ಕನ್ನಡ ಭಾಷೆ ವಿಚಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದು, ಥಗ್ ಲೈಫ್ ಸಿನಿಮಾದ ಕರ್ನಾಟಕ ರಿಲೀಸ್‌ಗೆ ಸ್ವತಃ ತಾವೇ ಎಡವಟ್ ಮಾಡಿಕೊಂಡಿದ್ರು ಕಮಲ್ ಹಾಸನ್. ಇದೀಗ ಚೆನ್ನೈಗೆ ತೆರಳಿದ್ದ ಧ್ರುವ ಕೆಡಿ ಚಿತ್ರತಂಡದ ವಿರುದ್ಧ ಕ್ಯಾತೆ ತೆಗೆದ ತಮಿಳಿಗರಿಗೆ ಖಡಕ್ ಉತ್ತರ ಕೊಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ ಜೋಗಿ ಪ್ರೇಮ್.
- KDಗೆ ಕ್ಯಾತೆ ತೆಗೆದ ತಮಿಳಿಗರು.. ಪ್ರೇಮ್ ಖಡಕ್ ಉತ್ತರ
- ಚೆನ್ನೈನಲ್ಲಿ ಅವಮಾನಿಸಲು ಮುಂದಾದ ತಮಿಳು ಮಂದಿ
- ಸ್ವಂತ ತಾಯಿಯನ್ನ ಬೈದ್ರೆ ಯಾರಾದ್ರೂ ಸುಮ್ಮನಿರ್ತಾರಾ?
- ಬ್ಯಾನ್ ಆಗಿದ್ದು ಕಮಲ್ ಚಿತ್ರ.. ಎಲ್ಲಾ ತಮಿಳು ಚಿತ್ರಗಳಲ್ಲ
ಯಾರು ರೀ ಜೋಗಿ ಪ್ರೇಮ್‌ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂದಿದ್ದು..? ಕನಕಪುರದ ರೈತನ ಮಗ ಪ್ರೇಮ್‌ಗೆ ಬೇರೆ ಭಾಷೆಗಳು ಬಾರದಿದ್ದರೂ, ಅವರ ಭಾವನೆಗಳನ್ನ ಅರ್ಥೈಸಿಕೊಳ್ಳೋ ಮನಸ್ಸಿದೆ. ಸದ್ಯ ತನ್ನ ಕೆಡಿ ಸಿನಿಮಾದ ಟೀಸರ್ ಲಾಂಚ್‌ಗಾಗಿ ಮುಂಬೈ, ಹೈದ್ರಾಬಾದ್ ಮುಗಿಸಿ, ಕೊಚ್ಚಿಗೂ ಮುನ್ನ ಚೆನ್ನೈಗೆ ತೆರಳಿದ್ರು. ಅಲ್ಲಿ ಕಮಲ್ ಹಾಸನ್ ಥಗ್ ಲೈಫ್ ಸಿನಿಮಾನ ಬ್ಯಾನ್ ಮಾಡಿದ್ದ ಕನ್ನಡಿಗರ ಧೋರಣೆಯನ್ನ ತಮಿಳು ಪತ್ರಕರ್ತರು ಪ್ರಶ್ನಿಸಿದರು. ಕೆಡಿ ವಿರುದ್ಧ ಕ್ಯಾತೆ ತೆಗೆಯಲು ಮುಂದಾದ್ರು.