ್ನೋ ಡೈಲಾಗ್‌ಗೆ ಹೇಳಿ ಮಾಡಿಸಿದಂತಿದೆ. ಅಕ್ಟೋಬರ್ 2ಕ್ಕೆ ಬಿಗ್ ಸ್ಕ್ರೀನ್‌‌ ಮೇಲೆ ಆ ಬೆಳಕಿನ ದರ್ಶನ ಆಗಲಿದೆ.

ಕಾಂತಾರ ಆಯ್ತು, ಕಾಂತಾರ-1 ಕೂಡ ಆಯ್ತು. ಇವೆರಡರ ನಂತ್ರ ಕಾಂತಾರ-3 ಸಿನಿಮಾ ಕೂಡ ಆಗಲಿದೆ ಎನ್ನಲಾಗ್ತಿದೆ. ಕಾಂತಾರ ಸಿನಿಮ್ಯಾಟಿಕ್ ಯೂನಿವರ್ಸ್‌ ಇದಾಗಲಿದ್ದು, ಆ ದಟ್ಟ ಕಾನನದಲ್ಲಿರೋ ಸಾಕಷ್ಟು ಗೌಪ್ಯತೆಗಳ ಅನಾವರಣ ಮಾಡುವ ಕೆಲಸಕ್ಕೆ ಶೆಟ್ರು ನಾಂದಿ ಹಾಡಿದ್ದಾರೆ. ಹಾಗಾಗಿಯೇ ಕಾಂತಾರ-3 ಬರೋದು ಪಕ್ಕಾ ಎನ್ನಲಾಗ್ತಿದೆ. ಈ ಕಾಂತಾರ ಚಿತ್ರಗಳಿಂದ ಡಿವೈನ್ ಸ್ಟಾರ್ ಪಟ್ಟ ಪಡೆದಿರೋ ರಿಷಬ್ ಶೆಟ್ಟಿ ಕಾಂತಾರ-3ಗೆ ಹೀರೋ ಅಲ್ಲ ಅನ್ನೋದೇ ಮೇಜರ್ ಟ್ವಿಸ್ಟ್. ಹೌದು.. ನೆಕ್ಸ್ಟ್ ಕಾಂತಾರ ಫ್ರಾಂಚೈಸ್ ಚಿತ್ರಕ್ಕೆ ರಿಷಬ್ ಜಸ್ಟ್ ಡೈರೆಕ್ಟರ್ ಅಷ್ಟೇ ಎನ್ನಲಾಗ್ತಿದೆ.

ಹಾಗಾದ್ರೆ ಕಾಂತಾರ-3 ಹೀರೋ ಯಾರು ಅಂದ್ರೆ ಅದಕ್ಕೂ ಉತ್ತರ ಸಿದ್ಧವಾಗಿದೆ. ಈಗ ಓಡಾಡ್ತಿರೋ ಸುದ್ದಿಗಳ ಪ್ರಕಾರ ಜೂನಿಯರ್ ಎನ್‌ಟಿಆರ್ ಕಾಂತಾರ-3 ನಾಯಕನಟ. ಹೌದು.. ಕುಂದಾಪುರ ಮೂಲದ ಹೆಣ್ಣು ಮಗಳ ಮಗನಾಗಿರೋ ರಿಷಬ್‌ಗೆ ಕರಾವಳಿಯ ನಂಟಿದೆ. ಅಲ್ಲಿನ ದೇವಾಲಯಗಳು, ಆಚಾರ, ವಿಚಾರಗಳು, ನಡೆ, ನುಡಿ, ಸಂಸ್ಕಾರದ ಬಗ್ಗೆ ವಿಶೇಷ ಒಲವಿದೆ. ಅದಕ್ಕೆ ತಾಯಿ ಸಮೇತ ಬಂದು ರಿಷಬ್ ಫ್ಯಾಮಿಲಿ ಜೊತೆಗೂಡಿ ಕುಂದಾಪುರ, ಉಡುಪಿ, ಮಂಗಳೂರು ಸುತ್ತಿರೋದೇ ಜ್ವಲಂತ ಸಾಕ್ಷಿ.

ಅಲ್ಲದೆ, ಹೊಂಬಾಳೆ ಫಿಲಂಸ್ ಜೊತೆಗೂ ಒಳ್ಳೆಯ ನಂಟಿರೋ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್‌ಗೆ ಈ ಬಗೆಯ ಚಿತ್ರ ಹಾಗೂ ಪಾತ್ರ ಒಗ್ಗಲಿದೆ. ರಾಜಮೌಳಿಯ ತ್ರಿಬಲ್ ಆರ್, ದೇವರ ಸಿನಿಮಾಗಳಲ್ಲಿನ ಗೆಟಪ್ ಕಾಂತಾರ ಪಾತ್ರಕ್ಕೆ ಸನಿಹವಾಗಿದೆ. ಹಾಗಾಗಿ ಕಾಂತಾರ-3ಗೆ ತಾರಕ್ ಸೂಟಬಲ್ ಸ್ಟಾರ್ ನಟ. ಸದ್ಯ ಎನ್‌ಟಿಆರ್-ನೀಲ್ ಸಿನಿಮಾ ಡ್ರ್ಯಾಗನ್‌ನಲ್ಲಿ ಬ್ಯುಸಿ ಇರೋ ಎನ್‌ಟಿಆರ್, ಅದಾದ ಬಳಿಕ ಕಾಂತಾರ-3ಗೆ ಗ್ರೀನ್ ಸಿಗ್ನಲ್ ಕೊಡ್ತಾರಾ ಅನ್ನೋದು ಕಾದು ನೋಡಬೇಕಿದೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಒಂದಲ್ಲ ಎರಡಲ್ಲ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಜೊತೆ ಜೈ ಹನುಮಾನ್, ಬಾಲಿವುಡ್‌ನ ಸಂದೀಪ್ ಸಿಂಗ್ ಜೊತೆ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ನಾಗವಂಶಿ ಜೊತೆ ಐತಿಹಾಸಿಕ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ ಶೆಟ್ರು. ಈ ಮೂರೂ ಚಿತ್ರಗಳಿಗೆ ಕಮಿಟ್ ಆಗಿರೋದ್ರಿಂದ ಕಾಂತಾರ-3ಗೆ ಜಸ್ಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗ್ತಿದೆ. ಇದೇನಾದ್ರೂ ನಿಜವಾದ್ರೆ ಕಾಂತಾರ-3 ಕಾಂತಾರ ಫ್ರಾಂಚೈಸ್‌ನ ಎರಡೂ ಸಿನಿಮಾಗಳಿಗಿಂತ ದೊಡ್ಡ ಮೊತ್ತವನ್ನು ಗಳಿಸೋದ್ರಲ್ಲಿ ಅನುಮಾನವೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version