ಟೈಟಲ್‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿರೋ ಹಲ್ಕಾ ಡಾನ್ ಅಡ್ಡಾಗೆ ಇದೀಗ ಬಹುಭಾಷಾ ಸ್ಟಾರ್ ಒಬ್ರು ಎಂಟ್ರಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮೋಸ್ಟ್ ಡಿಮ್ಯಾಂಡಿಂಗ್ ನಟ ಆಗಿರೋ ಇವರು, ಪ್ರಮೋದ್ ಪಂಜು ಪ್ರಾಜೆಕ್ಟ್‌ಗೆ ಟ್ರಂಪ್ ಕಾರ್ಡ್ ಸ್ಟಾರ್ ಆಗ್ತಿದ್ದಾರೆ. ಯಾರು ಆ ಸ್ಟಾರ್ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಇಲ್ಲಿದೆ ಕಲರ್‌ಫುಲ್ ಆನ್ಸರ್.
ಟಗರ, ಸಲಗ ಹಾಗೂ ಯುಐ ಚಿತ್ರಗಳನ್ನು ನಿರ್ಮಿಸಿರೋ ಕೆ. ಪಿ. ಶ್ರೀಕಾಂತ್ ಹಲ್ಕಾ ಡಾನ್ ಅನ್ನೋ ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಬಾಂಡ್ ರವಿ, ಸಲಾರ್ ಖ್ಯಾತಿಯ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಹಲ್ಕಾ ಡಾನ್ ಅಂಗಳಕ್ಕೆ ಬಹುಭಾಷಾ ನಟ ಜಾನ್ ವಿಜಯ್ ಎಂಟ್ರಿ ಕೊಟ್ಟಿದ್ದಾರೆ.
‘ಹಲ್ಕಾ ಡಾನ್’ ಅಡ್ಡಾಗೆ ಜಾನ್ ವಿಜಯ್ ಖಡಕ್ ಎಂಟ್ರಿ
ಪೃಥ್ವಿ, ಗಜಕೇಸರಿ ಬಳಿಕ ಕನ್ನಡದಲ್ಲಿ ಮೂರನೇ ಸಿನಿಮಾ..!
ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸಾಕಷ್ಟು ಚಿತ್ರರಂಗಗಳಲ್ಲಿ ಅಭಿನಯಿಸಿರುವ ಜಾನ್ ವಿಜಯ್, ಹಲ್ಕಾ ಡಾನ್ ಅಡ್ಡಾಗೆ ಅಡಿಯಿಟ್ಟಿರೋದು ಇಂಟರೆಸ್ಟಿಂಗ್. ಅಂದಹಾಗೇ ಜಾನ್ ಕನ್ನಡಕ್ಕೆ ಬರ್ತಿರೋದು ಇದೇ ಮೊದಲಲ್ಲ. ಈ ಹಿಂದಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಹಾಗೂ ಯಶ್ ಅವರ ಗಜಕೇಸರಿ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು. ಇದೀಗ ಬಹಳ ವರ್ಷಗಳ ನಂತ್ರ ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ.
ಸಲಾರ್ ಹೀರೋ..ಟಗರು ಪ್ರೊಡ್ಯೂಸರ್..ಮೆಗಾ ಕಾಂಬೋ
ಪ್ರಮೋದ್-ಸಾಯಿಕುಮಾರ್‌ಗೆ ಜಾನ್ ವಿಜಯ್ ಸಾಥ್..!!
ಒಂದು ಸ್ಪೆಷಲ್ ಪೋಸ್ಟರ್ ಮೂಲಕ ಜಾನ್ ವಿಜಯ್ ರನ್ನ ಚಿತ್ರತಂಡ ಸ್ವಾಗತಿಸಿದೆ. ಕೂಲಿಂಗ್ ಗ್ಲಾಸ್ ಹಾಕಿ, ಸಿಗರೇಟ್ ಸಿದುತ್ತಾ, ರಗಡ್ ಆಗಿ ಜಾನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚಲ ಅನ್ನೋ ಯುವ ನಿರ್ದೇಶಕ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಸಾಯಿ ಕುಮಾರ್ ಫ್ಯಾನ್ ಅನ್ನೋ ಟ್ಯಾಗ್‌ಲೈನ್ ಕೂಡ ಇದೆ. ವಿಶೇಷ ಅಂದ್ರೆ ಡೈಲಾಗ್ ಕಿಂಗ್ ಸಾಯಿಕುಮಾರ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿ. ಹರಿಕೃಷ್ಣ ಸಂಗೀತ, ಸತ್ಯಾ ಹೆಗಡೆ ಸಿನಿಮಾಟೋಗ್ರಫಿ ಹಲ್ಕಾ ಡಾನ್‌ಗಿದೆ. ಟೈಟಲ್‌ನಿಂದ ಹಿಡಿದು ಹಲ್ಕಾ ಡಾನ್ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದು, ಮುಹೂರ್ತ ಚಂದನವನದ ಸ್ಟಾರ್‌ಗಳ ಸಮಾಗಮದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಟೀಸರ್ ಕೂಡ ಸಖತ್ ಇಂಪ್ರೆಸ್ಸೀವ್ ಆಗಿತ್ತು. ಇದೀಗ ಜಾನ್ ವಿಜಯ್ ಆಗಮನದಿಂದ ಹಲ್ಕಾ ಡಾನ್ ಹವಾ ಮತ್ತಷ್ಟು ಹೆಚ್ಚಿದೆ.
