ಚಂದನ್‌ ಶೆಟ್ಟಿ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಕಿರುತೆರೆ ನಟಿ

111 (21)

ಕನ್ನಡ ಕಿರುತೆರೆಯಲ್ಲಿ ಮದುವೆ ಸುಗ್ಗಿ ಜೋರಾಗಿ ಮುಂದುವರಿದಿದೆ. ಇದೀಗ ‘ಸೀತಾ ವಲ್ಲಭ’ ಧಾರಾವಾಹಿಯ ಮೂಲಕ ಪ್ರಖ್ಯಾತರಾಗಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ತಮ್ಮ ನಿಶ್ಚಿತಾರ್ಥದ ಸುದ್ದಿ ಬಹಿರಂಗಪಡಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು, ಕೆಲ ದಿನಗಳ ಬಳಿಕ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಪ್ರೀತಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌‌ನಲ್ಲಿ ಗೆಳಯನಿಗಾಗಿ ಒಂದು ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹೀಗೆ ಹೇಳಿದ್ದಾರೆ.

“ಹೊಸ ಚಾಪ್ಟರ್ ಇಲ್ಲಿಂದ ಶುರು. ಹೆಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ? ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯು. ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮಿಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯು ಕಂದ. ನನ್ನ ಹೃದಯ ನಿನ್ನದು.”

ಇದರೊಂದಿಗೆ ಅವರು ತಮ್ಮ ಪ್ರೀತಿಯನ್ನು ಕವಿತೆಯ ಮೂಲಕವೂ ವ್ಯಕ್ತಪಡಿಸಿದ್ದಾರೆ:

“ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ”

ಯಾರು ಈ ಚಂದನ್ ಶೆಟ್ಟಿ?

ಸುಪ್ರೀತಾ ನಿಶ್ಚಿತಾರ್ಥ ಮಾಡಿಕೊಂಡಿರುವವರು ಚಂದನ್ ಶೆಟ್ಟಿ. ಅವರು ಮೂಲತಃ ಕೊಡಗಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್‌ಸ್ಟಾಗ್ರಾಂ ಪ್ರೊಫೈಲ್ ಪ್ರಕಾರ ಅವರು ಡಿಜಿಟಲ್ ಕ್ರಿಯೇಟರ್ ಹಾಗೂ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಅವರಿಬ್ಬರೂ ಬಹಳ ಸಮಯದಿಂದ ಪರಿಚಿತರಾಗಿದ್ದಾರೆ ಎನ್ನಲಾಗಿದೆ.

ಇವರಿಬ್ಬರದು ಲವ್ ಮ್ಯಾರೇಜ್‌ನೋ ಅಥವಾ ಅರೇಂಜ್ ಮ್ಯಾರೇಜ್‌ನೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಿಶ್ಚಿತಾರ್ಥ ಬಹಳ ಖಾಸಗಿಯಾಗಿ ನೆರವೇರಿದ್ದು, ಅವರಿಬ್ಬರೂ ಆಂತರಿಕವಾಗಿ ತಮ್ಮ ಸಂಬಂಧವನ್ನು ಗೌಪ್ಯವಾಗಿ ಉಳಿಸಿಕೊಂಡಿದ್ದರು ಎಂಬುದು ಸ್ಪಷ್ಟವಾಗಿದೆ.

ಸೀರಿಯಲ್‌ ನಟಿಸಿದ ಸುಪ್ರೀತಾ ಸತ್ಯನಾರಾಯಣ್

ಸುಪ್ರೀತಾ ಸತ್ಯನಾರಾಯಣ್ ತಮ್ಮ ಕರಿಯರ್‌ ಅನ್ನು ‘ಸೀತಾ ವಲ್ಲಭ’ ಧಾರಾವಾಹಿಯಿಂದ ಪ್ರಾರಂಭಿಸಿ, ನಂತರ ‘ಸರಸು’ ಧಾರಾವಾಹಿಯಲ್ಲಿ ಅಭಿನಯಿಸಿದರು. ಧಾರಾವಾಹಿಗಳಲ್ಲಿಯೇ ಹೆಚ್ಚು ಪ್ರಭಾವ ಬೀರಿದ ಅವರು, ನಂತರ ಸಿನಿಮಾ ಕ್ಷೇತ್ರದತ್ತ ಮುಖಹಾಕಿದರು. ‘ಮೆಲೋಡಿ ಡ್ರಾಮಾ’ ಎನ್ನುವ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version